RTO Inspector-Recruitment Scam: ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳ ತನಿಖೆಯು ಆರ್ಟಿಓ ಇನ್ಸ್ಪೆಕ್ಟರ್ ಹುದ್ದೆಗಳಲ್ಲೂ ನಡೆದಿರುವ ಹಗರಣವನ್ನು ಬೆಳಕಿಗೆ ತಂದಿರುವ ಬಗ್ಗೆ ಇದರ ಬೆನ್ನಲ್ಲೇ ಬರೋಬ್ಬರಿ 70 ಆರ್ಟಿಓ ಇನ್ಸ್ಪೆಕ್ಟರ್ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ ನೀಡಲಾಗಿದೆ. ಈ ಹುದ್ದೆಗಳು ಬರೋಬ್ಬರಿ 2 ಕೋಟಿ ರೂ.ಗೆ ಡೀಲ್ ಆಗಿದ್ದವು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು, ಅ.3: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನೇಮಕಾತಿ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿವೆ. ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳ ತನಿಖೆಯು ಆರ್ಟಿಓ ಇನ್ಸ್ಪೆಕ್ಟರ್ ಹುದ್ದೆಗಳಲ್ಲೂ ನಡೆದಿರುವ ಹಗರಣವನ್ನು ಬೆಳಕಿಗೆ ತಂದಿರುವ ಬಗ್ಗೆ ಇದರ ಬೆನ್ನಲ್ಲೇ ಬರೋಬ್ಬರಿ 70 ಆರ್ಟಿಓ ಇನ್ಸ್ಪೆಕ್ಟರ್ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ ನೀಡಲಾಗಿದೆ. ಈ ಹುದ್ದೆಗಳು ಬರೋಬ್ಬರಿ 2 ಕೋಟಿ ರೂ.ಗೆ ಡೀಲ್ ಆಗಿದ್ದವು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದ ಪ್ರಮುಖ ರೂವಾರಿ ಬಸವರಾಜ್ ಕನ್ನಾಳೆ 1400ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸಂಪರ್ಕಿಸಿ ಹಣಕ್ಕಾಗಿ ಡೀಲ್ ಕುದುರಿಸಿದ್ದ. 70-80 ಲಕ್ಷ ರೂ.ಗೆ ಡೀಲ್ ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳಿಂದ ಖಾಲಿ ಚೆಕ್ಗಳಿಗೆ ಸಹಿ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇಡಿ ಅಧಿಕಾರಿಗಳು ಕೆಪಿಎಸ್ಸಿ ಕಚೇರಿಯಲ್ಲಿ ತಲಾಶ್ ನಡೆಸಿ ಖಾಲಿ ಚೆಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಪಿಎಸ್ಸಿ ಕಾರ್ಯದರ್ಶಿ ಕೆ.ಜ್ಯೋತಿ ಅವರ ಸೂಚನೆ ಮೇರೆಗೆ 70 ಆರ್ಟಿಓ ಇನ್ಸ್ಪೆಕ್ಟರ್ಗಳ ಆಯ್ಕೆ ಪಟ್ಟಿಗೆ ತಡೆ ನೀಡಲಾಗಿದ್ದು, ಹಗರಣದ ಸಂಪೂರ್ಣ ವಿವರ ಆಳವಾದ ತನಿಖೆಯಿಂದ ಬಯಲಾಗಬೇಕಿದೆ.
