Two helicopters collide while landing in Nepal; accident captured on video, one Indian national killed. – ಉತ್ತರಾಖಂಡ್ ಹೆಲಿಕಾಪ್ಟರ್ ಪತನದ ನೋವು ಮಾಸುವ ಮೊದಲೇ, ನೆರೆಯ ನೇಪಾಳದಲ್ಲಿ ಎರಡು ಹೆಲಿಕಾಪ್ಟರ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಮೌಂಟ್ ಎವರೆಸ್ಟ್ ಬಳಿಯ ವಾಯುಯಾನ ಕೇಂದ್ರದ ಬಳಿ ಲ್ಯಾಂಡಿಂಗ್ ಮಾಡುವ ವೇಳೆ, ಹೆಲಿಕಾಪ್ಟರ್ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಈ ದುರ್ಘಟನೆಯಲ್ಲಿ ಓರ್ವ ಭಾರತೀಯ ನಾಗರಿಕ ಸಾವನ್ನಪ್ಪಿರುವುದಾಗಿ ನೇಪಾಳ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡ ಓರ್ವ ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ.
ನೇಪಾಳದ ಮೌಂಟ್ ಎವರೆಸ್ಟ್ ಬಳಿ ಎರಡು ಹೆಲಿಕಾಪ್ಟರ್ಗಳ ನಡುವೆ ಅಪಘಾತ.
ಲ್ಯಾಂಡಿಂಗ್ ವೇಳೆ ಪರಸ್ಪರ ಡಿಕ್ಕಿ ಹೊಡೆದ ಎರಡು ಹೆಲಿಕಾಪ್ಟರ್ಗಳು.
ನೇಪಾಳ ಹೆಲಿಕಾಪ್ಟರ್ ಡಿಕ್ಕಿ ದುರಂತದಲ್ಲಿ ಓರ್ವ ಭಾರತೀಯ ನಾಗರಿಕ ಸಾವು.
ಕಠ್ಮಂಡು: ನೇಪಾಳದ ಮೌಂಟ್ ಎವರೆಸ್ಟ್ ಬಳಿಯ ಎತ್ತರದ ವಾಯುಯಾನ ಕೇಂದ್ರದಲ್ಲಿ ಲ್ಯಾಂಡಿಂಗ್ ಮಾಡುವಾಗ, ಎರಡು ಹೆಲಿಕಾಪ್ಟರ್ಗಳ ನಡುವೆ ಡಿಕ್ಕಿ ಸಂಭವಿಸಿದೆ. ಊ ಅಪಘಾತದಲ್ಲಿ ಭಾರತೀಯ ಮೂಲದ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜಧಾನಿ ಕಠ್ಮಂಡುವಿನಿಂದ 250 ಕಿಮೀ ದೂರದಲ್ಲಿರುವ ಸೋಲುಖುಂಬುವಿನ ಹೆಲಿಪೋರ್ಟ್ನಲ್ಲಿ ನಡೆದ ಘಟನೆಯನ್ನು ಪೊಲೀಸರು ದೃಢಪಡಿಸಿದ್ದು, ಡಿಕ್ಕಿಯ ವೀಡಿಯೊ ಬಹಿರಂಗವಾದ ನಂತರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಎರಡು ಹೆಲಿಕಾಪ್ಟರ್ಗಳು ಇಳಿಯುವ ಮೊದಲು ಪರಸ್ಪರ ಡಿಕ್ಕಿ ಹೊಡೆದು, ಎರಡೂ ಹಿಮಾವೃತ ನೆಲದ ಮೇಲೆ ಅಪ್ಪಳಿಸುವುದನ್ನು ವೀಡಿಯೊ ತೋರಿಸಿದೆ.ನೇಪಾಳದಲ್ಲಿ ಸಣ್ಣ ಹೆಲಿಕಾಪ್ಟರ್ಗಳನ್ನು ಪ್ರವಾಸಿಗರು, ಆರೋಹಿಗಳು ಮತ್ತು ಸರಬರಾಜುಗಳನ್ನು ಸಾಗಿಸಲು ಹಾಗೂ ತುರ್ತು ಸ್ಥಳಾಂತರಿಸುವಿಕೆಯನ್ನು ಕೈಗೊಳ್ಳಲು ವ್ಯಾಪಕವಾಗಿ ಬಳಸಲಾಗುತ್ತದೆ. ದೇಶದ ಸವಾಲಿನ ಭೂಪ್ರದೇಶ ಮತ್ತು ವೇಗವಾಗಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗಳು ವಾಯುಯಾನ ಕಾರ್ಯಾಚರಣೆಗಳನ್ನು ವಿಶೇಷವಾಗಿ ಅಪಾಯಕಾರಿಯನ್ನಾಗಿ ಮಾಡುತ್ತವೆ.ಓರ್ವ ವ್ಯಕ್ತಿ ಮೃತ, ಓರ್ವನಿಗೆ ಗಂಭೀರ ಗಾಯ: “ನೇಪಾಳದ ಮೌಂಟ್ ಎವರೆಸ್ಟ್ ಬಳಿ ಸಂಭಿಸಿದ ಎರಡು ಹೆಲಿಕಾಪ್ಟರ್ಗಳ ನಡುವಿನ ಡಿಕ್ಕಿ ಘಟನೆಯಲ್ಲಿ, ಓರ್ವ ವಿದೇಶಿ ಪ್ರಜೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಅಪಘಾತದಲ್ಲಿ ಗಾಯಗೊಂಡ ಮತ್ತೋರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ” ಎಂದು ಸೋಲುಖುಂಬು ಜಿಲ್ಲಾ ಪೊಲೀಸ್ ಉಸ್ತುವಾರಿ ನಬಿನ್ ರಾಜಾ ಬುಧಥೋಕಿ ಮಾಹಿತಿ ನೀಡಿದ್ದಾರೆ.