When DKShi is present, what is the need for a minister to speak? Ashok hits back at Krishna Byre Gowda over allegations of his speech being cut short. – ಪ್ರಧಾನಿ ನರೇಂದ್ರ ಮೋದಿ ಟೆಲಿಪ್ರಾಂಪ್ಟರ್ ಬಳಸುವುದಾದರೆ ಸಚಿವ ಪ್ರಿಯಾಂಕ್ ಖರ್ಗೆ ಯಾವುದನ್ನು ಬಳಸುತ್ತಾರೆ? ತಂದೆ ಮಲ್ಲಿಕಾರ್ಜುನ ಖರ್ಗೆ ಹಿರಿಯ ನಾಯಕ ಆಗಿರುವುದರಿಂದಲೇ ಇವರಿಗೆ ಸೂಕ್ತ ಸ್ಥಾನಮಾನ, ಬೆಲೆ ಸಿಕ್ಕಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಯಾವುದೇ ಕುಟುಂಬ ರಾಜಕಾರಣದ ಹಿನ್ನೆಲೆ ಇಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಂದೆಯಿಂದ ಈ ಸ್ಥಾನ ದೊರೆತಿದೆ. ಆದ್ದರಿಂದ ಹೀಗೆ ಮಾತಾಡುವಾಗ ತಮ್ಮ ಬೆಲೆ ಏನು ಎಂದು ತಿಳಿದು ಮಾತಾಡಲಿ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಸಲಹೆ ನೀಡಿದರು.
- ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಾತನಾಡುವಾಗ ಸಚಿವರ ಮಾತಿನ ಅಗತ್ಯ ಏನಿದೆ?
- ಪಿಎಂ ಕಾರ್ಯಕ್ರಮದಲ್ಲಿ ನನ್ನ ಭಾಷಣ ಕಟ್ ಮಾಡಲಾಗಿದೆ ಎಂಬ ಆರೋಪಕ್ಕೆ ಕೃಷ್ಣ ಬೈರೇಗೌಡರಿಗೆ ಆರ್ ಅಶೋಕ್ ತಿರುಗೇಟು
- ಶಿಷ್ಟಾಚಾರ ಇರುವುದರಿಂದ ನಿಯಮ ಪಾಲಿಸಬೇಕಾಗುತ್ತದೆ ಎಂದ ಆರ್ ಅಶೋಕ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದು ಸಾವಿರಾರು ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದು, ಇದರಿಂದ ಬೆಂಗಳೂರಿಗೆ ಜನತೆಗೆ ಸಂತಸವಾಗಿದೆ. ಕೇಂದ್ರ ಸರ್ಕಾರ ನೀಡಿದ ಕೊಡುಗೆಗಳಿಂದಾಗಿ ಮುಂದಿನ ಜಿಬಿಎ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮೈಸೂರಿನಲ್ಲಿ ವಿನೂತನವಾದ ದೇಶದ ಮೊದಲ ಡೋಮ್ ತಾರಾಲಯವನ್ನು ಕೇಂದ್ರ ಸರ್ಕಾರ ಕೊಡುಗೆಯಾಗಿ ನೀಡಿದೆ. ಹಿಂದಿನ ಯುಪಿಎ ಅವಧಿಗಿಂತಲೂ ಅಧಿಕ ಅನುದಾನ ರಾಜ್ಯಕ್ಕೆ ಬಂದಿದೆ. ಬಡತನ ಬಹಳಷ್ಟು ಕಡಿಮೆಯಾಗಿದೆ. ಸರ್ಕಾರದಲ್ಲಿ ಸ್ಥಿರತೆ ಇರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಬಂದು ಹೂಡಿಕೆ ಮಾಡಿವೆ. ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಃ ಬಂದು ಇವುಗಳನ್ನು ಉದ್ಘಾಟನೆ ಮಾಡುವುದರಿಂದ ಜನರಿಗೆ ಸಂತಸವಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಗೆ ಹೆಚ್ಚು ಸ್ಥಾನಗಳನ್ನು ರಾಜ್ಯದ ಜನರು ನೀಡಿದ್ದಾರೆ. ಮುಂದಿನ ಜಿಬಿಎ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಪ್ರಧಾನಿ ಬಂದಾಗ ವೇದಿಕೆಯಲ್ಲಿ ಮಾತಾಡಲು ಅವಕಾಶ ಸಿಗಲಿಲ್ಲ ಎಂದು ನಾವೇನೂ ಕಣ್ಣೀರು ಹಾಕಿಲ್ಲ. ಹಿಂದೆ ನನಗೆ ವೇದಿಕೆ ಮೇಲೆ ಹೋಗುವ ಅವಕಾಶ ಸಿಕ್ಕಿತ್ತು. ಈಗ ಸಿಕ್ಕಿಲ್ಲ. ಶಿಷ್ಟಾಚಾರ ಇರುವುದರಿಂದ ನಿಯಮ ಪಾಲಿಸಬೇಕಾಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಸಚಿವ ಕೃಷ್ಣ ಬೈರೇಗೌಡರಿಗಿಂತಲೂ ಚೆನ್ನಾಗಿ ಮಾತಾಡುತ್ತಾರೆ. ಅವರು ಕರ್ನಾಟಕದ ಮುಖ್ಯಮಂತ್ರಿಯೇ ಹೊರತು ಪಾಕಿಸ್ತಾನದ ಮುಖ್ಯಮಂತ್ರಿ ಅಲ್ಲ. ಅವರು ಮಾತಾಡುವುದರಿಂದ ಏನೂ ಸಮಸ್ಯೆ ಆಗುವುದಿಲ್ಲ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿಯೇ ಮಾತಾಡುವುದರಿಂದ ಸಚಿವರಿಗೆ ವಿಶೇಷವಾಗಿ ಮಾತಾಡಲು ಏನೂ ವಿಷಯಗಳಿರುವುದಿಲ್ಲ.ಸಚಿವರಿಗೆ ಏನಾದರೂ ಕೇಳಬೇಕೆಂದರೆ ದೆಹಲಿಗೆ ಹೋಗಿ ಮನವಿ ಮಾಡಲಿ. ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಇದ್ದಾಗ ಸಚಿವರ ಬಳಿ ಹೋಗಿ ಮನವಿ ಸಲ್ಲಿಸುತ್ತೇವೆ. ಬೇಡಿಕೆ, ಅಹವಾಲುಗಳನ್ನು ಭಾಷಣದಲ್ಲಿ ಹೇಳಿದರೆ, ಅದು ಜನರ ಮುಂದೆ ಮಾಡುವ ಶೋ ಆಗುತ್ತದೆ. ಸಚಿವರು ತಮ್ಮನ್ನು ಪ್ರಚಾರ ಮಾಡಿಕೊಳ್ಳಲು ಈ ರೀತಿ ಮಾತಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೆಟ್ರೊ ಯೋಜನೆಯಲ್ಲಿ ಶೇ.20 ರಾಜ್ಯ ಸರ್ಕಾರ ಹಾಗೂ ಶೇ.20 ಕೇಂದ್ರ ಸರ್ಕಾರ ಪಾಲು ಹೊಂದಿದೆ. ಉಳಿದಿದ್ದನ್ನು ಬಿಎಂಆರ್ಸಿಎಲ್ ಸಾಲದ ಮೂಲಕ ಹೊಂದಿಕೆ ಮಾಡುತ್ತದೆ. ಶೇ.80 ರಷ್ಟು ಪಾಲಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಬಜೆಟ್ನಲ್ಲಿ ತೋರಿಸಬೇಕಿತ್ತು. ಕಾಂಗ್ರೆಸ್ ನಾಯಕರು ಈ ಬೋಗಸ್ ಲೆಕ್ಕಗಳನ್ನು ನೀಡುವುದನ್ನು ಬಿಟ್ಟು, ಕೇಂದ್ರದ ಜೊತೆ ಉತ್ತಮ ಸಂಬಂಧ ಹೊಂದಿ ಹೆಚ್ಚು ಅನುದಾನ ತರುವುದಕ್ಕೆ ಗಮನಹರಿಸಲಿ. ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.
