Mangaluru Collage Protest: Accused of touching college students during protest; Massive outrage against male police in Mangaluru..? Mangaluru Collage Protest: ಪ್ರತಿಭಟನೆ ವೇಳೆ ಕಾಲೇಜು ವಿದ್ಯಾರ್ಥಿನಿಯರ ಮೈ ಮುಟ್ಟಿದ ಆರೋಪ; ಮಂಗಳೂರಲ್ಲಿ ಪುರುಷ ಪೊಲೀಸರ ವಿರುದ್ಧ ಭಾರೀ ಆಕ್ರೋಶ
ಮಂಗಳೂರು ಅಗ್ನೆಸ್ ಕಾಲೇಜು ಮುಂಭಾಗ ಪುರುಷ ಪೊಲೀಸರು ವಿದ್ಯಾರ್ಥಿನಿಯರ ಮೈ ಮುಟ್ಟಿದ ಆರೋಪ ಕೇಳಿ ಬಂದಿದ್ದು, ಆಕ್ರೋಶ ಹೊರಹಾಕಿದ್ದಾರೆ.

ಮಂಗಳೂರು ಅ.12: ರಂದು ದಸರಾ ಹಬ್ಬದ ರಜೆಯಲ್ಲೂ ಪರೀಕ್ಷೆಗಳನ್ನು ಆಯೋಜಿಸಿರುವ ಮಂಗಳೂರಿನ ಪ್ರತಿಷ್ಠಿತ ಸೈಂಟ್ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಮತ್ತು ಎಬಿವಿಪಿ ಸಂಘಟನೆಯು ಪ್ರತಿಭಟನೆಗೆ ಇಳಿದಿದೆ. ಬೆಳಗ್ಗೆಯಿಂದಲೂ ಪ್ರತಿಭಟನೆ ನಡೆಸುತ್ತಿದ್ರೂ ಆಡಳಿತ ವರ್ಗ ಸ್ಪಂದಿಸುತ್ತಿಲ್ಲ. ಇತ್ತ ಪ್ರತಿಭಟನೆ ನಿಯಂತ್ರಿಸಲು ಬಂದ ಪುರುಷ ಪೊಲೀಸರು ವಿದ್ಯಾರ್ಥಿನಿಯರ ಮೈಮುಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ತಳ್ಳಾಟ-ನುಕ್ಕಾಟ ವೇಳೆ ಘಟನೆ ನಡೆದಿದ್ದು, ಮಹಿಳಾ ಸಿಬ್ಬಂದಿ ಇಲ್ಲ ಪೊಲೀಸರ ವಿದ್ಯಾರ್ಥಿಯರ ಮೈ ಮುಟ್ಟಿದ್ದಾರೆ ಎಂದು ಮತ್ತೊಂದೆಡೆ ಹೋರಾಟಗಾರರು ಕಿಡಿಕಾರಿದ್ದಾರೆ.
ಮಂಗಳೂರಲ್ಲಿ ವಿದ್ಯಾರ್ಥಿಗಳ ಆಕ್ರೋಶ..?
ಮಂಗಳೂರಿನ ಬೆಂದೂರ್ವೆಲ್ ಬಳಿ ಇರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್ 28 ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ನಾಡಹಬ್ಬ ದಸರಾ ಆಚರಣೆ ಹಾಗೂ ಮಂಗಳೂರು ದಸರಾದಲ್ಲಿ ಭಾಗವಹಿಸಬೇಕಿದ್ದ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿದ್ದರೂ ರಜೆ ನೀಡದೆ ಪರೀಕ್ಷೆ ನಡೆಸಲು ಮುಂದಾದ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿಯರ ಮೈ ಮುಟ್ಟಿದ ಪೊಲೀಸರು..?
ಮಂಗಳೂರು ಅಗ್ನೆಸ್ ಕಾಲೇಜು ಮುಂಭಾಗ ಪುರುಷ ಪೊಲೀಸರು ವಿದ್ಯಾರ್ಥಿನಿಯರ ಮೈ ಮುಟ್ಟಿದ ಆರೋಪ ಕೇಳಿ ಬಂದಿದ್ದು, ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ಆರಂಭದ ವೇಳೆ ಮಹಿಳಾ ಪೋಲಿಸರ ಅಭಾವ ವಿದ್ಯಾರ್ಥಿ ಮುಖಂಡರನ್ನ ವಶಕ್ಕೆ ಪಡೆಯುವ ವೇಳೆ ನೂಕಾಟ ತಳ್ಳಾಟವಾಗಿದೆ. ಈ ವೇಳೆ ವಿದ್ಯಾರ್ಥಿಯನಿಯರನ್ನ ಪೊಲೀಸರು ತಳ್ಳಾಡಿದ್ದಾರೆ ಎನ್ನುವ ಆರೋಪವಿದೆ.
ಸತತ 3 ಗಂಟೆಯಿಂದ ಪ್ರತಿಭಟನೆ..?
ಮಂಗಳೂರು ಆಗ್ನೇಸ್ ಕಾಲೇಜು ಮುಂಭಾಗ ಪ್ರತಿಭಟನೆ ನಡೆದಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾಲೇಜು ಆಡಳಿತ ಮಂಡಳಿ ಜಗ್ಗಿಲ್ಲ.ಕಾಲೇಜಿನಲ್ಲಿ ಸೆಮಿಸ್ಟರ್ ಎಕ್ಸಾಂ ನಡೆದಿದ್ದು, ಪ್ರಿನ್ಸಿಪಾಲ್ ಸ್ಥಳಕ್ಕೆ ಬರಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ಪರೀಕ್ಷೆ ನಡೆದಿದೆ.
‘ಕಾಲೇಜು ಭಾವನೆಗಳ ಜೊತೆ ಚೆಲ್ಲಾಟ ಆಡಬಾರದು’..?
ಈ ಬಗ್ಗೆ ಮಾತಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು, ದಸರಾ ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆ. ಕಾಲೇಜು ಆಡಳಿತ ಮಂಡಳಿ, ಭಾವನೆಗಳ ಜೊತೆ ಚೆಲ್ಲಾಟ ಆಡಬಾರದು. ಈಗಾಗಲೇ ಸಚಿವರ ಜೊತೆ ಮಾತನಾಡಿದ್ದೇವೆ. ಅನಾವಶ್ಯಕ ವಾಗಿ ಘರ್ಷಣೆಗೆ ಅವಕಾಶ ಮಾಡಿಕೊಡಬಾರದು. ಸರ್ಕಾರಿ ರಜೆ ದಿನ ಇರುವಾಗಲೂ ಪರೀಕ್ಷೆ ಇಟ್ಟಿದ್ದಾರೆ. ಪರೀಕ್ಷೆಗಳನ್ನು ಕಾಲೇಜು ಆಡಳಿತ ಮಂಡಳಿ ಮುಂದೂಡಬೇಕು ಎಂದಿದ್ದಾರೆ.
