ಬೆಂಗಳೂರು : ಬೆಂಗಳೂರಿನಲ್ಲಿ ತಪ್ಪದ ಸರಣಿ ರಸ್ತೆ ಅಪಘಾತಗಳು, ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ನಡೆಯುತ್ತಿವೆ ಸರಣಿ ಅಪಘಾತಗಳು. ಇಂತಹ ಘಟನೆ ನಿನ್ನೆ ನಡೆದಿದೆ. ಕೆಎಸ್ಆರ್ಟಿಸಿ ಬಸ್ ಚಾಲಕನ ಯಡವಟ್ಟಿಗೆ ನಡದೋಯ್ತು ಅಪಘಾತ. ಏಕಾಏಕಿ ಬ್ರೇಕ್ ಹಾಕಿದ ಚಾಲಕ, ಬಸ್ ಹಿಂಬದಿಯಿಂದ ಕಾರು ಡಿಕ್ಕಿಯಾಯಿತು, ಕಾರಿಗೆ ಹಿಂದೆ ಬರುತ್ತಿದ್ದ ಬೈಕ್ ಸವಾರರು ಡಿಕ್ಕಿಯಾಗಿದ್ದು ರಸ್ತೆಗೆ ಬಿದ್ದಿದ್ದಾರೆ . ಬೈಕ್ ಸವಾರ ಬಿದ್ದ ರಭಸಕ್ಕೆ ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
![]()
