ಜಗಳೂರು:ಜಗಳೂರು ತಾಲ್ಲೂಕಿನ ಹನುಮಂತಾಪುರ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿಹಳೆ ಬೋರ್ವೆಲ್ನಲ್ಲಿ ದಿನದ 24 ತಾಸು ನೀರು ಉಕ್ಕಿ ಹರಿಯುತ್ತಿದೆ. ದಿನನಿತ್ಯ ಶಾಲೆಗೆ ಬರುವಂತಹ ಶಾಲಾ ಮಕ್ಕಳು ಹರಸಾಹಸದಿಂದ ಬಂದು ಹಾಜರೆಆಗುವಂತಹ ಪರಿಸ್ಥಿತಿ ಎದುರಾಗಿದೆ.
ಕಳೆದ ದಿನಗಳ ಹಿಂದೆ ಸುರಿದ ಮಳೆಗೆ ಅಂತರ್ಜಲ ಭರ್ತಿಯಾಗಿ ಬೋರವೆಲ್ ನಲ್ಲಿ ನೀರು ಉಕ್ಕಿ ಬರುತ್ತಿರುವುದರಿಂದ ಮಕ್ಕಳ ಅಟ-ಪಾಠಕ್ಕೆ ತೊಂದರೆಯಾಗುತ್ತಿದೆ. ಪಾಚಿ ಕಟ್ಟಿದ ಹಸಿರು ಬೆಳೆದು ಮಕ್ಕಳು ಜಾರಿ ಬಿದ್ದು ಎದ್ದು ಶಾಲೆಗೆ ಬರುವ ಮಕ್ಕಳಿಗೆ ಬೇಸರ ತಂದಿದೆ. ಇನ್ನು ಶಾಲಾ ಆವರಣದ ಸುತ್ತಲೂ ತ್ಯಾಜ್ಯಗಳಿಂದ ಕೂಡಿ ಗಿಡ ಗೆಂಟೆ, ಸೊಳ್ಳೆಗಳ ತಾಣವಾದ ಸ್ಥಳ ಅಶುಚಿತ್ವದಿಂದ ಕೂಡಿದೆ. ಮಕ್ಕಳು ಕೂತು ಅಭ್ಯಾಸ ಮಾಡಲು ಕಿರಿಕಿರಿ ಆಗುತ್ತಿದೆ ಎಂದು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ಬಗ್ಗೆ ತಿಳಿಸಿ ಪರಿಹಾರ ನೀಡಿ ಎಂದು ಮನವಿ ಮಾಡಿದರೂ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.ಏನು ಮಾಡುತ್ತಿದ್ದೀರಾ?ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಡುವ ಘನಾಂದರಿ ಅಭಿವೃದ್ದಿ ಕೆಲಸ, ಜಗಳೂರು ಆಡಳಿತ ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ಸಂಸದರು ಕೆಸರು ಗದ್ದೆಯಂತಾಗಿರುವ ಶಾಲಾ ವಲಯವೇ ಜಲಾವೃತಗೊಂಡಿರುವುದು ನಿಮಗೆ ಕಾಣಿಸುತ್ತಿಲ್ಲವೇ?ಒಮ್ಮೆ ಬಂದು ನೋಡಿ, ಹದಗೆಟ್ಟಿರುವ ಶಾಲಾ ಅವ್ಯವಸ್ಥೆಯನ್ನು ನೋಡಿ ! ಶಿಕ್ಷಕರು-ಮಕ್ಕಳು ದಿನಂಪ್ರತಿ ಅನುಭವಿಸುವ ಯಾತನೆಗೆ ಪರಿಹಾರ ನೀಡಿ, ಕನಿಷ್ಠವಾದರು ಶಾಲಾ ಆವರಣದಲ್ಲಿ ಮಕ್ಕಳು ಶಾಲೆಗೆ ಬರುವಂತೆ ಅಂಗಳವನ್ನು ಅಬಿವೃದ್ಧಿಪಡಿಸುವಂತೆ ಮಕ್ಕಳು, ಪೋಷಕರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
