ಅಪಘಾತ ಪತ್ತೆಹಚ್ಚುವಲ್ಲಿ 38 ಸಿಸಿ ಕ್ಯಾಮೆರಾ ಅಳವಡಿಕೆ
ಕಂಪ್ಲಿ: ಕಂಪ್ಲಿ ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧಿತ ಕಂಪ್ಲಿ ತಾಲ್ಗಲೂಕು ಇಲಾಖೆಯಿಂದ ಪ್ರಮುಖ ರಸ್ತೆ ಮ- ನಗರಗಳಲ್ಲಿ ನಿಗಾ ವಹಿಸಲು 17ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ 38 ಸಿಸಿ ಕ್ಯಾಮೇರಾಗಳನ್ನುಅಳವಡಿಸುವ ಮೂಲಕ ಇಡೀ ನಗರದ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಲು ಮುಂದಾಗಿದೆ.ನಗರದ ನಾಗರೀಕ ಸುರಕ್ಷತೆ ಮತ್ತು ಕಜಾನೂನು ಸುವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಅಪರಾಧ ಚಟುವಟಿಕೆಗಳು ನಡೆಯದಂತೆ ತಡೆಹಿಡಿಯಲು ಸಿಸಿಟಿವಿ ಕಣ್ಗಾವಲಿನಲ್ಲಿಡಲು ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಯನ್ನುಇಟ್ಟಿದೆ , ಇದರಿಂದ ಸಾರ್ವಜನಿಕರು ಕೊಂಚ ಹರುಷ ವ್ಯಕ್ತಪಡಿಸುತ್ತಿದ್ದಾರೆ.
ಎಲ್ಲೆಲ್ಲಿ ಹೊಸ ಸಿಸಿ ಕ್ಯಾಮರಾ ಅಳವಡಿಕೆ:ಅಂಬೇಡ್ಕರ್ ಸರ್ಕಲ್ , ವಾಲ್ಮೀಕಿ ಸರ್ಕಲ್ ,ಹೌಸಿಂಗ್ ಬೋರ್ಡ್, ಕೃಷಿ ತರಬೇತಿ ಕೇಂದ್ರ ರಸ್ತೆ, ಕಂಪ್ಲಿ ತುಂಗಭದ್ರಾ ಸೇತುವೆ, ಹೊಸ ಬಸ್ ನಿಲ್ದಾಣ, ಉದ್ಭವ ಗಣಪತಿ ದೇವಸ್ಥಾನ, ನಡುಲ್ ಮಸೀದಿ ,ಸರ್ಕಾರಿ ಆಸ್ಪತ್ರೆ, ಮಾರಮ್ಮ ದೇವಸ್ಥಾನ, ಸಾಯಿಬಾಬಾ ಗುಡಿ ದೇವಸ್ಥಾನ ರಸ್ತೆ, ಸೇರಿ ನಗರದ ವಿವಿಧಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
