ಬೆಂಗಳೂರು: ಕೆಜಿಎಫ್-2 ಯಶಸ್ಸಿನ ಬಳಿಕ ಯಶ್ ಅವರ ಮಾರುಕಟ್ಟೆ ಮೌಲ್ಯ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಈಗ ‘ಟಾಕ್ಸಿಕ್‘ ಸಿನಿಮಾವು ಆಂಧ್ರಪ್ರದೇಶ ಮತ್ತು ತೆಲಂಗಾಣದ (APTS) ಚಿತ್ರಮಂದಿರಗಳ ವಿತರಣಾ ಹಕ್ಕಿನ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ.
ವರದಿಗಳ ಪ್ರಕಾರ, ಈ ಎರಡು ರಾಜ್ಯಗಳ ವಿತರಣಾ ಹಕ್ಕುಗಳು ಸುಮಾರು ₹120 ಕೋಟಿಗೂ ಅಧಿಕ (Advance on Commission basis) ಮೊತ್ತಕ್ಕೆ ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ. ಇದು ತೆಲುಗು ಅಲ್ಲದ ಸಿನಿಮಾವೊಂದು ಆ ರಾಜ್ಯಗಳಲ್ಲಿ ಪಡೆದ ಅತ್ಯಂತ ದೊಡ್ಡ ಮೊತ್ತದ ವ್ಯವಹಾರವಾಗಿದೆ.
ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಬಿಡುಗಡೆ
ನಿರ್ದೇಶಕಿ ಗೀತು ಮೋಹನ್ದಾಸ್ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾವು ಮಾರ್ಚ್ 19, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಇದೇ ದಿನ ಬಾಲಿವುಡ್ನ ಬಹುನಿರೀಕ್ಷಿತ ಚಿತ್ರ ‘ಧುರಂಧರ್ 2’ ಕೂಡ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಬೃಹತ್ ಸಮರವೇ ನಡೆಯಲಿದೆ. ಆದರೆ ಬುಕ್ ಮೈ ಶೋ (BookMyShow) ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಯಶ್ ಅವರ ‘ಟಾಕ್ಸಿಕ್’ ಸಿನಿಮಾಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ.
ಇದನ್ನೂ ಓದಿ | ಹಂಸಲೇಖಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿ
ಈ ಸಿನಿಮಾದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರಂತಹ ಘಟಾನುಘಟಿ ನಾಯಕಿಯರು ನಟಿಸಿದ್ದಾರೆ. ಸಿನಿಮಾವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ತೆರೆಗೆ ಬರಲಿದೆ. 1980ರ ದಶಕದ ಗೋವಾದ ಡ್ರಗ್ ಕಾರ್ಜೆಲ್ ಹಿನ್ನೆಲೆಯ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎನ್ನಲಾಗಿದೆ.
