
ದಾವಣಗೆರೆ: ಕೆಲ ದಿನಗಳ ಹಿಂದೆ ದಾವಣಗೆರೆಯಲ್ಲಿ ಮುಂಜಾನೆ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಎರಡು ರಾಟ್ವೀಲರ್ ನಾಯಿಗಳು ಮಹಿಳೆ ಮೇಲೆ ದಾಳಿ ಮಾಡಿದ್ದು, ನಾಯಿಗಳು ಕಚ್ಚಿದ ತೀವ್ರತೆಗೆ ಸಾವಿಗೀಡಾದ ಮಹಿಳೆ . ಪ್ರಕರಣ ದಾಕಲಾದ 24 ಗಂಟೆಗಳಲ್ಲಿ ನಾಯಿ ಮಾಲೀಕನನ್ನು ಬಂಧಿಸಲಾಗಿದೆ.
ಅನಿತಾ ಕೋಮ್ ಎಂಬ ಯುವತಿ ಹೊನ್ನೂರು ಮಾರ್ಗವಾಗಿ ರಾತ್ರಿ 12:30-2:30ರ ವೇಳೆ ನಡೆದು ಹೋಗುತ್ತಿದ್ದ ಮಹಿಳೆ, ರಾಷ್ಟ್ರೀಯ ಹೆದ್ದಾರಿ-48ರ ಬಳಿ ತಮ್ಮ ಮನೆಯ ಸಮೀಪ ನಾಯಿಗಳು ದಾಲಿ ನಡೆಸಿದ್ದವು. ನಾಯಿಗಳ ಮಾರಣಾಂತಿಕ ದಾಳಿಗೆ ಮುಖ,ಕೈ-ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಪೊಲೀಸರ ಸಹಾಯದಿಂದ ಸಂತ್ರಸ್ತೆಯನ್ನು ರಕ್ಷಿಸಿ ದಾವಣಗೆರೆಯ ಸಿಜಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ.
