ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟ | ಹೋಮ್ಗಾರಡ್ ಸೇರಿ ನಾಲ್ವರಿಗೆ ಗಾಯ

ಬಾಗಲಕೋಟೆ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮಿನಿ ಸಿಲಿಂಡರ್ಗಳು ಆಕಸ್ಮಿಕವಾಗಿ ಸ್ಫೋಟಗೋಡಿರುವ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶೀವಾಜಿ ಸರ್ಕಲ್ ಬಳಿ ನಡೆದಿದೆಸಂಜೆ ಸಮಯದಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾದಂತಹ ಸಂದರ್ಭದಲ್ಲಿ ದಾದಾಫಿರ್ ಜಮಾದಾರ್ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5 ಕೆಜಿಯ ನಾಲ್ಕು ಸಿಲಿಂಡರ್ಗಳು ಆಕಸ್ಮಿಕವಾಗಿ ಸ್ಫೋಟಗೋಡಿದೆ. ಅಂಗಡಿ ಮಾಲೀಕ ದಾದಾಪಿರ್ ಜಮಾದಾರ್ ಹಾಗೂ ಬಾದಾಮಿಯ ಹೋಮ್ಗಾರ್ಡ್ ಗಳು ಸೇರಿ ೩-೪ ಜನರು ಗಾಯಗೊಂಡಿದ್ಧಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಗಾಯಾಳುಗಳನ್ನು ಸುರಕ್ಷಿತವಾಗಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ .
