ಬೆಂಗಳೂರು/ಶ್ರೀಲಂಕಾ: 2026ರ ಟಿ20 ವಿಶ್ವಕಪ್ ಆರಂಭಕ್ಕೆ ಕೇವಲ ಕೆಲವೇ ದಿನಗಳು ಬಾಕಿ ಇರುವಾಗ ಹಾಲಿ ಚಾಂಪಿಯನ್ ಭಾರತ ತಂಡಕ್ಕೆ ಬಲವಾದ ಪೆಟ್ಟು ಬಿದ್ದಿದೆ. ತಂಡದ ಉದಯೋನ್ಮುಖ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದ ಕಾರಣದಿಂದಾಗಿ ಇಡೀ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದು ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಅನಧಿಕೃತ ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ರಾಣಾ ಗಾಯಗೊಂಡಿದ್ದಾರೆ. ಬೌಲಿಂಗ್ ಮಾಡುವಾಗ ಅವರ ಕಾಲಿನ ಸ್ನಾಯು ಸೆಳೆತಕ್ಕೆ (Ankle Injury) ಒಳಗಾಗಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ಅವರು ಕನಿಷ್ಠ 4 ರಿಂದ 6 ವಾರಗಳ ಕಾಲ ವಿಶ್ರಾಂತಿ ಪಡೆಯಬೇಕೆಂದು ಸೂಚಿಸಲಾಗಿದೆ. ಹೀಗಾಗಿ, ಅವರು ವಿಶ್ವಕಪ್ ತಂಡದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ.
ಬೌಲಿಂಗ್ ವಿಭಾಗಕ್ಕೆ ಸವಾಲು
ಹರ್ಷಿತ್ ರಾಣಾ ಕಳೆದ ಐಪಿಎಲ್ ಮತ್ತು ದ್ವಿಪಕ್ಷೀಯ ಸರಣಿಗಳಲ್ಲಿ ತಮ್ಮ ವೇಗ ಮತ್ತು ಸ್ಲೋಯರ್ ಬಾಲ್ಗಳ ಮೂಲಕ ಗಮನ ಸೆಳೆದಿದ್ದರು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಶದೀಪ್ ಸಿಂಗ್ಅವರಿಗೆ ಪೂರಕವಾಗಿ ಹರ್ಷಿತ್ ಮೂರನೇ ವೇಗಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇತ್ತು. ಹರ್ಷಿತ್ ರಾಣಾ ಕೇವಲ ಬೌಲರ್ ಮಾತ್ರವಲ್ಲ, ಕೆಳ ಕ್ರಮಾಂಕದಲ್ಲಿ (No. 9) ಉಪಯುಕ್ತ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ತಂಡದ ಬ್ಯಾಟಿಂಗ್ ಆಳವನ್ನು ಹೆಚ್ಚಿಸುತ್ತಿತ್ತು.
ಇದನ್ನೂ ಓದಿ | ಆರ್ಸಿಬಿ ಹ್ಯಾಟ್ರಿಕ್ ಸಾಧನೆ: ಮೂರು ವರ್ಷ, ಮೂರು ಟ್ರೋಫಿ!
ಇತ್ತೀಚಿನ ವರದಿಗಳ ಪ್ರಕಾರ, ಹರ್ಷಿತ್ ರಾಣಾ ಅವರ ಸ್ಥಾನಕ್ಕೆ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.
