
ಅಥಣಿ : ಛತ್ರಪತಿ ಶಿವಾಜಿ ಮಹಾರಾಜರು ಯುಗಪುರುಷರು ಅವರು ರೈತರ ರಾಜರೆಂದೇ ಖ್ಯಾತರಾಗಿದ್ದಾರೆ . ಅವರಲ್ಲಿ ಮಹಿಳೆಯರ ಕುರಿತು ಅಪಾರ ಪವಿತ್ರ ಗೌರವವಿತ್ತು. ಶತ್ರು ಸೈನ್ಯದ ಮಹಿಳೆಯರ ಗೌರವವನ್ನೂ ಕಾಪಾಡಿದ ಶ್ರೇಯಸ್ಸು ಸಲ್ಲುತ್ತದೆ. ಸೂರ್ಯ- ಚಂದ್ರರು ಇರುವವರೆಗೂ ಅವರ ಕೀರ್ತಿ ಎಂದೆಂದಿಗೂ ಇರುತ್ತದೆ. ಅಂತಹ ಮಹಾನ್ ವ್ಯಕ್ತಿ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿಯ ಉದ್ಘಾಟನೆ ಅಥಣಿಯ ಶಿವಯೋಗಿಗಳ ಪವಿತ್ರ ನೆಲದಲ್ಲಿ ಜ್ಯೋತಿ ರಾಜ ಸಿಂಧೇರವರ ಅಮೃತ ಹಸ್ತದಿಂದ ಇದೇ, 14 ರಂದು ರವಿವಾರ ಅಥಣಿಯ ಶಿವಾಜಿ ವೃತ್ತದಲ್ಲಿ ವಿಜೃಂಭಣೆಯಿಂದ ನೆರವೇರಲಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಈ ವೇಳೆ ,ಉಜ್ವಲಸಿಂಗ ಪವಾರ ದೇಸಾಯಿ, ವಿಕ್ರಾಂತ ಪವಾರ ದೇಸಾಯಿ, ಮಯೂರ ಪವಾರ ದೇಸಾಯಿ, ಅಭಿರತ ಪವಾರ ದೇಸಾಯಿ,ಅಭಿಷೇಶ ಪವಾರ ದೇಸಾಯಿ, ಸುನೀಲ ಪವಾರ ದೇಸಾಯಿ,ಭಾವುಸಾಹೇಬ ಜಾಧವ, ನಾನಾಸಾಹೇಬ ಅವತಾಡೇ, ಪ್ರಭಾಕರ ಚವ್ಹಾಣ,ಸಿದ್ದು ಪಾಟೀಲ,ಪ್ರಕಾಶ ಮೊರೆ,ರವೀಂದ್ರ ದೇಸಾಯಿ, ಶಂಕರ ಪಾಟೀಲ,ಸಂದೀಪ ಪಾಟೀಲ, ಪ್ರವೀಣ ಜಾಧವ, ಸಚಿನ ದೇಸಾಯಿ,ನಾಗರಾಜ ಸಿಂಧೆ,ರಮೇಶ ಭೋಸಲೆ, ಪ್ರಶಾಂತ ಚವ್ಹಾಣ,ವಿಲಾಸ ಪಾಠಣಕರ,ಮಾರುತಿ ಮೋಹಿತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
