

ಕಾಲಾತೀತ ,ಮೌಲ್ಯಾಧಾರಿತ ಆದರ್ಶವನ್ನೊಳಗೊಂಡ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯಕ್ರಮಕ್ಕೆ ಸೇರಿಸಬೇಕು. ಕೇಂದ್ರ ಉಕ್ಕು-ಕೈಗಾರಿಕಾ ಸಚಿವರಾದ ಹೆಚ್ಡಿಕೆ ಅವರು ಕೇಂದ್ರದ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮೌಲ್ಯಾಧಅರಿತ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಕಾಲ ಕಳೆದಂತೆ, ಮಕ್ಕಳಲ್ಲಿ ಮೌಲ್ಯ, ಆದರ್ಶಗಳನ್ನು ಮೂಡಿಸಲು , ಭಗವದ್ಗೀತೆಯಿಂದ ಆಯ್ದ ಬೋಧನೆಗಳನ್ನು ಪರಿಚಯ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಶಕ್ತಿ, ಚಿಂತನೆಯ ಸ್ಪಷ್ಟನೆ, ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಭಾರತವು ಹಿಂದಿನಿಂದಲೂ ಸಂತರು, ಜ್ನಾನ ಮತ್ತು ಶಾಶ್ವತ ನಾಗರಿಕ ಮೌಲ್ಯವನ್ನಾಧಾರಿತ, ಸನಾತನ ಧರ್ಮ, ಶ್ರೀಕೃಷ್ಣ ಅರ್ಜುನನಿಗೆ ಬೋಧನೆ ಮಾಡಿದ ಪರಮ ಜ್ನಾನವಾದ ಭಗವದ್ಗೀತೆಯು ನಿಷ್ಕಾಮ ಕರ್ಮ, ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ಕರ್ತವ್ಯವನ್ನು ನಿರ್ವಹಿಸುವ ಮಹತ್ವವನ್ನು ಒತ್ತಿ ಹೇಳುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿಯವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಗವದ್ಗೀತೆ ಪಠಣೆ ಕಾರ್ಯಕ್ರಮದಲ್ಲಿ ಭಾಗವಾಹಿಸಿದ್ದರು. ಹಿಂದೂ ಧರ್ಮದ ಮೂ ತತ್ವವನ್ನು ಎತ್ತಿ ಹಿಡಿದು ವಸುದೈವ ಕುಟುಂಬ ಪರಿಕಲ್ಪನೆಯ ಬಗ್ಗೆ ಒತ್ತಿ ಹೇಳಿದರು. ಶಿವಮೊಗ್ಗದಲಲ್ಇ ನಡೆದ ಗೀತಾ ಪಠಣ ಕಾರ್ಯಕ್ರಮದಲ್ಲಿ ಹಾಜರಾಗುವ ಸೌಭಾಗ್ಯ ನನಗೂ ಸಿಕ್ಕಿತ್ತು. ಗೀತೆಯನ್ನು ಪಠಿಸಲು ಮತ್ತು ಸಂಬಂಧಿಸಿದ ಆಳವಾದ ಶಕ್ತಿ ಮತ್ತು ಭಕ್ತಿಯನ್ನು ಅನುಭವಿಸಲು ಒಂದು ಅದ್ಭುತ ವಅವಕಾಶವನ್ನು ನೀಡಿತು .
ಭಾರತಕ್ಕೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್ರಿಗೆ ಪ್ರಧಾನಿ ಮೋದಿ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು. ಇದನ್ನು ಸಚಿವ ಹೆಚ್ಡಿಕೆ ಅವರು ಗೌರವಿಸಿದ್ದಾರೆ. ಮನುಕುಲದ ದಾರಿದೀಪ,ಅರಿವಿನ ಬೆಳಕಾಗಿರುವ ಭಗವದ್ಗೀತೆಯನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯವಲ್ಲದೆ, ಶಿಕ್ಷಣದ ಪ್ರತೀ ಹಂತದಲ್ಲೂ ಪಠ್ಯವಾಗಬೇಕು ಎಂಬುದು ನನ್ನ ಆಶಯ . ಈ ಬಗ್ಗೆ ಅಗತ್ಯ ಕ್ರಮ ವಹಿಸುವ ಬಗ್ಗೆ ನಣಾಉ ಕೇಂದ್ರ ಶಿಕ್ಷಣ ಮಂತ್ರಿಗಳಾದ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ.
