
ಚಿತ್ರದುರ್ಗ : ಕುರಿ ಮೇಯಿಸಲು ಹೋದಾಗ ಚೆಕ್ಡ್ಯಾಂ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಗುಡ್ಡದ ರಂಗವನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕುರಿ ಮೇಯಿಸಲು ಹೋದ ವಿಶ್ವನಾಥ್ (23) ಮತ್ತು ಮಾರುತಿ(20) ಎಂಬ ಯುವಕರುಇ ಕುರಿಗಳನ್ನು ತೊಳೆಯಲು ಚೆಕ್ ಡ್ಯಾಂನಲ್ಲಿ ಇಳಿದಿದ್ದ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬದಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡಿದಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
