ಬಾಗಲಕೋಟೆ :ಬಸ್ ಹತ್ತುವ ವೇಳೆ ಮಹಿಳೆ ಬ್ಯಾಗ್ನಿಂದ ಮಾಂಗಲ್ಯ ಸರ ಕಳ್ಳತನವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮಲ್ಲಾಪುರ ಗ್ರಾಮದ ಬಸಮ್ಮ ರಾಜನಾಳ ಎಂಬ ಮಹಿಳೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ತನ್ನ 40ಗ್ರಾಂ ತೂಕದ ಬಂಗಾರದ ಸರ ಕಳ್ಳತನವಾಗಿದೆ. ಖದೀಮರು ತಮ್ಮ ಚಾಣಾಕ್ಷತನದಿಂದ ಬ್ಯಾಗ್ನ ಜಿಪ್ ತೆಗೆದು ಮೆಲ್ಲನೆ ಸರವನ್ನು ಎಗರಿಸಿದ್ದಾರೆ. ಬಸ್ ಹತ್ತಿ ಸೀಟ್ನಲ್ಲಿ ಕೂಲಿತು ಬ್ಯಾಗ್ ನೋಡಿದಾಗ ಸರ ಕಳ್ಳತನವಾಗಿದೆ ಎಂಬುದು ಗೊತ್ತಾಗಿದೆ. ಬಸ್ನಲ್ಲಿ ಕಿರುಚಿ ಹುಡುಕಿದಾಗ ಸಿಗದಿದ್ದಾಗ ಮಹಿಳೆ ತಕ್ಷಣ ಇಳಕಲ್ ನಗರದ ಪೊಲೀಸ್ ಠಾಣೆಗೆ ಬಸ್ನ್ನು ತಂದು, ನಂತರ ಪೊಲೀಸ್ ಅಧಿಕಾರಿಗಳು ಬಸ್ನ ಪ್ರಯಾಣಿಕರನ್ನು ಪರಿಶೀಲಿಸಿದರೂ ಚಿನ್ನ ಪತ್ತೆಯಾಗಿಲ್ಲ, ಇನ್ನು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
