ಕೊಡಗು : ಕೊಡಗಿನ ಮಡಿಕೇರಿಯಲ್ಲಿ ಯುವಕರಿಂದ ಏಟು ತಿಂದು ಎಸ್ಕೇಪ್ ಆಗಿ ಪೊಲೀಸ್ ಠಾಣೆಗೆ ಓಡಿಬಂದ ಯುವಕ. ಹನಿ ಟ್ರ್ಯಾಪ್ ಶಂಕೆ ಮನೆಯೊಂದರಲ್ಲಿ ರಾತ್ರಿಯಿಡೀ ಮೂವರ ಯುವಕರ ಗ್ಯಾಂಗ್ವೊಂದು ಯುವಕನಿಗೆ ಥಳಿಸಿರುವ ಘಟನೆ ಮಂಡ್ಯದ ಮದ್ದೂರಿನಲ್ಲಿ ನಡೆದಿದೆ. ಮದ್ದೂರಿನ ಯುವಕ ಮಹದೇವ ಎಂಬಾತ ಫೇಸ್ಬುಕ್ನಲ್ಲಿ ಪರಿಚಯವಾದ ಮಹಿಳೆಯನ್ನು ಭೇಟಿಯಾಗಲು ಮಡಿಕೇರಿಗೆ ಬಂದ ಯುವಕ. ಹೇಳಿದ ಸ್ತಳಕ್ಕೆ ಭೇಟಿ ಮಾಡಲು ಬಂದ ಯುವಕನಿಗೆ ಗುಂಪಿನಿಂದ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ. ಇವರಿಂದ ತಪ್ಪಿಸಿಕೊಂಡು ಬಂದ ಯುವಕ ಪೊಲೀಸ್ ಠಾನೆಯಲ್ಲಿ ದೂರು ನೀಡಿದ್ದು, ದೂರಿನನ್ವಯ ಯುವಕನನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ. ಅಲ್ಲದೆ ಯುವಕನ ಹಲ್ಲೆಗೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣವನ್ನು ಹನಿಟ್ರ್ಯಾಪ್ ಎಂಬ ಅನುಮಾನ ವ್ಯಕ್ತಪಡಿಸಿದ ಪೊಲೀಸರು, ಪ್ರಕರಣ ಸಮಭಂಧ ತನಿಖೆಯನ್ನು ನಡೆಸುತ್ತಿದ್ದಾರೆ.

