Darshan-Dhanveer: A string of problems for Dhanveer! Another case registered – ನಟ ದರ್ಶನ್ ದೋಸ್ತಿ ಧನ್ವೀರ್ಗೆ ಕಾಡುತ್ತಲೇ ಇವೆ ಹೊಸ ಸಂಕಷ್ಟ. ಈಗಾಗಲೇ 3 ಕೇಸ್ ಮಧ್ಯೆ ಮತ್ತೊಂದು ಕೇಸ್ ದಾಖಲಾಗೋದು ಫಿಕ್ಸಾ?
ನಟ ಧನ್ವೀರ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಈಗಾಗಲೇ ನಟ ಧನ್ವೀರ್ ವಿರುದ್ಧ 3 ಕೇಸ್ ದಾಖಲಾಗಿದ್ದು, ಇದೀಗ ಸಚಿವ ಜಮೀರ್ ಅಹ್ಮದ್ ಮತ್ತು ನಟ ಜೈದ್ ಖಾನ್ ಗೆ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.
ಧನ್ವೀರ್ ವಿರುದ್ಧ ಒಟ್ಟು ನಾಲ್ಕು ಕೇಸ್ : ಆಡಿಯೋ ಒಂದರಲ್ಲಿ ಜೈದ್ ಖಾನ್ ಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು ಜಮೀರ್ ಅಹ್ಮದ್ ಅಭಿಮಾನಿಗಳಿಂದ ದೂರು ದಾಖಲಿಸಲಾಗಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಧನ್ವೀರ್ ವಿರುದ್ಧ ಒಟ್ಟು ನಾಲ್ಕು ದೂರು ದಾಖಲಾಗಿವೆ.
ಚಾಮರಾಜಪೇಟೆ ಠಾಣೆಗೆ ದೂರು ನೀಡಿದ ಜಮೀರ್ ಅಹಮದ್ ಅಭಿಮಾನಿಗಳು ಧನ್ವೀರ್ ಮುಖಕ್ಕೆ ಮಸಿ ಹಾಕಿರುವ ಪೋಟೋ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ನಟ ಧನ್ವೀರ್ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದು ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜೈದ್ ಖಾನ್ ಅಭಿಮಾನಿ ವಿನಾಯಕ ಹೇಳಿಕೆ ಕೊಟ್ಟಿದ್ದು, ಧನ್ವೀರ್ ಸೋಶಿಯಲ್ ಮೀಡಿಯಾದಲ್ಲಿ ಜಮೀರ್ ಅಹಮದ್ ಅವರ ಮಗ ಜೈದ್ ಖಾನ್ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅವರನ್ನು ಬಂದಿಸಬೇಕು ಅಂತ ದೂರು ದಾಖಲಿಸಿದ್ದಾರೆ.
ಈಗಾಗಲೇ ಹಲವು ಕಡೆ ದೂರು ದಾಖಲಾಗಿದೆ. ಎನ್ ಸಿಆರ್ ಆಗಿದೆ ಈಗ ಎಫ್ಐಆರ್ ಆಗಬೇಕು. ಹಾಗೇ ಬಂಧಿಸಬೇಕು, ಕ್ರಮ ಆಗಬೇಕು ಎಂದಿದ್ದಾರೆ.
ಕ್ಷಮೆ ಕೇಳದಿದ್ರೆ ಮುತ್ತಿಗೆ : ದರ್ಶನ್ ಫ್ಯಾಮಿಲಿ ಜೊತೆ ಯಾರು ಹೋಗೋದು ಧನ್ವೀರ್ ಗೆ ಇಷ್ಟ ಇಲ್ಲ. ಈಗ ಜೈದ್ ಖಾನ್ ದರ್ಶನ್ ಫ್ಯಾಮಿಲಿ ಚೆನ್ನಾಗಿದ್ದಾರೆ. ಇನ್ನು ಎರಡು ದಿನದಲ್ಲಿ ಕ್ಷಮೆ ಕೇಳಿಲ್ಲ ಅಂದರೆ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ವಿನಾಯಕ್ ಹೇಳಿದ್ದಾರೆ.
ಸ್ಯಾಂಡಲ್ವುಡ್ ನಟ ಧನ್ವೀರ್ ವಿರುದ್ದ ಬೆದರಿಕೆ, ನಿಂದನೆ, ಕಿರುಕುಳ ಆರೋಪ ಕೇಳಿ ಬಂದಿದ್ದು ಧನ್ವೀರ್ ವಿರುದ್ಧ ಮೂರು ಎನ್ ಸಿಆರ್ ಗಳು ದಾಖಲಾಗಿವೆ. ಆದರೆ ಈಗ ದೂರುದಾರರು ಎಫ್ಐಆರ್ ದಾಖಲಿಸಲು ಇಂದು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಫ್ಐಆರ್ ದಾಖಲಿಸಲು ಕೋರ್ಟ್ ಗೆ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿದೆ. ಬ್ಯಾಟರಾಯನಪುರ, ರಾಜರಾಜೇಶ್ವರಿ ನಗರ, ಬಸವೇಶ್ವರ ನಗರ ಠಾಣೆಗಳಲ್ಲಿ ಎನ್ ಸಿಆರ್ ದಾಖಲಾಗಿದ್ದು, ಇದೀಗ ದೂರುದಾರರು ತಾವು ನೀಡಿರುವ ದೂರನ್ನು ಎಫ್ಐಆರ್ ಮಾಡುವಂತೆ ಮನವಿ ಮಾಡಿದ್ದಾರೆ.
ದೂರಿನಲ್ಲಿರುವ ಅಂಶಗಳು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲದ ಹಿನ್ನಲೆ ಪೊಲೀಸರು ಎನ್ ಸಿಆರ್ ದಾಖಲಿಸಿದ್ದರು. ಆದರೆ ಈಗ ದೂರುದಾರರು ಇಂದು ಕೋರ್ಟ್ ಗೆ ಅರ್ಜಿ ಸಲ್ಲಿಸಿ ಎಫ್ಐಆರ್ ದಾಖಲಿಸಲು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
