Darshan Case: Dhanveer VS Vijayalakshmi! Former Bigg Boss contestant Ashwini Gowda said this – Ashwini Gowda: ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಧನ್ವೀರ್ vs ವಿಜಯಲಕ್ಷ್ಮಿ ವಿವಾದದ ಬಗ್ಗೆ ಮಾಜಿ ಬಿಗ್ಬಾಸ್ ಸ್ಪರ್ಧಿ ಹಾಗೂ ಖ್ಯಾತ ಕಿರುತೆರೆ ನಟಿ ಅಶ್ವಿನಿ ಗೌಡ ಮಾತನಾಡಿದ್ದಾರೆ.
1/8

ಕಳೆದ ಹಲವಾರು ದಿನಗಳಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಧನ್ವೀರ್ ನಡುವಿನ ಮನಸ್ತಾಪ ನಡೆಯುತ್ತಲೇ ಇದೆ. ಆಡಿಯೋ, ವಿಡಿಯೋ ಲೀಕ್, ಆರೋಪ, ಪ್ರತ್ಯಾರೋಪ ನಡೆಯುತ್ತಲೇ ಇವೆ. ಈ ಎಲ್ಲ ಬೆಳವಣಿಗೆ ಮಧ್ಯೆ ನಟ ದರ್ಶನ್ ಅಭಿಮಾನಿಗಳೆಲ್ಲ ಈ ದಿಢೀರ್ ಬೆಳವಣಿಗೆಯಿಂದ ಶಾಕ್ ಆಗಿದ್ದಾರೆ.
2/8

ಇತ್ತ ಧನ್ವೀರ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಬರೆದರೆ ಅತ್ತ ವಿಜಯಲಕ್ಷ್ಮಿ ಇನ್ನೊಂದು ಬರೆಯುತ್ತಿದ್ದಾರೆ. ಅಂತೂ ಇಬ್ಬರ ನಡುವಿನ ಶೀತಲ ಸಮರ ಈಗ ಜೋರಾಗಿದೆ. ಈ ಎಲ್ಲ ಬೆಳವಣಿಗೆ ಮಧ್ಯೆ ಮಾಜಿ ಬಿಗ್ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಅವರು ಪ್ರತಿಕ್ರಿಯಿಸಿದ್ದಾರೆ.
3/8

ಅಭಿಮಾನ ಅಂದ್ರೆ ಏನು ಗೊತ್ತಾ? ನಮಗೆ ಕಷ್ಟ ಬಂದಾಗ ಮಾತ್ರ “ನಮ್ಮ ಬಾಸ್” ಅನ್ನೋದಲ್ಲ… ಅವನಿಗೆ ಕಷ್ಟ ಬಂದಾಗಲೂ ಎದೆ ತಟ್ಟಿ “ಅವನು ನಮ್ಮ “ಬಾಸ್” ಅನ್ನಬೇಕು!
4/8
ಅಭಿಮಾನವೆಂಬುದು ಕೇವಲ ಹೆಸರಿನ ಮೇಲಿನ ಪ್ರೀತಿಯಲ್ಲ, ಅದು ಹೃದಯಗಳ ನಡುವಿನ ಒಂದು ಸುಂದರವಾದ ನಂಟು. ಒಬ್ಬ ಕಲಾವಿದನನ್ನು ಪ್ರೀತಿಸುವ ಅಭಿಮಾನಿಗಳು, ಆ ಕಲಾವಿದನ ಜೊತೆ ನಿಂತಿರುವ ಕುಟುಂಬವನ್ನೂ ಗೌರವಿಸುವ ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಮನೆಯ ಹೆಣ್ಣುಮಕ್ಕಳನ್ನು ಹತ್ಯೆಯನ್ನು ಮಕ್ಕಳನ್ನು ಗೌರವಿಸುವುದು ನಮ್ಮ ಸಂಸ್ಕಾರವಾಗಬೇಕು ಎಂದು ನಟಿ ಬರೆದಿದ್ದಾರೆ.
5/8

ಕಾಲ ಬದಲಾದಾಗ, ಸಂಬಂಧಗಳಲ್ಲಿ ಮನಸ್ತಾಪ ಬಂಡಾಗ, ಇಷ್ಟು ದಿನ ಜೊತೆಯಾಗಿ ಹಂಚಿಕೊಂಡ ಪ್ರೀತಿ, ವಿಶ್ವಾಸ, ಕಷ್ಟ-ಸುಖಗಳನ್ನೆಲ್ಲ ಮರೆತು, ಅದೇ ಸಂಬಂಧವನ್ನು ನೋಯಿಸುವ ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ಮನಸ್ಸಿಗೆ ನೋವು ತರುವ ಸಂಗತಿ ಎಂದಿದ್ದಾರೆ.
6/8
ಒಂದು ಕಣ್ಣಿನ ಮೌನವನ್ನು ದೌರ್ಬಲ್ಯವೆಂದು ಭಾವಿಸಬೇಡಿ. ಒಂದು ಕುಟುಂಬದ ಗೌರವವನ್ನು ನಿಮ್ಮ ಮಾತುಗಳಿಂದ ಅಳೆಯಬೇಡಿ. ಭಿನ್ನಾಭಿಪ್ರಾಯಗಳೆರಬಹುದು, ಆದರೆ ಯಾರದ್ದೇ ಹೆಚ್ಚಿನ ಘನತೆಗೆ ಧಕ್ಕೆತರುವ ಹಕ್ಕು ಯಾರಿಗೂ ಇಲ್ಲ. ಅಭಿಮಾನವೆಂದರೆ ಅವರ ಹೆಸರನ್ನು ಕೂಗುವುದಷ್ಟೇ ಅಲ್ವ ಅವರ ಮೇಲಿನ ಪ್ರೀತಿಯನ್ನು ಗೌರವದಿಂದ ಉಳಿಸಿಕೊಳ್ಳುವುದು. ಕಲಾವಿದ ಮತ್ತು ಅಭಿಮಾನಿಯ ನಡುವಿನ ಸಂಬಂಧವು ಕೇವಲ ಹರದೆಯ ಮೇಲಿನ ಆಕರ್ಷಣೆಯಲ್ಲ; ಅದು ಪ್ರೀತಿ, ನಂಬಿಕೆ ಮತ್ತು ಭಾವನೆಗಳ ಬಂಧ ಎಂದಿದ್ದಾರೆ.
7/8

ನಿಜವಾದ ಅಭಿಮಾನಿ ಕಲಾವಿದನ ಏಳಿಗೆಯಲ್ಲಿ ಸಂಭ್ರಮಿಸುತ್ತಾನೆ, ಕಷ್ಟದಲ್ಲಿ ಬೆಂಬಲಿಸುತ್ತಾನೆ; ಆದರೆ ಯಾರನ್ನೂ ನೋಯಿಸುವ ಮೂಲಕ ತನ್ನ ಅಭಿಮಾನವನ್ನು ಸಾಬೀತುಪಡಿಸುವುದಿಲ್ಲ.
8/8

ಕೊನೆಗೆ ಒಂದೇ ಮಾತು… ಅ ಅಭಿಮಾನ ಇರಲಿ, ಆದರೆ ಮಾನವೀಯತೆ ಕಳೆದುಹೋಗದಿರಲಿ. ಪ್ರೀತಿ ಇರಲಿ, ಆದರೆ ಹೆಣ್ಣಿನ ಗೌರವಕ್ಕೆಧಕ್ಕೆ ಬರದಿರಲಿ. ನಂಟು ಇರಲಿ, ಆದರೆ ಮನಸ್ಸುಗಳನ್ನು ಮುರಿಯುವಷ್ಟು ದೇಹ ಮುಂಲಿನ ಪ್ರೀತಿ ಬೆಳೆಯದಿರಲಿ. ಅದೇ ನಿಜವಾದ ಅಭಿಮಾನ, ಅದೇ ನಿಜವಾದ ಮನುಷ್ಯ ಎಂದಿದ್ದಾರೆ.
