ಪಂಜಾಬಿ ಹಾಸ್ಯ ನಟ ಜಸ್ವಿಂದರ್ ಭಲ್ಲಾ ನಿಧನ : ಮೌನವಾದ ಚಿತ್ರರಂಗ !

ಭಾರಿ ಮೆಚ್ಚುಗೆ ಪಡೆದಂಥಹ ಮತ್ತು ಹಲವಾರು ಚಿತ್ರಗಳಲ್ಲಿ ನಟಿಸಿ ಜನರನ್ನು ನಕ್ಕು ನಗಿಸಿದ ಪಂಜಾಬಿ ಹಾಸ್ಯ ನಟ ಜಸ್ವಿಂದರ್ ಭಲ್ಲಾ ನಿಧನರಾಗಿದ್ದಾರೆ . ಪಂಜಾಬಿ ಚಿತ್ರೋದ್ಯಮ ಸಂಪೂರ್ಣವಾಗಿ ಮೌನವಾಗಿದೆ. ಜನಪ್ರಿಯ ಪಂಜಾಬಿ ನಟ-ಹಾಸ್ಯನಟ ಜಸ್ವಿಂದರ್ ಭಲ್ಲಾ 65 ವರ್ಷದವರಾಗಿದ್ದುಇಂದು ಬೆಳಗ್ಗೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆಗಸ್ಟ್ 23 ರಂದು ಮಧ್ಯಾಹ್ನ 12 ಗಂಟೆಗೆ ಮೊಹಾಲಿಯ ಬಲೋಂಗಿ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ಏರ್ಪಾಡು ಮಾಡಿಕೊಳ್ಳಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಭಿಮಾನಿಗಳು ಮತ್ತು ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಅಂತಿಮ ನಮನ ಸಲ್ಲಿಸಲು ಸೇರುವ ನಿರೀಕ್ಷೆಯಿದೆ.
ವರದಿಗಳ ಪ್ರಕಾರ,ಕಳೆದ ಕೆಲ ತಿಗಳಿನಿಂದ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಭಲ್ಲಾ ಸಾವಿನ ಸುದ್ದಿ ಪಂಜಾಬಿ ಚಲನಚಿತ್ರೋದ್ಯಮ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಆಘಾತಗೊಳ್ಳುವಂತೆ ಮಾಡಿದೆ. ಜನಪ್ರಿಯ ಹಾಸ್ಯ ನಟನಾಗಿದ್ದ ಭಲ್ಲಾ ಜನರ ಮನಸ್ಸಿನಲ್ಲಿ ನೆಲೆಯೂರಿದ್ದರು. ‘ಗಡ್ಡಿ ಚಲದೀ ಹೈ ಚಲ್ಲಾ ಮಾರ್ಕೆ’, ‘ಕ್ಯಾರಿ ಆನ್ ಜಟ್ಟಾ’, ‘ಜಿಂದ್ ಜಾನ್’ ಮತ್ತು ‘ಬ್ಯಾಂಡ್ ಬಾಜೆ’ ಅವರು ಅಭಿನಯಿಸಿದ ಸ್ಮರಣೀಯ ಚಿತ್ರಗಳಾಗಿವೆ.
