Karnataka Voter List Revision: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬರೋಬ್ಬರಿ 16.3 ಲಕ್ಷಕ್ಕೂ ಹೆಚ್ಚು ಮತದಾರರು ಪತ್ತೆಯಾಗಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಅವರು ಅಂಕಿ-ಅಂಶಗಳ ಸಮೇತ ಅಧಿಕೃತ ಮಾಹಿತಿ ನೀಡಿದ್ದಾರೆ.
ಬೆಂಗಳೂರು, ಆ. 05: ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆಗಸ್ಟ್ 8ರ ವರೆಗೂ ನಡೆಯಲಿದ್ದು, ಮನೆ-ಮನೆ ಗಣತಿ ಡಿಜಿಟಲೀಕರಣ ಕಾರ್ಯ ಶೇ.99.84ರಷ್ಟು ಪೂರ್ಣಗೊಂಡಿದೆ. ರಾಜ್ಯದಲ್ಲಿ 5,54,32,314 ಕೋಟಿ ಮತದಾರರಿದ್ದು, ಎಲ್ಲಾ 5.54 ಕೋಟಿ ಎಣಿಕೆ ನಮೂನೆಗಳನ್ನು ಮುದ್ರಿಸಿ BLOಗಳಿಗೆ ವಿತರಣೆ ಮಾಡಲಾಗಿದೆ. ಈ ಪೈಕಿ ಸಾರ್ವಜನಿಕರು 6,88,525 ಮತದಾರರು ಆನ್ಲೈನ್ ಮೂಲಕವೇ ನಮೂನೆ ಸಲ್ಲಿಕೆ ಮಾಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.
4,43,04,632 (79.80%) ಮತದಾರರ ವಿವರಗಳು ಡಿಜಿಟಲಿಕರಣ ಸಕ್ರಿಯ ಎಂದು ದೃಢೀಕರಣವಾಗಿದೆ. 1,11,07,461 (20.04%) ದಾಖಲೆಗಳು ASDDO ಪರಿಶೀಲನಾ ವರ್ಗಕ್ಕೆ ಸೇರಿವೆ. 66,64,943(12.02%) ಮತದಾರರು ಶಾಶ್ವತ ಸ್ಥಳಾಂತರಗೊಂಡಿರುವುದು ಪತ್ತೆಯಾಗಿದ್ದು, 16,30,872 (2.94%) ಮೃತರ ಬಗ್ಗೆ ಮಾಹಿತಿ ಸಿಕ್ಕಿದೆ. 16,30,753 (2.94%) ಪತ್ತೆಯಾಗದ/ಗೈರುಹಾಜರಾದ ಮತದಾರರ ಮಾಹಿತಿ ಸಿಕ್ಕಿದ್ದು, 5,02,235 (0.91%) ‘ಇತರೆ’ ವರ್ಗದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. 16,30,753ರಷ್ಟು ಮತದಾರರು ಪತ್ತೆಯಾಗಿಲ್ಲ ಎಂದವರು ತಿಳಿಸಿದ್ದಾರೆ.
ಮತದಾರರು ಲಿಸ್ಟ್ನಿಂದ ಹೊರಕ್ಕೆ..?
ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ಬೆಂಗಳೂರಿನಲ್ಲಿ ಅತಿ ಹೆಚ್ಚು ಮತದಾರರು ವೋಟರ್ ಲಿಸ್ಟ್ನಿಂದ ಉಳಿಯುತ್ತಾರಾ ಎಂಬ ಪ್ರಶ್ನೆಯೀಗ ಉದ್ಭವಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ.45ರಷ್ಟು ಮತದಾರರು ನಾಪತ್ತೆಯಾಗಿದ್ದರೆ, ಬೆಂಗಳೂರು ಉತ್ತರದಲ್ಲಿ ಶೇಕಡಾ 47ರಷ್ಟು ಮತದಾರರ ಪತ್ತೆ ಆಗಿಲ್ಲ. ಬೆಂಗಳೂರು ಕೇಂದ್ರದಲ್ಲಿ ಶೇಕಡಾ 48ರಷ್ಟು ಮತದಾರ ಮಾಹಿತಿ ಲಭ್ಯವಾಗಿಲ್ಲವಾದರೆ, ಬೆಂಗಳೂರು ದಕ್ಷಿಣದಲ್ಲಿ ಶೇ. 51ರಷ್ಟು ಮತದಾರರು ನಾಪತ್ತೆಯಾಗಿದ್ದಾರೆ. ಈ ಅಂಕಿ-ಅಂಶಗಳು ಶಿಫ್ಟಿಂಗ್ ಆದವರು, ಮೃತಪಟ್ಟವರು ಮತ್ತು ಟ್ರೇಸ್ ಆಗದೇ ಇರುವವರನ್ನು ಒಳಗೊಂಡಿದೆ.
