Hassan: A young woman holds a sit-in in front of her house for her lover who ran away after 10 months of love, 5 months together! – ಕಳೆದ ಐದು ತಿಂಗಳಿಂದ ಬೆಂಗಳೂರಿನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಈ ಜೋಡಿಯ ಮದುವೆಗೆ ಸೂರ್ಯನ ಪೋಷಕರೂ ಆರಂಭದಲ್ಲಿ ಒಪ್ಪಿದ್ದರಂತೆ. ಬಳಿಕ ಯುವತಿ ಬೇರೆ ಜಾತಿಯವಳು ಅಂತ ಕ್ಯಾತೆ ತೆಗೆದಿದ್ದಾರೆ.
ಹಾಸನ ಅ.26: ಪ್ರೀತಿ ಮಾಡ್ತೀನಿ, ಮದುವೆ ಆಗೋಣ ಅಂತ ಲೀವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಯುವಕನೋರ್ವ, ಯುವತಿಗೆ ಕೈ ಕೊಟ್ಟು ಎಸ್ಕೇಪ್ ಆಗಿದ್ದಾನೆ. 10 ತಿಂಗಳು ಪ್ರೀತಿ ಮಾಡಿ, 5 ತಿಂಗಳು ಜೊತೆಗಿದ್ದವನು 1 ತಿಂಗಳಿಂದ ನಾಪತ್ತೆಯಾಗಿದ್ದು, ನನಗೆ ಅವನೇ ಬೇಕು ಎಂದು ಯುವತಿ ಹುಡುಗನ ಮನೆ ಮುಂದೆ ಧರಣಿ ಕುಳಿತಿದ್ದಾರೆ. ನಿಮ್ಮ ಮಗನನ್ನು ಕರೆಸದಿದ್ರೆ ವಿಷ ಕುಡಿಯೋದಾಗಿಯೂ ಯುವತಿ ವಿಡಿಯೋ ಮಾಡಿದ್ದು, ನಿನ್ನೆ ಸಂಜೆಯಿಂದ ಯುವಕ ಸೂರ್ಯನ ಮನೆ ಮುಂದೆಯೇ ಯುವತಿ ಕುಳಿತುಕೊಂಡಿದ್ದಾಳೆ.
ಯುವತಿಗೆ ಕೈ ಕೊಟ್ಟ ಪ್ರಿಯಕರ : ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾಸರಗೋಡು ಮೂಲದ ಯುವತಿ ಹಾಗೂ ಹಾಸನ ಜಿಲ್ಲೆಯ ಕಲ್ಲೇಸೋಮನಹಳ್ಳಿಯ ಸೂರ್ಯ (26) ಇಬ್ಬರಿಗೂ ಪರಿಚಯವಾದ ಬಳಿಕ ಪ್ರೀತಿ ಮೂಡಿದೆ. ಕಳೆದ ಐದು ತಿಂಗಳಿಂದ ಬೆಂಗಳೂರಿನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಈ ಜೋಡಿಯ ಮದುವೆಗೆ ಸೂರ್ಯನ ಪೋಷಕರೂ ಆರಂಭದಲ್ಲಿ ಒಪ್ಪಿದ್ದರಂತೆ. ಬಳಿಕ ಯುವತಿ ಬೇರೆ ಜಾತಿಯವಳು ಅಂತ ಕ್ಯಾತೆ ತೆಗೆದಿದ್ದಾರೆ.
ಪೋಷಕರ ಮಾತು ಕೇಳಿ ಸೂರ್ಯ ಪರಾರಿ : ಅಪ್ಪ-ಅಮ್ಮನ ಮಾತು ಕೇಳಿ ಯುವತಿಗೆ ಕೈಕೊಟ್ಟು, ಯುವಕ ಎಸ್ಕೇಪ್ ಆಗಿದ್ದಾನಂತೆ. ಪ್ರಿಯಕರ ದೂರವಾದ ಬಳಿಕ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದರು. ಪ್ರೀತಿಸಿ ಬಳಿಕ ಮದುವೆ ಆಗೋದಾಗಿ ದೈಹಿಕ ಸಂಬಂಧ ಹೊಂದಿದ್ದ ಸೂರ್ಯ ಇದೀಗ ನಾಪತ್ತೆಯಾಗಿದ್ದು, ನನಗೆ ಸೂರ್ಯನನ್ನು ಹುಡುಕಿಕೊಡಿ ಎಂದು ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೂರ್ಯನಿಗಾಗಿ ಯುವತಿ ಹುಡುಕಾಟ : ಸೂರ್ಯನನ್ನ ಅವರ ಮನೆಯವರೇ ಎಲ್ಲೋ ಕಳುಹಿಸಿದ್ದಾರೆ. ಆತನನ್ನ ಕರೆಸದಿದ್ರೆ ವಿಷ ಸೇವಿಸುವುದಾಗಿ ಯುವತಿ ವಿಡಿಯೋ ಮಾಡಿದ್ದಾರೆ. ವಿಚಾರ ಗಂಭೀರವಾಗ್ತಿದ್ದಂತೆ. ಭಾನುವಾರದ ಒಳಗೆ ಮಗನನ್ನ ಕರೆಸುವುದಾಗಿ ಸೂರ್ಯ ಕುಟುಂಬಸ್ಥರು ಒಪ್ಪಿಕೊಂಡಿದ್ರು. ಆದ್ರೆ ನಿನ್ನೆ ಸಂಜೆ ಆದ್ರೂ ಆತನನ್ನ ಕರೆಸಲಿಲ್ಲ. ಇದ್ದಿದ್ದರಿಂದ ಕೋಪಗೊಂಡ ಯುವತಿ ಸೂರ್ಯ ಮನೆ ಮುಂದೆ ಧರಣಿ ಕುಳಿತಿದ್ದಾರೆ.
ಇತ್ತ ಸೂರ್ಯ ಪೋಷಕರು ಕೂಡ ಎಸ್ಕೇಪ್: ಯುವತಿ ಬರುವುದನ್ನ ತಿಳಿದು ಸೂರ್ಯ ಕುಟುಂಬಸ್ಥರು ಕೂಡ ಮನೆ ಬಿಟ್ಟು ಹೋಗಿದ್ದಾರೆ. ಬೀಗ ಹಾಕಿರೋ ಮನೆ ಮುಂದೆಯೇ ಯುವತಿ ಧರಣಿ ಕುಳಿತಿದ್ದಾಳೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ಇಬ್ಬರಿಗೂ ಪರಿಚಯವಾಗಿದ್ದು, ಹತ್ತು ತಿಂಗಳಿಂದ ನಿಷ್ಮಾಮತ್ತು ಸೂರ್ಯ ಪ್ರೀತಿ ಮಾಡ್ತಿದ್ದರಂತೆ. 1 ತಿಂಗಳಿಂದ ಸೂರ್ಯ ನಾಪತ್ತೆಯಾಗಿದ್ದಾನೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಚನ್ನರಾಯಪಟ್ಟಣ ಪೊಲೀಸರು ಸೂರ್ಯನಿಗಾಗಿ ಹುಡುಕಾಟ ನಡೆಸಿದ್ದಾರೆ.

