ಲವ್ಲಿನಾ ಬೊರ್ಗೊಹೈನ್ 2026: ಗ್ಲ್ಯಾಸ್ಗೋ ಕಾಮನ್ವೆಲ್ತ್ ಗೇಮ್ಸ್ನ 75 ಕೆಜಿ ಬಾಕ್ಸಿಂಗ್ನಲ್ಲಿ ಲವ್ಲಿನಾ ಬೊರ್ಗೊಹೈನ್ ಸೆಮಿಫೈನಲ್ಗೆ ಬೈ ಮೂಲಕ ಪ್ರವೇಶಿಸಿ ಭಾರತಕ್ಕೆ ಮೊದಲ ಕಂಚಿನ ಪದಕ ಖಚಿತಪಡಿಸಿದ್ದಾರೆ. ಪ್ರಮುಖ ಕ್ರೀಡೆಗಳ ಅನುಪಸ್ಥಿತಿಯ ನಡುವೆಯೂ, ಲವ್ಲಿನಾ ಸಾಧನೆ ಭಾರತದ ಪದಕಗಳ ಸಂಖ್ಯೆಯನ್ನು 30ಕ್ಕೂ ಹೆಚ್ಚಿಸುವ ಭರವಸೆ ಮೂಡಿಸಿದೆ. ಇದು ಭಾರತೀಯ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಉಂಟುಮಾಡಿದೆ.
ಗ್ಲ್ಯಾಸ್ಗೋ, ಜು.24 : ಸ್ಕಾಟ್ಲ್ಯಾಂಡ್ನ ಗ್ಲ್ಯಾಸ್ಗೋ ನಗರದಲ್ಲಿ ಶುರುವಾಗಲಿರುವ 2026ರ ಕಾಮನ್ವೆಲ್ತ್ ಗೇಮ್ಸ್ (CWG) ನ ಅಧಿಕೃತ ಉದ್ಘಾಟನಾ ಸಮಾರಂಭಕ್ಕೂ ಮುನ್ನವೇ ಭಾರತೀಯ ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿ ದೊರೆತಿದೆ. ಭಾರತದ ತಾರಾ ಬಾಕ್ಸರ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಲವ್ಲಿನಾ ಬೊರ್ಗೊಹೈನ್ ಅವರು ಮಹಿಳೆಯರ 75 ಕೆಜಿ ವಿಭಾಗದಲ್ಲಿ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಮೊದಲ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ನ ಬಾಕ್ಸಿಂಗ್ ನಿಯಮಗಳ ಪ್ರಕಾರ ಸೆಮಿಫೈನಲ್ನಲ್ಲಿ ಸೋಲುವ ಇಬ್ಬರೂ ಸ್ಪರ್ಧಿಗಳಿಗೂ ಕಂಚಿನ ಪದಕ ನೀಡಲಾಗುತ್ತದೆ. ಡ್ರಾ ಪ್ರಕ್ರಿಯೆಯಲ್ಲಿ ಲವ್ಲಿನಾ ಅವರಿಗೆ ‘ಬೈ’ (Bye) ಲಭಿಸಿ ನೇರವಾಗಿ ಅಂತಿಮ ನಾಲ್ಕರ ಘಟ್ಟ ತಲುಪಿರುವುದರಿಂದ, ಅವರು ರಿಂಗ್ಗೆ ಇಳಿಯುವ ಮುನ್ನವೇ ಪದಕ ಖಾತರಿಯಾಗಿದೆ.
ಲವ್ಲಿನಾ ಅವರ ಈ ಪದಕದ ಖಾತ್ರಿಯು ಭಾರತದ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವ ಭರವಸೆಯನ್ನು ಮೂಡಿಸಿದೆ. 2022ರ ಬರ್ಮಿಂಗ್ಹ್ಯಾಮ್ ಆವೃತ್ತಿಯಲ್ಲಿ ಭಾರತ ಒಟ್ಟು 61 ಪದಕಗಳನ್ನು ಗೆದ್ದು ಅಭೂತಪೂರ್ವ ಸಾಧನೆ ಮಾಡಿತ್ತು. ಈ ಬಾರಿ ಹೆಚ್ಚು ಪದಕ ಗೆಲ್ಲುವ ಭರವಸೆ ಮೂಡಿದೆ.
