ಚಿತ್ರದುರ್ಗ: ಚಾಲಕ ನಿಯಂತ್ರಣ ತಪ್ಪಿ ಡಿವೈಡರ್ಗೆ ಬೈಕ್ ಡಿಕ್ಕಿಯಾಗಿರುವ ಘಟನೆ ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನ ಬಾಲೇನಹಳ್ಳಿ ಬಳಿ ನಡೆದಿದೆ, ಘಟನೆಯಲ್ಲಿ ಬೈಕ್ ಸವಾರ ಸೇರಿ ಇಬ್ಬರು ಸಾವನ್ನಪ್ಪಿದ್ದು, 2 ವರ್ಷದ ಮಗು ಗಂಭೀರಗೊಂಡಿದೆ. ಘಟನೆಯಲ್ಲಿ ಮಹಮ್ಮದ್ ಖಲೀಲ್ (25), ಸ್ಥಳದಲ್ಲೇ ಸಾವನ್ನಿಪ್ಪಿದ್ದು, ತಾಯಿ ನೂರ್ ಜಾನ್ ಗಂಭಿರವಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ತಾಯ ಮೃತಪಟ್ಟಿದ್ದು, 2 ವರ್ಷದ ಮಗು ಜಿಲ್ಲಾಸ್ಪತ್ರೆಗೆ ದಾಖಿಲಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ತಳಕ್ಕೆ ಹಿರಿಯೂರು ಗ್ರಾಮಾಂತರ ಠಾಣಾ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

