![]()
ದಾವಣಗೆರೆ : ಶಾಮನೂರು ಶಿವಶಂಕರಪ್ಪ ಕರ್ನಾಟಕದ ದಾವಣಗೆರೆಯಲ್ಲಿ ಪ್ರಮುಖ ರಾಜಕಾರಣಿ, ಉದ್ಯಮಿ ಮತ್ತು ಶಿಕ್ಷಣವೇತ್ತ.ಇವರು ೧೯೩೧ ೧೬ರಂದು ದಾವಣಗೆರೆಯ ಶಾಮನೂರು ಗ್ರಾಮದಲ್ಲಿ ಜನಿಸಿದರು.
ಸ್ಥಳೀಯ ಸೃಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಾಲಾ ಶಿಕ್ಷಣ ಪಡೆದುಕೊಂಡು, ಡಿಆರ್ಎಂ ವಿಜ್ಞಾನ ಪದವಿಯನ್ನು ಪಡೆದುಕೊಂಡರು. ತದ ನಂತರ ಅಕ್ಕಿ ವ್ಯಾಪಾರ ಮಾಡುತ್ತಿದ್ದವರು ಆರ್ಥಿಕ ಆಧಾರ ಸೃಷ್ಟಿಸಿ ರಾಜಕೀಯ ಪ್ರವೇಶ ಮಾಡಿದರು.1969ರಲ್ಲಿ ದಾವಣಗೆರೆ ಪುರಸಭೆ ಸದಸ್ಯರಾಗಿ ರಾಜಕೀಯಕ್ಕೆ ಪ್ರವೇಶ ಮಾಡಿದರು, ಪುರಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, 1994ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಶಾಸಕರಾಗಿ , ಒಂದು ಬಾರಿ ಸಚಿವರಾಗಿ ಗೆದ್ದು ಬೀಗಿದರು. ತಮ್ಮ ಹುಟ್ಟೂರಾದ ಬಾಗಲಕೋಟೆಯನ್ನು ಭದ್ರಪಡಿಸಿಕೊಂಡು, 2004ರಲ್ಲಿ ಅದೇ ಕ್ಷೇತ್ರದಿಂದ ಗೆದ್ದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದರು. ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕರಾಗಿ ಸೇವೆ ಸಲ್ಲಿದರು.
90ರ ದಶಕದಲ್ಲಿ ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಪ್ರಸಿದ್ದಿ ಪಡೆದಿದ್ದ ದಾವಣಗೆರೆ, ಹತ್ತಿ ಗಿರಣಿ ಕಾರ್ಖಾನೆಗಳು ಒದೊಂದಾಗಿ ಮುಚ್ಚಲಾರಂಭಿಸಿದವು. ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬಂದರು. ಇದರಿಂದ ಆರ್ಥಿಕತೆ ಕುಸಿಯುವ ಭೀತಿಯಲ್ಲಿದ್ದಾಗ ರಕ್ಷಕನಾಗಿ ಬಂದವರೇ ಶಾಮನೂರು ಶಿವಶಂಕರಪ್ಪ. ದಾವಣಗೆರೆ ಕುಕ್ಕನವಾಡದಲ್ಲಿ ನಷ್ಟದಲ್ಲಿದ್ದ ದಾವಣಗೆರೆ ಶುಗರ್ ಮಿಲ್ನ್ನು ಟೇಕ್ ಓವರ್ ಮಾಡಿಕೊಂಡು ತಮ್ಮ ಚಾಣಾಕ್ಷತನದಿಂದ ಲಾಭದಾಯಕವಾಗಿಸಿದರು.
ಇದರಿಂದ 1995ರಲ್ಲಿ ಸ್ವತಃ ಶಾಮನೂರು ಶುಗರ್ಸ್ ಎಂಬ ಕಾರ್ಖಾನೆಯನ್ನು ಆರಂಭಿಸಿ ಸಕ್ಕರೆಯಲ್ಲದೆ ಎಥನಾಲ್, ಸ್ಪಿರಿಟ್ ಸೇರಿ ವಿದ್ಯುತ್ ಉತ್ಪಾದನೆಯನ್ನು ಆರಂಭಿಸಿ, ಊರಿನ ಸಾವಿರಾರು ಜನರಿಗೆ ಉದ್ಯೋಗದ ಅಭಾವವನ್ನು ನೀಗಿಸಿದರು.ಹೀಗೆ ಹಲವಾರು ಕೊಡುಗೆಗಳನ್ನು ನೀಡುತ್ತಾ, ದಾವಣಗೆರೆಯಲ್ಲೇ ವೈದ್ಯಕೀಯ (ಮೆಡಿಕಲ್ ಸೀಟ್) ವಿಭಾಗದಲ್ಲಿ ಜೆಜೆಎಂ ಮೆಡಿಕಲ್ ಕಾಲೇಜು, ಡೆಂಟಲ್ ಕಾಲೇಜು ಮತ್ತು ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ದಾವಣಗೆರೆಯನ್ನು ವಿದ್ಯಾನನಗರಿಯನ್ನಾಗಿ ಬದಲಾವಣೆ ಮಾಡಿದರು.
ಅಲ್ಲದೆ ತಮ್ಮ ಗ್ರಾಮೀಣ ಭಾಗದ ಹೆಣ್ನು ಮಕ್ಕಳಿಗೆ ಶಿಕ್ಷಣಕ್ಕಾಗಿ ಮಹಿಳಾ ಕಾಲೇಜು ಬಲಪಡಿಸಿದರು. ಇದರಿಂದ 3,000ಕ್ಕೂ ಅಧಿಕ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ.ಎಂತಹ ಘಟಾನುಘಟಿಗಳು ಬಂದರೂ ಸೋಲುತ್ತಾರೆ, ಆದೃೆ ಶಾಮನೂರುರವುರ ಇದಕ್ಕೆ ಅಪವಾದ, ದಾವಣಗೆರೆ ಕ್ಷೇತ್ರ ರಚನೆಯಾದಾಗಿನಿಂದ ಇಲ್ಲಿಯವರೆಗೂ ತಾವೇ ಆ ಕ್ಷೇತ್ರದ ರಾಜನಾಗಿ ಆಡಳಿತ ಮಾಡಿದವರು. ತಮ್ಮ 92ರ ಹರೆಯದಲ್ಲೂ ಸೋಲು ಕಾಣದ ವ್ಯಕ್ತಿ ಎದುರಾಳಿ ಪಕ್ಷದ ಯುವ ಅಭ್ಯರ್ಥಿಯ ವಿರುದ್ದ ಸ್ಪರ್ಧಿಸಿ ಬರೋಬ್ಬರಿ 27,888 ಮತಗಳ ಅಂತರದಲ್ಲಿ ಗೆದ್ದು, ಬೀಗಿದ್ದಾರೆ.
ತಮ್ಮ ವೈಯಕ್ತಿಕ ಮತ್ತು ರಾಜಕೀಯ ವೃತ್ತಿಯಲ್ಲಿ ಹಣ ಸಂಪಾದನೆಗಿಂತ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ ಅವರು, ಸಮಾಜಸೇವೆ, ಜನಸೇವೆಯೇ ಹೆಚ್ಚಾಗಿ ಮಾಡಿದ್ದಾರೆ. ಕೊರೋನ ಸಮಯದಲ್ಲಿ ವ್ಯಾಕ್ಸಿನ್ಗಾಗಿ ಪರದಾಡುತ್ತಿದ್ದ ವೇಳೆ ಸುಮಾರು 6ಕೋಟಿ ಮೌಲ್ಯದ 60,000 ಲಸಿಕೆಗಳನ್ನು ತರಿಸಿ ಬಡವರಿಗೆ ಉಚಿತವಾಗಿ ನೀಡಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳಿಗೆ ತಮ್ಮ ಜನಕಲ್ಯಾನ ಟ್ರಸ್ಟ್ ಮೂಲಕ ಬಡ ಮಕ್ಕಳ ಓದಿಗಾಗಿ ಸುಮಾರು 5ಕೋಟಿ ಠೇವಣಿ ಇಟ್ಟಿದ್ದಾರೆ. ವಿಶೇಷವಾಗಿ ಪತ್ರಕರ್ತ ಮಕ್ಕಳಿಗಾಗಿ ೧ಕೋಟಿ ರೂಪಾಯಿ ಮೀಸಲು ಮಾಡಿದ್ದಾರೆ.
ತಮ್ಮ ಜೀವನವನ್ನೇ ದಾವಣಗೆರೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಸಿದ ಹಿರಿಯ ನಾಯಕರ ಕೊಡುಗೆ ಅಪಾರವಾಗಿದೆ. ವಯಸ್ಸು ಕೇವಲ ಸಂಖ್ಯೆ ಸಾಧನೆ ಮಾಡುವ ಚೈತನ್ಯದ ಚಿಲುಮೆ ತೋರಿಸಿ ವ್ಯಕ್ತಿ ಇಂದು ತಮ್ಮನ್ನೆಲ್ಲ ಅಗಲಿದ್ದಾರೆ. ಇಂದು ಅವರು ಭವತಿಕವಾಗಿ ನಮ್ಮ ಜೊತೆಯಿಲ್ಲದಿದ್ದರೂ, ತಾವು ಮಾಡಿದ ಸಾಧನೆಯಲ್ಲಿ ಅಮರರಾಗಿದ್ದಾರೆ.
