AI Clinic: Face 3D AI Clinic to start in Hubballi; Get examination report in just 30 seconds! AI Clinic: ಹುಬ್ಬಳ್ಳಿಯಲ್ಲಿ ಶುರುವಾಗಲಿದೆ ಫೇಸ್ 3ಡಿ ಎಐ ಕ್ಲಿನಿಕ್; ಕೇವಲ 30 ಸೆಕೆಂಡ್ನಲ್ಲಿ ತಪಾಸಣೆಯ ವರದಿ ಸಿಗುತ್ತಂತೆ!
ಹುಬ್ಬಳ್ಳಿಯ ವಿನಾಯಕನಗರ ಮುಖ್ಯ ರಸ್ತೆಯಲ್ಲಿ ಅಕ್ಟೋಬರ್ 14ರಂದು ಫೇಸ್ 3ಡಿ ಎಐ ಕ್ಲಿನಿಕ್ ಉದ್ಘಾಟನೆಗೆ ಸಿದ್ಧತೆ ನಡೆದಿದೆ. CBCT ಸ್ಕ್ಯಾನಿಂಗ್ ಮತ್ತು ಎಐ ತಂತ್ರಜ್ಞಾನದ ಮೂಲಕ 30 ಸೆಕೆಂಡ್ಗಳಲ್ಲಿ ಪ್ರಾಥಮಿಕ ವರದಿ ಲಭ್ಯವಾಗಲಿದೆ ಎಂದು ಸಂಸ್ಥೆಯ ಮಾಹಿತಿ ತಿಳಿಸಿದೆ.
ಹುಬ್ಬಳ್ಳಿ:ಆರೋಗ್ಯ ತಪಾಸಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಕೆಗೆ ಮತ್ತೊಂದು ಹೆಜ್ಜೆಯಾಗಿ ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಫೇಸ್ 3ಡಿ ಎಐ ಕ್ಲಿನಿಕ್ ಆರಂಭಿಸಲು ಸಿದ್ಧತೆ ನಡೆದಿದೆ. ಉತ್ತರ ಕರ್ನಾಟಕದಲ್ಲೇ ಮೊದಲ ಬಾರಿಗೆ ಇಂತಹ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ ಎಂದು ಸಂಸ್ಥೆಯ ಮಾಹಿತಿ ತಿಳಿಸಿದೆ. ತಲೆ, ಮುಖ, ದವಡೆ ಹಾಗೂ ಕುತ್ತಿಗೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ತಪಾಸಣೆಗೆ ನೆರವಾಗುವ ಈ ವ್ಯವಸ್ಥೆಯಲ್ಲಿ ಸ್ಕ್ಯಾನ್ ಬಳಿಕ ಕೇವಲ 30 ಸೆಕೆಂಡ್ಗಳಲ್ಲಿ ಎಐ ಆಧಾರಿತ ಪ್ರಾಥಮಿಕ ವರದಿ ಲಭ್ಯವಾಗಲಿದೆ ಎನ್ನಲಾಗಿದೆ. ಹುಬ್ಬಳ್ಳಿಯ ವಿನಾಯಕನಗರ ಮುಖ್ಯ ರಸ್ತೆಯಲ್ಲಿ ಕ್ಲಿನಿಕ್ ಸ್ಥಾಪನೆಯಾಗುತ್ತಿದ್ದು, ಅಕ್ಟೋಬರ್ 14 ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ನಿಗದಿಯಾಗಿದೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ತೆಂಗಿನಕಾಯಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಸುಮಾರು ₹65 ಲಕ್ಷ ವೆಚ್ಚದ ತಂತ್ರಜ್ಞಾನ:
