Legendary actress Sowcar Janaki no more: 70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದ ಜಾನಕಿ ಅವರ ಕಲಾಸೇವೆಗೆ ಅವರಿಗೆ ‘ಪದ್ಮಶ್ರೀ’ ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಇದೀಗ ಈ ಹಿರಿಯ ಜೀವ ನಮ್ಮನ್ನಗಲಿದ್ದು, ಸಿನಿರಂಗದ ಅನೇಕ ಗಣ್ಯರು ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.

ಚೆನ್ನೈ, ಆ.21: ಖ್ಯಾತ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಹುಕಾರ್ ಜಾನಕಿ ನಿಧನರಾಗಿದ್ದು, ಅವರಿಗೆ 95 ವರ್ಷ ವಯಸ್ಸಾಗಿತ್ತು. ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಈ ಹಿರಿಯ ನಟಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ವಯೋಸಹಜ ಖಾಯಿಲೆಯಿಂದ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರು
1950 ರಲ್ಲಿ ನಂದಮೂರಿ ತಾರಕ್ ರಾಮರಾವ್ ಜೊತೆ ‘ಸಾಹುಕಾರ್’ ಸಿನಿಮಾದಲ್ಲಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದ ಕಾರಣಕ್ಕೆ ಮುಂದೆ ಈ ನಟಿಗೆ ‘ಸಾಹುಕಾರ್’ ಜಾನಕಿ ಎಂದೇ ಹೆಸರಾಗಿದೆ. ತಮಿಳು, ತೆಲುಗು ಹಾಗೂ ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ಸಾಹುಕಾರ್ ಜಾನಕಿ ನಟಿಸಿದ್ದಾರೆ. ಕನ್ನಡದಲ್ಲಿ ಶಬ್ದವೇದಿ, ಅಭಿ, ಒಂದೇ ಗುರಿ, ಗೀತಾ, ಕುಲಪುತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ ಈ ನಟಿ.
70 ದಶಕಗಳಲ್ಲಿ ಸರಿಸುಮಾರು 400 ಸಿನಿಮಾಗಳಲ್ಲಿ ನಟಿಸಿದ್ದ ನಟಿ ಜಾನಕಿಯವರು. ಅಂದಿನ ಹೆಚ್ಚುಕಡಿಮೆ ಎಲ್ಲಾ ಸ್ಟಾರ್ ನಟರ ಸಿನಿಮಾಗಳಲ್ಲಿ ಸಾಹುಕಾರ್ ಜಾನಕಿಯವರು ನಟಿಸಿದ್ದಾರೆ. ಈ ಕಾರಣದಿಂದಲೇ ಅವರಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಜಾನಕಿ ಅವರ ಕಲಾಸೇವೆಗೆ ಅವರಿಗೆ ‘ಪದ್ಮಶ್ರೀ’ ಸೇರಿದಂತೆ ಹಲವು ಪ್ರಶಸ್ತಿ ಲಭಿಸಿವೆ. ಇದೀಗ ಈ ಹಿರಿಯ ಜೀವ ನಮ್ಮನ್ನಗಲಿದ್ದು, ಸಿನಿರಂಗದ ಅನೇಕ ಗಣ್ಯರು ಸೋಷಿಯಲ್ ಮೀಡಿಯಾಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
