ವಿಜಯನಗರ : ಕಳಪೆ ಕಾಮಗಾರಿ ಕುರಿತು ದೂರು ಕೊಟ್ಟಿರುವುದರ ಕುರಿತು ಮಾಹಿತಿ ಕೇಳಲು ಹೋದರೈತನಿಗೆ ಜಿಲ್ಲಾ ಅಧಿಕಾರಿಯೊಬ್ಬನು ರೈತ ಧರಿಸಿದ ಸಮವಸ್ತ್ರದ ಬಗ್ಗೆ ಕೆಟ್ಟದಾಗಿ ಮಾತನಾಡಿದಅಧಿಕಾರಿ ಮೊಹಮ್ಮದ್ ಯೂಸುಫ್ .ಹಗರಿಬೊಮ್ಮನಹಳ್ಳಿ ವಲ್ಲಭಾಪುರ ಗ್ರಾಮದಲ್ಲಿ ನಡೆದಿದೆ.
ರೈತ ಆದರೆ ಏನಾಯ್ತು ? ಕಚೇರಿಗೆ ಬರುವಾಗ ಉತ್ತಮ ಪ್ಯಾಂಟು ಶರ್ಟು ಧರಿಸಿ ಬನ್ನಿ, ಕಚೆರಿಯಲ್ಲಿ ಮಹಿಳಾ ಸಿಬ್ಬಂದಿಗಳು ಕೆಲಸ ಮಾಡುತ್ತಿರುತ್ತಾರೆ ಎಂದು ರೈತರಿಗೆ ಅವಮಾನ ಮಾಡಿದ್ದಾರೆ. ನಿಮಗೆ ಪ್ಯಾಂಟ್ ಶರ್ಟ್ ಧರಿಸಿ ಬರಲು ಆಗೋದಿಲ್ಲ ಎಂದರೆ ಲುಂಗಿ ಶಾರ್ಟು ಬಿಚ್ಚಿ ಇಟ್ಟು ಬನ್ನಿ ಎಂದು ರೈತರಿಗೆ ಅವಮಾನವಾಗ ನಿಟ್ಟಿನಲ್ಲಿ ವರ್ತಿಸಿದ ಅಧಿಕಾರಿ. ಹಗರಿಬೊಮ್ಮನಹಳ್ಳಿ ತಾಲೂಕಿನ ವಲ್ಲಭಾಪುರ ಗ್ರಾಮ ಪಂಚಾಯಿತಿಯಲ್ಲಿ ನೆರೆಗೆ ಕಾಮಗಾರಿಗೆ ಸಂಬಂಧಪಟ್ಟಂತೆ ಯಂತ್ರಗಳ ಮೂಲಕ ಕಾಮಗಾರಿ ಮಾಡಿದ್ದಾರೆ. ಎಂದು ರೈತರದ ಷಣ್ಮುಖಪ್ಪ ಅವರು ಜಿಲ್ಲಾ ಪಂಚಾಯತಿ ಕಚೇರಿಗೆ ಲಿಖಿತ ರೂಪದಲ್ಲಿ ಮನವಿ ಮಾಡಿದರೂ ಸಹ ಯಾವುದೇ ಸ್ಪಂದನೆ ಅಧಿಕಾರಿಗಳಿಂದ ಬಂದಿರುವುದಿಲ್ಲ.
ಮೇಲ್ನೋಟಕ್ಕೆ ಅಧಿಕಾರಿಗಳು ಕಳಪೆ ಕಾಮಗಾರಿಯಲ್ಲಿ ಶಾಮಿಲಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದರ ಬಗ್ಗೆ ಕೇಳಲು ಸ್ವತಹ ರೈತರಾದ ಷಣ್ಮುಖಪ್ಪನವರು ಜಿಲ್ಲಾ ಕಚೇರಿಗೆ ಹೋದಾಗ ಬಟ್ಟೆ ಕಳಚಿಟ್ಟು ಬನ್ನಿ ಎಂದು ಕೆಟ್ಟದಾಗಿ ಮಾತನಾಡಿರುತ್ತಾರೆ. ಅಧಿಕಾರಿಗಳ ವರ್ತನೆಯಿಂದ ಮನನೊಂದ ರೈತ ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದ್ದಾರೆ.
ಇಂತಹ ಅಧಿಕಾರಿಗಳು ಇರುವುದರಿಂದ ಯಾವುದೇ ಗ್ರಾಮೀಣ ಮಟ್ಟದಲ್ಲಿ ರೈತರಿಗೆ ಗೌರವೂ ದೊರಕುತ್ತಿಲ್ಲ. ಇಂತಹ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕೆಂದು ರೈತ ಷಣ್ಮುಖಪ್ಪ ನವರು ಜಿಲ್ಲಾಪಂಚಾಯಿತಿ ಕಚೇರಿಗೆ ಹೋಗಿ ಮನವಿ ಮೂಲಕ ಪತ್ರವನ್ನು ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟಿರುತ್ತಾರೆ.
