Udupi: Another bloodbath on the coast; Accused in the Yogish Poojary case found dead in the middle of the road! –ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರೌಡಿಶೀಟರ್ ಸುಜಿತ್ ಪಿಂಟೊ ರಸ್ತೆಯಲ್ಲೇ ಹೆಣವಾಗಿದ್ದಾನೆ. ಕೊಲೆಗೆ ಕಾರಣ ಏನು?

ಉಡುಪಿ ಅ.28: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. 2020ರ ಯೋಗೀಶ್ ಪೂಜಾರಿ ಕೊಲೆ ಪ್ರಕರಣ ಹಾಗೂ 2018ರ ಗುರುಪ್ರಸಾದ್ ಭಟ್ ಕೊಲೆ ಪ್ರಕರಣದಲ್ಲೂ ಸುಜಿತ್ ಪಿಂಟೊ ಆರೋಪಿಯಾಗಿದ್ದ. ಕರಾವಳಿ ಭಾಗದಲ್ಲಿ ಪ್ರತೀಕಾರದ ಕಿಚ್ಚಿಗೆ ಕೆಲ ದುರ್ಘಟನೆಗಳು ಸಂಭವಿಸುತ್ತಿದೆ. ಇದರ ನಡುವೆ ಬರ್ಬರವಾಗಿ ಕೊಲೆಯಾದ ರೌಡಿಶೀಟರ್ ಹತ್ಯೆಗೆ ಅಸಲಿ ಕಾರಣ ಏನು?
ಮದ್ಯಮ ಅಮಲಿನಲ್ಲಿ ಬಡಿದಾಟ : ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಕಂಡಿದೆ. ಕುಡಿದ ಮತ್ತಿನಲ್ಲಿ ರೌಡಿಶೀಟರ್ ಸುಜಿತ್ ಪಿಂಟೊ ಹಾಗೂ ಪ್ರಮೋದ್ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಇಬ್ಬರು ಆರೋಪಿಗಳು ಸೇರಿ ರೌಡಿಶೀಟರ್ ಸುಜಿತ್ ಪಿಂಟೊಗೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದು, ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ.
ರಸ್ತೆಯಲ್ಲಿ ಹೆಣವಾದ ಸುಜಿತ್ ಪಿಂಟೊ : ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರೌಡಿಶೀಟರ್ ಸುಜಿತ್ ಪಿಂಟೊ ರಸ್ತೆಯಲ್ಲೇ ಹೆಣವಾಗಿದ್ದಾನೆ. ಈ ಸಂಬಂಧ ಕೊಲೆ ಪ್ರಕರಣದ ಆರೋಪಿ ರಿಕ್ಷಾ ಚಾಲಕ ಪ್ರಮೋದ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಜಿತ್ ಪಿಂಟೊನಿಂದ ಪ್ರಮೋದ್ಗೆ ಹಣ ಪಾವತಿ ಬಾಕಿ ಇದ್ದುದೇ ಈ ಗಲಾಟೆಗೆ ಕಾರಣ ಎನ್ನಲಾಗ್ತಿದೆ.
ಯೋಗೀಶ್ ಪೂಜಾರಿ ಕೊಲೆ ಕೇಸ್ ಆರೋಪಿ : ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಹೊಡೆದಾಟ ನಡೆದಿದ್ದು, ಈ ವೇಳೆ ಸಿಟ್ಟಿಗೆದ್ದು ಪ್ರಮೋದ್ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾನಂತೆ. ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಜಿತ್ ಪಿಂಟೊ. 2018ರ ಗುರುಪ್ರಸಾದ್ ಭಟ್ ಕೊಲೆ ಕೇಸ್ ಹಾಗೂ 2020ರ ಯೋಗೀಶ್ ಪೂಜಾರಿ ಕೊಲೆ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ.
ಪೊಲೀಸರ ಭೇಟಿ ಪರಿಶೀಲನೆ : ಸ್ಥಳಕ್ಕೆ ಬ್ರಹ್ಮಾವರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರು ಆರೋಪಿ ಪ್ರಮೋದ್ನನ್ನು ವಿಚಾರಣೆ ನಡೆಸುತ್ತಿದ್ದಾರೆ.
