ಕೊಡಗು : ದುಬಾರೆ ಸಾಕಾನೆ ಶಿಬಿರದಲ್ಲಿ ಸಾಕಾನೆ ತಕ್ಷ ಹೆಸರಿನ ಆನೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಒಂದು ವರ್ಷದ ಹಿಂದೆ ರಾಮನಗರದಲ್ಲಿ ಸೆರೆಯಾಗಿದ್ದ, ತಕ್ಷ ಹೆಸರಿನ ಆನೆಯನ್ನು ದುಬಾರೆ ಸಾಕಾನೆ ಶಿಬಿರದಲ್ಲಿ ಬಿಟ್ಟಿದ್ದು, ತಕ್ಷ ಹೆಸರಿನ ಆನೆಯನ್ನು ಪಳಗಿಸಿದ್ದ ಮಾವುತ. 4 ತಿಂಗಳ ಹಿಂದೆ ಕ್ರಾಲ್ನಿಂದ ಹೊರ ತಂದಿದ್ದ ಮಾವುತ, ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದ ಆನೆ, ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ಆನೆಗೆ ಚಿಕಿತ್ಸೆ ನೀಡಿದ್ದರು, ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ತಕ್ಷ ಆನೆ ಮೃತಪಟ್ಟಿದೆ. ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ತದ ನಂತರ ಅರಣ್ಯ ಇಲಾಖೆಯಿಂದ ಶವಸಂಸ್ಕಾರ ಮಾಡಿದ್ದಾರೆ.
