
ಬೆಂಗಳೂರು : ಗ್ಯಾಸ್ ಗೀಸರ್ ಸೋರಿಕೆಯಾಗಿ ನವ ವಿವಾಹಿತೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಉತ್ತರ ತಾಲ್ಲೂಕಿನ ತೋlಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ. ಪತಿ ಕೆಲಸಕ್ಕೆ ಹೋದ ಬಳಿಕ ಯುವತಿ ಸ್ನಾನಕ್ಕೆ ತೆರಳಿದ ಭೂಮಿಕ(24), ಗ್ಯಾಸ್ ಗೀಸರ್ ಸೋರಿಕೆಯಿಂದಾಗು ಯುವತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ತಡವಾಗಿ ಬೆಳಕಿಗೆ ಬಂದ ಘಟನೆ, ಮೃತ ಯುವತಿ ಭೂಮಿಕಾ ಹಾಸನ ಮುಲದವರಾಗಿದ್ದು, ನಾಲ್ಕು ತಿಂಗಳ ಹಿಂದೆಯಷ್ಟೇ ಕೃಷ್ಣಮೂರ್ತಿ ಎಂಬುವರನ್ನು ಮದುವೆಯಾಗಿದ್ದು, ಬಳಿಕ ಬೆಂಗಳೂರಿನ ತೋಟದ ಗುಡ್ಡದಹಳ್ಳಿಯಲ್ಲಿ ವಾಸವಾಗಿದ್ದರು. ಪತಿ ಕೆಲಸಕ್ಕೆ ಹೋದ ಬಳಿಕ ಭೂಮಿಕ ಸ್ನಾನಕ್ಕೆ ಹೋಗಿದ್ದ ವೇಳೆ ಗ್ಯಾಸ್ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ಈ ಅವಘಡ ಸಂಭವಿಸಿದೆ. ಪತಿ ಕೆಲಸ ಮುಗಿಸಿ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಗ್ಯಾಸ್ ಗೀಜರ್ ಸೋರಿಕೆಯಾಗಿದ್ದ ವೇಳೆ ಸ್ನಾನದ ಗೃಹದ ಕಿಟಕಿ ಬಾಗಿಲು ಕೂಡ ಕ್ಲೋಸ್ ಆಗಿದ್ದು, ದುರ್ಘಟನೆಗೆ ಕಾರಣವಾಗಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.
