ಚಿಕ್ಕೋಡಿ : ನಸುಕಿನ ಜಾವ ಮನೆಯೊಂದರ ಮೇಲೆ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕನ್ನ ಹಾಕಲು ಯತ್ನಿಸಿದ ಖದೀಮರು. ಪೊಲೀಸ್ ವಾಹನ ಕಂಡು ದಿಕ್ಕಾಪಾಲಾದ ದರೋಡೆಕೋರರು. ಓರ್ವ ವ್ಯಕ್ತಿಯಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ. ಸಿಸಿ ಟಿವಿಯಲ್ಲಿ ಸೆರೆಯಾಯ್ತು ಝಲ್ ಎನಿಸುವ ದೃಶ್ಯ. ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.

