ಪ್ರಜ್ವಲ್ ದೇವರಾಜ್ Prajwal Devaraj ಕರಾವಳಿ ಸಿನಿಮಾ ಬಿಡುಗಡೆಗೂ ಮುನ್ನವೇ ಸದ್ದು ಮಾಡಿದೆ. ಅಭಿಮಾನಿಗಳು ಗಲಾಟೆ ನಡೆಸಿದ ಕಾರಣ ಸಖತ್ ಸುದ್ದಿ ಆಗಿತ್ತು. ಅಲ್ಲದೇ ಬಿಡುಗಡೆ ಆದ ಟ್ರೈಲರ್ ಸಹ ಪ್ರೇಕ್ಷಕರ ಗಮನ ಸೆಳೆದಿತ್ತು. ಈ ಸಿನಿಮಾದಲ್ಲಿ ಹಲವು ಒಳ್ಳೆಯ ಪ್ರತಿಭಾವಂತರಿದ್ದು, ಇದೀಗ ಆ ತಂಡಕ್ಕೆ ಮತ್ತೊಬ್ಬರು ಹಿರಿಯ ಕಲಾವಿದೆ ಜೊತೆಯಾಗಿದ್ದಾರೆ. ಖ್ಯಾತ ಗಾಯಕಿ, ರಂಗಭೂಮಿ ಪ್ರವೀಣೆ, ನಟಿ ಜಯಶ್ರೀ ಇದೀಗ ‘ಕರಾವಳಿ’ ಸಿನಿಮಾಕ್ಕಾಗಿ ಹಾಡೊಂದನ್ನು ಹಾಡಿದ್ದಾರೆ.

ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಗಲಾಟೆ ನಡೆಸಿದ ಕಾರಣ ಸಖತ್ ಸುದ್ದಿ ಆಗಿತ್ತು. ಟ್ರೈಲರ್ ಸಹ ಪ್ರೇಕ್ಷಕರ ಗಮನ ಸೆಳೆದಿತ್ತು. ಕರಾವಳಿ ಸಿನಿಮಾಗೆ ಮತ್ತೊಬ್ಬರು ಹಿರಿಯ ಕಲಾವಿದೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಕೆಲವು ಕನ್ನಡ ಸಿನಿಮಾಗಳನ್ನು ಹಾಡಿರುವ ಜಯಶ್ರೀ ಅವರು ಸಿನಿಮಾ ಗೀತೆಯೊಂದನ್ನು ಹಾಡಿ ಬಹಳ ವರ್ಷಗಳೇ ಆಗಿದ್ದವು. ಇದೀಗ ಹಲವು ವರ್ಷಗಳ ಬ್ರೇಕ್ ಬಳಿಕ ಜಯಶ್ರೀ ಅವರು ಮತ್ತೆ ಸಿನಿಮಾ ಹಾಡಿಗೆ ಧ್ವನಿ ನೀಡಿದ್ದಾರೆ.
‘ಕರಾವಳಿ’ ಸಿನಿಮಾ ಮೂಲಕ ಜಯಶ್ರೀ ಅವರು ಸಿನಿಮಾಕ್ಕಾಗಿ ಹಾಡು ರೆಕಾರ್ಡ್ ಮಾಡುತ್ತಿರುವ ವಿಡಿಯೋ ಒಂದನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಎಲ್ಲ ರೀತಿಯ ಹಾಡುಗಳನ್ನು ಲೀಲಾಜಾಲವಾಗಿ ಹಾಡಬಲ್ಲ ಜಯಶ್ರೀ ಅವರು ‘ಕರಾವಳಿ’ ಸಿನಿಮಾಕ್ಕೆ ಯಾವ ರೀತಿಯ ಹಾಡು ಹಾಡಿದ್ದಾರೆ ಎಂಬ ಕುತೂಹಲ ಇದೆ. ಸಚಿನ್ ಬಸ್ರೂರು ಸಂಯೋಜನೆ ಮಾಡಿರುವ ಹಾಡನ್ನು ಜಯಶ್ರೀ ಹಾಡಿದ್ದಾರೆ. ಹಾಡು ಈಗಾಗಲೇ ರೆಕಾರ್ಡ್ ಆಗಿದ್ದು, ಜಯಶ್ರೀ ಅವರು ಬಹಳ ಖುಷಿಯಿಂದಲೇ ಹಾಡು ಹಾಡಿದ್ದಾರೆ. ಕರಾವಳಿ ಸಿನಿಮಾ ಹಾಡಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿದ್ದು ಯಾವ ರೀತಿ ಸೌಂಡ್ ಮಾಡುತ್ತೆ ಎಂಬುದ್ದನ್ನು ಕಾದು ನೋಡಬೇಕಿದೆ.
