

ಬೆಂಗಳೂರು : ಜಿಬಿಎ ನಗರದ ಎಲ್ಲಾ 24 ವಲಯಗಳಲ್ಲಿಯೂ 17,924 ರಸ್ತೆಗುಂಡಿಗಳ ದುರಸ್ತಿಕಾರ್ಯ ಮಾಡುವುದಾಗಿ ತಿಳಿಸಿದೆ. ರಸ್ತೆ ಗುಂಡಿ ಮುಚ್ಚುವ ಕಾರ್ಯಾಚರಣೆಯು ನವೆಂಬರ್ 10ರೊಳಗೆ ರಾಜಧಾನಿಯ ಎಲ್ಲಾ ರಸ್ತೆಗಳು ಗುಂಡಿಮುಕ್ತವಾಗಿಸಬೆಕು ಎನ್ನುವ ನಿಟ್ಟಿನಲ್ಲಿ ಸುಮಾರು 100 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ನಗರದಲ್ಲಿ ಸುಮಾರು 18,000 ರಸ್ತೆ ಗುಂಡಿಗನ್ನು ಮುಚ್ಚಲಾಗಿದೆ, ಜಂಕ್ಷನ್ಗಳ ಅಭಿವೃದ್ಧಿಗೆ 100 ಕೋಟಿ ವೆಚ್ಚ ಮಾಡಲಾಗಿದೆ ಎಂದು ಜಿಬಿಎ ಆಯುಕ್ತರು ತಿಳಿಸದ್ದಾರೆ. ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ ಸುಮಾರು 694 ಕೋಟಿ ರೂಪಾಯಿ ವೆಚ್ಚದಲ್ಲಿ 386.5 ಕಿ.ಮೀ ರಸ್ತೆಗಳ ಡಾಂಬರೀಕರಣ ನಡೆಯುತ್ತಿದ್ದು, ಶೇ.44ರಷ್ಟು ಕೆಲಸ ಪೂರ್ಣಗೊಂಡಿದ್ದು, ಉಳಿದ ಕೆಲಸವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮಾಹಿರಿ ನೀಡಿದ್ದಾರೆ.
ಇನ್ನು ಬೆಂಗಳೂರು ರಾಜಧಾನಿಯ ವಲಯಗಳಾದ
ಬೆಂಗಳೂರು ಸೆಂಟ್ರಲ್:2,319
ಬೆಂಗಳೂರು ಉತ್ತರ : 3,375
ಬೆಂಗಳೂರು ಪೂರ್ವ : 3,325
ಬೆಂಗಳೂರು ಪಶ್ಚಿಮ : 5,530
ಬೆಂಗಳೂರು ದಕ್ಷಿಣ : 3,136
ಬಿ.ಸ್ಮಯಿಲ್: 239
ಸೇರಿ ಒಟ್ಟು 17,924 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಜಬಿಎ ಮಾಹಿತಿ ನೀಡಿದೆ.
