
ಬೆಂಗಳೂರು : ಇಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ದಿ ಡೆವಿಲ್ ಸಿನೆಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಬೆಂಗಳೂರು ಸೇರಿದಂತೆ ಹಲವಾರು ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಅದ್ದೂರು ಸಡಗರ. ಬೆಂಗಳೂರಿನ ನರ್ತಕಿ, ಮೆಜೆಸ್ಟಿಕ್ ಸೇರಿ ರಾಝ್ಯದ ಹಲವಾರು ಚಿತ್ರಮಂದಿರಗಳಲ್ಲಿ ಡೆವಿಲ್ ಸಿನಿಮಾ ಶೋ ಆರಂಭವಾಗಿದೆ. ಅಭಿಮಾನಿಗಳು ಕೂಡಾ ತಮ್ಮ ನೆಚ್ಚಿನ ನಟನ ಸಿನೆಮಾ ನೋಡಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾದು, ಇಂದು ಅದರ ಸಂಭ್ರಮವನ್ನು ಹೊರ ಹಾಕುತ್ತಿದ್ದಾರೆ.
ಬೆಳ್ಳ ಬೆಳಗ್ಗೆ ಥಿಯೇಟರ್ ಬಳಿ ಅಭಿಮಾನಿಗಳು ಹಬ್ಬದ ರೀತಿ ಸಂಭ್ರಮಿಸುತ್ತಿದ್ದಾರೆ, ಅಲ್ಲದೆ ದರ್ಶನ್ ಡೆವಿಲ್ ಸಿನಿಮಾಗೆ ಅನೇಕ ಸಾಂಡಲ್ವುಡ್ ನಟ–ನಟಿಯರಿಂದ ಸಿನಿಮಾಗೆ ಶುಭ ಕೋರಿದ್ದಾರೆ. ನಟಿ ರಚಿತಾ ರಾಮ್ ,ರಿಶಬ್ ಶೆಟ್ಟಿ, ರಚನಾ ರೈ, ಶಿವರಾಜ್ಕುಮಾರ್ ಸೇರಿ ಹಲವು ಸೆಲೆಬ್ರೆಟಿಗಳಿಂದ ದರ್ಶನ್ ಸಿನಿಮಾಗೆ ವಿಷ್ ಮಾಡಿದ್ದಾರೆ.
ನಟ, ಖೈದಿ ದರ್ಶನ್ ಮುಂಜಾನೆ ಎದ್ದು ದೇವರಿಗೆ ಕೈ ಮುಗಿದು ಟಿವಿ ಮೂಲಕ ಚಿತ್ರವನ್ನು ವೀಕ್ಷಿಸಿ ಮತ್ತು ಅಭಿಮಾನಿಗಳ ಸಡಗರವನ್ನು ನೋಡಿ ದರ್ಶನ್ ಕಣ್ತುಂಬಿಕೊಂಡಿದ್ದಾರೆ. ಅಭಿಮಾನಿಗಳ ಸಮಭ್ರಮ ನೋಡಿ ಭಾವುಕರಾಗಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ಪುತ್ರ ವಿನೀಶ್ ಮೊದಲ ಟಿಕೆಟ್ ಖರೀದಿಸಿ ಅಭಿಮಾನಿಗಳೊಟ್ಟಿಗೆ ಫಸ್ಟ್ ಡೈ ಫಸ್ಟ್ ಶೋ ಚಿತ್ರ ವೀಕ್ಷಿಸಿದ್ದಾರೆ. ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಅಭಿಮಾನಿಗಳಿಂದ ಚಿತ್ರಮಂದಿರಗಳ ಆವರಣದಲ್ಲಿ ಸಿಹಿ ವಿತರಣೆ ಮಾಡಿ ಪಟಆಕಿ ಸಿಡಿಸ ಸಂಭ್ರಮಿಸಿದ್ದಾರೆ. ಮತ್ತು ಕೆಲ ಚಿತ್ರಮಂದಿರಗಳಲ್ಲಿ ಬಿರಿಯಾನಿ ವಿತರಿಸಿ ಸಂಭ್ರಮಿಸಿದ್ದಾರೆ.
