ಎಲ್ಲೆಲ್ಲೂ ರಾಜನಿಕಾಂತ್ ನಟನೆಯ ಕೂಲಿ ಸಿನೆಮಾ ಹವಾ ಆ.14 ರಂದು ಭಾರತ ಅಲ್ಲದೆ ಜಾಗತಿಕ ಮಟ್ಟದಲ್ಲಿ ಅದ್ದೂರಿಯಾಗಿ ಬಿಡುಗಡೆ.

ಕೂಲಿ ಸಿನೆಮಾ ದೊಡ್ಡ ಮಟ್ಟದಲ್ಲಿ ತಯಾರಾದ ಸಿನೆಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸಿನೆಮಾದಲ್ಲಿ ಆಕರ್ಷಣೆ ಎಂದರೆ ರಜನಿಕಾಂತ್. ತಲೈವಾ ತಮ್ಮ ಕ್ಲಾಸಿಕ್ ಶೈಲಿಯಲ್ಲಿ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ. ಭಯಾನಕ ನಡಿಗೆ, ಸಂಭಾಷಣೆಯ ಶೈಲಿ, ಸ್ವಾಗ್ ನೋಡಿದರೆ ಪಕ್ಕಾ 80-90 ರ ದಶಕದ ರಜನಿಯನ್ನು ನೆನಪಿಸುತ್ತವೆ. ಇನ್ನು ಲೋಕೇಶ್ ಕನಗರಾಜ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ರ ಪಾತ್ರವು 1983 ರ ತಮಿಳು ಸಿನಿಮಾ ಕೂಲಿಯೊಂದಿಗೆ ಕನೆಕ್ಟ್ ಆಗಿರುವ ಸಾಧ್ಯತೆಯಿದೆ. ಉತ್ತಮ ಪಾತ್ರದೊಂದಿಗೆ ರಜನಿ ಕಂಬ್ಯಾಕ್ ಮಾಡಲಿದ್ದಾರೆ. ರಜನಿ-ಲೋಕೇಶ್ ಜೋಡಿಗಾಗಿ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಹಾಡುಗಳು ಅಭಿಮಾನಿಗಳಲ್ಲಿ ಹಿಟ್ ಆಗಿದ್ದು, BGM ಅತಿದೊಡ್ಡ ಶಕ್ತಿಯಾಗಿರಲಿದೆ.
ಈ ಸಿನಿಮಾದಲ್ಲಿ ರಜನಿಕಾಂತ್, ಆಮಿರ್ ಖಾನ್, ಉಪೇಂದ್ರ, ನಾಗಾರ್ಜುನ, ಸತ್ಯರಾಜ್, ಶೃತಿ ಹಾಸನ್, ಅವಿನಾಶ್, ಸೌಬಿನ್ ಶಾಹಿರ್ ನಟಿಸಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ತಾರಾಗಣ ಇರೋದರಿಂದ ಪಾತ್ರಗಳು ಇನ್ನಷ್ಟು ಗಟ್ಟಿಯಾಗಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಲೋಕೇಶ ಕನಗರಾಜ್ ಒಂದು ಅದ್ಭುತ ಕಥೆ ಮೂಲಕ ಸಿನೆಮಾವನ್ನು ತಯಾರಿಸಿದ್ದಾರೆ, ಸಿನಿಮಾದಲ್ಲಿ ಸಿಕ್ಕಾಪಟ್ಟೆ ಸರ್ಪ್ರೈಸಿಂಗ್ ವಿಷಯಗಳು, ಟ್ವಿಸ್ಟ್ ಇವೆ ಎಂದು ಹೇಳಿದ್ದಾರೆ. ಕ್ರಿಯೇಟಿವ್ ಆಗಿರೋ ದೃಶ್ಯಗಳು, ರೋಮಾಂಚನಕಾರಿ ಕ್ಷಣಗಳು, ಕಥೆಯ ನಿರೂಪಣೆ ಎಲ್ಲವೂ ಉತ್ತಮವಾಗಿದೆ. ಇವೆಲ್ಲ ವಊ ಥಿಯೇಟರ್ ನಲ್ಲಿ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ , ಶಿಳ್ಳೆ ಹೊಡೆಯುವಂತೆ ಮಾಡುತ್ತದೆ. ಈ ಸಿನೆಮಾ ಈ ವರ್ಷದ ಬಹುದೊಡ್ಡ ಬ್ಲಾಕ್ಬಸ್ಟರ್ ಸಿನೆಮಾ ಆಗಲಿದೆ.
