Does he have 2 horns on his head as soon as he becomes a District Collector? Are you a police officer? - HD Kumaraswamy's argument against Hassan DC..?
ಜಿಲ್ಲಾಧಿಕಾರಿಯಾದ ತಕ್ಷಣ ತಲೆಯ ಮೇಲೆ 2 ಕೊಂಬು ಇದೆಯಾ? ಪಾಳೆಗಾರರಾ? – ಹಾಸನ ಡಿಸಿ ವಿರುದ್ಧ ಎಚ್ಡಿ ಕುಮಾರಸ್ವಾಮಿ ಗರಂ ಜಿಲ್ಲಾಧಿಕಾರಿಯಾದ ತಕ್ಷಣ ತಲೆಯ ಮೇಲೆ 2 ಕೊಂಬು ಇದೆಯಾ? ಪಾಳೆಗಾರರಾ? – ಹಾಸನ ಡಿಸಿ ವಿರುದ್ಧ ಎಚ್ಡಿ ಕುಮಾರಸ್ವಾಮಿ ಗರಂ
ಗಣೇಶೋತ್ಸವ ವಿಚಾರದಲ್ಲಿ ಹಾಸನ ಎಸ್ಪಿಗೆ ನೋಟಿಸ್ ನೀಡಿದ ಜಿಲ್ಲಾಧಿಕಾರಿ ಲತಾಕುಮಾರಿ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಡಿಸಿಯಾದ ತಕ್ಷಣ ಕೊಂಬು ಬರುತ್ತದೆಯೇ? ಅವರೇನು ಪಾಳೆಗಾರರಾ?” ಎಂದು ಪ್ರಶ್ನಿಸಿದ ಅವರು, ದುರಹಂಕಾರ ತೋರದೆ ಪರಿಮಿತಿಯಲ್ಲಿ ಕೆಲಸ ಮಾಡಬೇಕೆಂದು ಎಚ್ಚರಿಸಿದ್ದಾರೆ. ಅಲ್ಲದೆ, ಅಧಿಕಾರಿಯ ಕೆಪಿಎಸ್ಸಿ ಹಿನ್ನೆಲೆ ನೆನಪಿಸಿ, ಅವರನ್ನು ಅಮಾನತು ಮಾಡಬೇಕಿತ್ತು ಎಂದು ಕಿಡಿಕಾರಿದ್ದಾರೆ.
ಹೈಲೈಟ್ಸ್:
ಹಾಸನ ಜಿಲ್ಲಾಧಿಕಾರಿಗಳ ವಿರುದ್ಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಕಿಡಿ.
ಜಿಲ್ಲಾಧಿಕಾರಿಯಾದ ತಕ್ಷಣ ತಲೆಯ ಮೇಲೆ ಎರಡು ಕೊಂಬು ಇದೆಯಾ? ಎಂದು ಪ್ರಶ್ನಿಸಿದ ಎಚ್ಡಿ ಕುಮಾರಸ್ವಾಮಿ.
ಜಿಲ್ಲಾಧಿಕಾರಿ ಏನು ಪಾಳೆಗಾರರಾ? ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ ಎಂದ ಎಚ್ಡಿಕೆ.
![]()
ಬೆಂಗಳೂರು: ”ಜಿಲ್ಲಾಧಿಕಾರಿಯಾದ ತಕ್ಷಣ ತಲೆಯ ಮೇಲೆ ಎರಡು ಕೊಂಬು ಇದೆಯಾ? ಸ್ವಲ್ಪ ಎಚ್ಚರಿಕೆ ಇರಲಿ ಎಂದು ಹಾಸನ ಜಿಲ್ಲಾಧಿಕಾರಿಗಳ ವಿರುದ್ಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇತ್ತೀಚೆಗೆ ಗಣೇಶೋತ್ಸವ ವಿಚಾರವಾಗಿ ಹಾಸನ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾಧಿಕಾರಿಯಾದ ಕೆ. ಎಸ್. ಲತಾಕುಮಾರಿಯವರು ನೋಟಿಸ್ ಜಾರಿ ಮಾಡಿದ್ದರು. ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಕೇಂದ್ರ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಏನು ಪಾಳೆಗಾರರಾ?
“ನಾನು ಸುಮ್ಮನೆ ಮಾತಾಡೋದಿಲ್ಲ. ಎಸ್ಪಿಗೆ ನೋಟಿಸ್ ಕೊಡುತ್ತಾರೆ ಎಂದರೆ ಏನರ್ಥ? ಎಸ್ಪಿ ಕೂಡ ಹೆಣ್ಮಗಳು. ಜಿಲ್ಲಾಧಿಕಾರಿ ಏನು ಪಾಳೆಗಾರರಾ? ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ,” ಎಂದು ಹಾಸನ ಜಿಲ್ಲೆ ವಿದ್ಯಮಾನದ ವಿಚಾರವಾಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಏನು ನಡೀತಾ ಇದೆ ಕರ್ನಾಟಕದಲ್ಲಿ?
”ಎಲ್ಲಿ ಕೆಲಸ ಮಾಡುತ್ತಿದ್ದೀರಿ? ಅಧಿಕಾರ ನಡೆಸಬೇಕಾದರೆ ದುರಹಂಕಾರದಲ್ಲಿ ಏನು ಮಾಡುತ್ತಿದ್ದೇನೆ ಅನ್ನೋದು ಗೊತ್ತಾಗಬೇಕು ಮೊದಲು. ಅದನ್ನೇ ನಾನು ಹೇಳಿದ್ದೇನೆ. ಪೋಸ್ಟ್ ಮಾಡೋದು, ಸ್ಟೇಟಸ್ ಹಾಕೋದು ಅಂದರೆ ಏನು? ಯಾರು ಆ ಡಿಸಿಗೆ ಪೋಸ್ಟ್ ಮಾಡೋದಕ್ಕೆ ಅವಕಾಶ ಕೊಟ್ಟಿದ್ದು? ಸಾರ್ವಜನಿಕವಾಗಿ ಯಾರಾದರೂ ಮಾತನಾಡಿದರೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಬೇಕು. ಅಷ್ಟು ಪರಿಜ್ಞಾನ ಇಲ್ಲವಾ ಈ ಜಿಲ್ಲಾಧಿಕಾರಿಗೆ? ಏನು ಪೋಸ್ಟ್ ಮಾಡ್ತಾರೆ? ಏನು ನಡೀತಾ ಇದೆ ಕರ್ನಾಟಕದಲ್ಲಿ? ಈ ಅಧಿಕಾರಿ ಕೆಪಿಎಸ್ಸಿ ಕಾರ್ಯದರ್ಶಿ ಆಗಿದ್ದಾಗ ಏನು ಮಾಡಿದ್ದರು ಎನ್ನುವುದು ಗೊತ್ತಾ? ಅವರ ಹಣೆಬರಹ ಏನು ಎನ್ನುವುದು ಗೊತ್ತಾಗುತ್ತದೆ. ಅವರನ್ನು ರಜೆಯ ಮೇಲೆ ಕಳಿಸಿ ಸಂಸ್ಪೆಂಡ್ ಮಾಡಬೇಕಿತ್ತು. ಅದು ಬಿಟ್ಟು ಹಾಸನ ಜಿಲ್ಲಾಧಿಕಾರಿ ಹುದ್ದೆಯಲ್ಲಿ ತಂದು ಕೂರಿಸಿದ್ದಾರೆ,” ಎಂದು ಕಿಡಿ ಕಾರಿದರು.
ಕರೆದುಕೊಂಡು ಬಂದು ರಕ್ಷಣೆ..?
ಹಾಸನ ಜಿಲ್ಲಾಧಿಕಾರಿ ಆ ಹೆಣ್ಣಮಗಳು ಕೆಪಿಎಸ್ಸಿಯಲ್ಲಿಏನು ಮಾಡಿದ್ದರು ಅವರನ್ನು ಅಮಾನತು ಮಾಡಬೇಕಿತ್ತು ಆದರೆ ಇಲ್ಲಿ ಕರೆದುಕೊಂಡು ಬಂದು ರಕ್ಷಣೆ ಕೊಟ್ಟು ಇಟ್ಟುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಾಸನದ ದೇವಿಗೆರೆಯಲ್ಲಿ ಹಲವಾರು ಗಣಪತಿಗಳನ್ನು ಬಿಟ್ಟಿದ್ದಾರೆ ಎಸ್ಪಿಗೆ ನೋಟೀಸ್ ಕೊಡುತ್ತಾರೆ ಎಂದರೆ ಎಸ್ಪಿಗೆ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು. ಐಪಿಎಸ್ ಅಧಿಕಾರಿಗೆ ನೊಟೀಸ್ ಕೊಡುತ್ತಾರೆ ಹೀಗಾದರೆ ಈ ಜಿಲ್ಲೆಯಲ್ಲಿಆಡಳಿತ ಹೇಗೆ ನಡೆಸುತ್ತಾರೆ? ಜ್ಞಾನ ಇಟ್ಟುಕೊಂಡು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಆಡಳಿತ ಕೊಲ್ಯಾಫ್ಸ್ ಆಗುತ್ತೆ ಎಂದು ಎಚ್ಡಿಕೆ ಬೇಸರ ವ್ಯಕ್ತಪಡಿಸಿದರು.
