ʻರೀಲ್ಸ್ಗೆ ಥರ ಥರ ಬಟ್ಟೆ, ಬಿಗ್ ಬಾಸ್ಗೆ ಒಂದೇ ಸ್ವೆಟ್ರಾ?ʼ ವೈಲ್ಡ್ ಕಾರ್ಡ್ ಕುಮಾರಿ ಹಿಗ್ಗಾಮುಗ್ಗಾ ಟ್ರೋಲ್! – “Different clothes for reels, the same sweater for Bigg Boss?” Wild Card Kumari is a troll!
ʻಬಿಗ್ ಬಾಸ್ ಕನ್ನಡ ಸೀಸನ್ 13ʼರಲ್ಲಿ ನಾಲ್ಕನೇ ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಮಾಸ್ ಡೈಲಾಗ್ಗಳೊಂದಿಗೆ ಗ್ರಾಂಡ್ ಎಂಟ್ರಿ ಕೊಟ್ಟ ನಂಜನಗೂಡಿನ ಕುಮಾರಿ, ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ಗೆ ಗುರಿಯಾಗಿದ್ದಾರೆ. ʻಅಗ್ನಿಪರೀಕ್ಷೆʼ ಮೂಲಕ ಮುಗ್ಧತೆಯಿಂದಲೇ ಕನ್ನಡಿಗರ ಮನಗೆದ್ದಿದ್ದ ಈ ಚಟಪಟಾಕಿ ಹುಡುಗಿಯ ವಿರುದ್ಧ ನೆಟ್ಟಿಗರು ಸಾಲು ಸಾಲು ಪ್ರಶ್ನೆಗಳನ್ನ ಎತ್ತುತ್ತಿದ್ದಾರೆ.
ಹೈಲೈಟ್ಸ್:
- ಬಿಗ್ ಬಾಸ್ 13ʼ ವೈಲ್ಡ್ಕಾರ್ಡ್ ಸ್ಪರ್ಧಿ ಕುಮಾರಿ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್.
- ʻದುಬೈ ಕೆಲಸ, 5 ಲಕ್ಷ ನೆರವು ಸಿಕ್ಕರೂ ಒಂದೇ ಯೂನಿಫಾರ್ಮ್ ಯಾಕೆ?ʼ ನೆಟ್ಟಿಗರ ಪ್ರಶ್ನೆ.
- ʻಅನುಕಂಪ ಗಿಟ್ಟಿಸಲು ಸಿಂಪಥಿ ಕಾರ್ಡ್ ಬಳಸ್ತಿದ್ದಾರಾ ಕುಮಾರಿ?ʼ ಟ್ರೋಲಿಗರ ಕೆಂಗಣ್ಣು.
![]()
ʻಬಿಗ್ ಬಾಸ್ ಕನ್ನಡ ಸೀಸನ್ 13ʼರ ದೊಡ್ಮನೆಗೆ ವೈಲ್ಡ್ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರುವ ನಂಜನಗೂಡಿನ ಕುಮಾರಿ, ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರ ಟ್ರೋಲ್ಗೆ ಗುರಿಯಾಗಿದ್ದಾರೆ. ‘ಅಗ್ನಿಪರೀಕ್ಷೆ’ ಮೂಲಕ ಪ್ರೇಕ್ಷಕರ ಮನಗೆದ್ದು, ಬಡತನ ಹಾಗೂ ತಾಯಿಯ ಅನಾರೋಗ್ಯದ ಹಿನ್ನೆಲೆಯಿಂದ ಜನರ ಅನುಕಂಪ ಗಳಿಸಿದ್ದ ಕುಮಾರಿ ವಿರುದ್ಧ ಈಗ ನೆಟ್ಟಿಗರು ಕಟು ಮಾತುಗಳಿಂದ ಚಾಟಿ ಬೀಸ್ತಿದ್ದಾರೆ.
ಅಂದಹಾಗೆ, ನೆಟ್ಟಿಗರ ಮುಖ್ಯ ಆರೋಪವೆಂದರೆ ಕುಮಾರಿಯ ಉಡುಪಿನ ಆಯ್ಕೆ. ʻಅಗ್ನಿಪರೀಕ್ಷೆʼಯಲ್ಲಿ ಭಾಗವಹಿಸಿದ್ದಾಗಲೂ ಕುಮಾರಿ ಅದೇ ಸ್ವೆಟರ್ ಧರಿಸಿದ್ದರು. ಈಗ ʻಬಿಗ್ ಬಾಸ್ʼಗೆ ಎಂಟ್ರಿ ಕೊಡುವಾಗಲೂ ವೇದಿಕೆಗೆ ಅದೇ ಸ್ವೆಟರ್ ಧರಿಸಿ ಬಂದಿದ್ದಾರೆ. ಆದರೆ, ಅವರ ಸೋಶಿಯಲ್ ಮೀಡಿಯಾ ಪ್ರೊಫೈಲ್ಗಳಲ್ಲಿ ಮತ್ತು ರೀಲ್ಸ್ ವಿಡಿಯೋಗಳಲ್ಲಿ ಥರ ಥರವಾದ ಉಡುಪುಗಳನ್ನ ಧರಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತೆ. ʻರೀಲ್ಸ್ ಮಾಡಲು ಹೊಸ ಹೊಸ ಮಾದರಿಯ ಬಟ್ಟೆ ಧರಿಸುವ ಕುಮಾರಿ, ʻಬಿಗ್ ಬಾಸ್ʼಗೆ ಬಂದಾಗ ಮಾತ್ರ ಅದೇ ಹಳೆಯ ಸ್ವೆಟರ್ ಏಕೆ ಧರಿಸುತ್ತಾರೆ?” ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.
ʻಬಿಗ್ ಬಾಸ್ʼ ʻಅಗ್ನಿಪರೀಕ್ಷೆʼ ಆರಂಭಿಕ ದಿನಗಳಲ್ಲೇ ಜ್ಯೂರಿಗಳಿಂದ ಮೊದಲ 4 ಸ್ಟಾರ್ಗಳನ್ನ ಪಡೆದು ಗಮನ ಸೆಳೆದಿದ್ದ ನಂಜನಗೂಡಿನ ಲಾವಣ್ಯ ಕುಮಾರಿ, ಟಾಸ್ಕ್ ಆಡುವಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದು ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮದಿಂದ ಅರ್ಧದಲ್ಲೇ ಹೊರಬರಬೇಕಾಯ್ತು. ಈ ವೇಳೆ ಅವರ ಕಷ್ಟದ ಬದುಕು, ತಾಯಿಯ ಹೃದಯ ಸಂಬಂಧಿ ಅನಾರೋಗ್ಯ ಹಾಗೂ ಜವಾಬ್ದಾರಿಗಳನ್ನ ಅರಿತ ʻಇಕೋ ಲಿಫ್ಟ್ʼ ಸಂಸ್ಥೆಯು ತಾಯಿಯ ಚಿಕಿತ್ಸೆಗೆ 5 ಲಕ್ಷ ರೂಪಾಯಿ ನೆರವು, ಕಾಲೇಜು ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಹಾಗೂ ಕೆಲಸದ ಅವಕಾಶದ ಭರವಸೆಯನ್ನ ನೀಡಿತ್ತು. ಇದೀಗ ಸಾಕಷ್ಟು ಆರ್ಥಿಕ ಬೆಂಬಲ, ದುಬೈನಲ್ಲಿ ಕೆಲಸದ ಆಫರ್ ಸಿಕ್ಕಿದ್ದರೂ ಬಿಗ್ ಬಾಸ್ನಂತಹ ದೊಡ್ಡ ವೇದಿಕೆಯಲ್ಲಿ ಪದೇ ಪದೇ ಒಂದೇ ಉಡುಪು ಧರಿಸಿ ಬರುವುದು ಕೇವಲ ಪ್ರೇಕ್ಷಕರ ಅನುಕಂಪ ಪಡೆಯಲು ಹಾಗೂ ತಮ್ಮನ್ನು ಅತ್ಯಂತ ಮುಗ್ಧರೆಂದು ಬಿಂಬಿಸಿಕೊಳ್ಳಲು ಮಾಡುತ್ತಿರುವ ತಂತ್ರವಷ್ಟೇ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.
ʻಬಿಗ್ ಬಾಸ್ʼ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲೇ, ʻಎದುರಿಗೇ ಚುಚ್ಚಿ ಬಿಡ್ತೀನಿʼ ಎಂದು ಮಾಸ್ ಡೈಲಾಗ್ ಹೊಡೆದು ಖಡಕ್ ಎಂಟ್ರಿ ಕೊಟ್ಟ ಕುಮಾರಿ, ದೊಡ್ಮನೆಯಲ್ಲಿ ತಮ್ಮ ಆಟದ ಮೂಲಕ ಈ ಟ್ರೋಲ್ಗಳಿಗೆ ಸೂಕ್ತ ಉತ್ತರ ನೀಡುತ್ತಾರಾ? ಕಾದು ನೋಡಬೇಕಿದೆ.
