DK Shivakumar: Did CM DK Shivakumar push Rahul Gandhi by holding his clothes? What is in the viral video..? – DK Shivakumar: ಸಿಎಂ ಡಿಕೆಶಿ ಬಟ್ಟೆ ಹಿಡಿದು ತಳ್ಳಿದ್ರಾ ರಾಹುಲ್ ಗಾಂಧಿ? ವೈರಲ್ ಆದ ವಿಡಿಯೋದಲ್ಲೇನಿದೆ..?
ಪ್ರತಿಭಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ದೆಹಲಿ: ನಿನ್ನೆ ರಾಷ್ಟ್ರ ರಾಜಧಾನಿ ದೆಹಲಿಯ ಬೀದಿ ಬೀದಿಗಳಲ್ಲಿ ಕಾಂಗ್ರೆಸ್ ಕಹಳೆ ಮೊಳಗಿತ್ತು. ಎಸ್ಐಆರ್ ಅಕ್ರಮ, ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ಹೋರಾಟಕ್ಕೆ ಇಂಡಿಯಾ ಬ್ಲಾಕ್ ಸಂಸದರು ಸಾಥ್ ಕೊಟ್ಟಿದ್ದರು. ಕಳೆದೊಂದು ವಾರದ ಹೋರಾಟಕ್ಕಿಂತಲೂ ನಿನ್ನೆ ಯ ಹೋರಾಟದಲ್ಲಿ ಜನಸಾಗರವೇ ಸೇರಿತ್ತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ಜೊತೆ ಸಿಎಂ ಡಿಕೆ ಶಿವಕುಮಾರ್ ಅವರು ಕೂಡ ಭಾಗಿಯಾಗಿದ್ದರು.
ಪ್ರತಿಭಟನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್..?
ರಾಹುಲ್ ಗಾಂಧಿ ಹೋರಾಟಕ್ಕೆ ಇಂಡಿಯಾ ಬ್ಲಾಕ್ ಸಂಸದರೂ ಕೈ ಜೋಡಿಸಿದ್ದರು. ಕಾನ್ಸ್ಟಿಟ್ಯೂಶನ್ ಕ್ಲಬ್ನಿಂದ ಹೊರಟ ಪಾದಯಾತ್ರೆ ಸುಪ್ರೀಂಕೋರ್ಟ್ವರೆಗೂ ಸಾಗಿತ್ತು. ದಾರಿಯುದ್ದಕ್ಕೂ ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ಕಹಳೆ ಮೊಳಗಿತ್ತು. ಆದ್ರೆ, ಪ್ರತಿಭಟನೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವಿಡಿಯೋದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಿಎಂ ಡಿಕೆ ಶಿವಕುಮಾರ್ ಅವರ ಬಟ್ಟೆ ಹಿಡಿದು ಹಿಂದಕ್ಕೆ ಜಗ್ಗಿರೋದು ಸೆರೆಯಾಗಿದೆ. ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ರಾಜ್ಯದ ಜನರಿಗೆ ಮಾಡಿರುವ ಅಪಮಾನ..?
ಇದನ್ನೇ ಅಸ್ತ್ರವಾಗಿಸಿಕೊಂಡಿರುವ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ವೇಳೆ ಸಿಎಂ ಡಿಕೆಶಿಯನ್ನು ರಾಹುಲ್ ಗಾಂಧಿ ತಳ್ಳಿದ ವಿಚಾರಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಡಿಕೆಶಿ ಕೊರಳು ಪಟ್ಟಿ ಹಿಡಿದು ರಾಹುಲ್ ಗಾಂಧಿ ತಳ್ಳಿದ್ದಾರೆ. ಇದು ಡಿಕೆ ಶಿವಕುಮಾರ್ ಗೆ ಅವಮಾನ ಅಲ್ಲ, ಇದು ರಾಜ್ಯದ ಜನರಿಗೆ ಮಾಡಿರುವ ಅಪಮಾನ, ಅವರನ್ನು ಈ ರೀತಿ ಹೀನಾಯವಾಗಿ ತಳ್ಳಿದ ನಡೆ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಇದು ನಾವೆಲ್ಲರೂ ತಲೆ ತಗ್ಗಿಸುವಂತ ಘಟನೆ..?
ಯಾವುದೇ ಪಕ್ಷದ ಹೈಕಮಾಂಡ್ ನಾಯಕರು, ಯಾವುದೇ ಮುಖ್ಯಮಂತ್ರಿಗಳಿಗೆ ಈ ರೀತಿ ಮಾಡಿಲ್ಲ, ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದಲ್ಲೇ ಕರ್ನಾಟಕ ಸಿಎಂಗೆ ಮಾಡಿದ್ದಾರೆ. ಇದು ನಾವೆಲ್ಲರೂ ತಲೆ ತಗ್ಗಿಸುವಂತ ಘಟನೆ. ರಾಹುಲ್ ಗಾಂಧಿ ಯವರಿಗೆ ಗೌರವ ಇದ್ದರೆ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಇಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಜನರು ಬಿಡಬಾರದು, ಡಿಕೆ ಶಿವಕುಮಾರ್ ಅವರನ್ನು ಕರೆಸಿಕೊಂಡಿದ್ದು ಯಾಕೇ? ಈ ರೀತಿ ಅವಮಾನ ಮಾಡಿದ್ದು ಯಾಕೇ ಇದು ಕಾಂಗ್ರೆಸ್ನ ಸಂಸ್ಕೃತಿ, ಗುಲಾಮಗಿರಿಗಿಂತ ಬಹಳ ಕೆಟ್ಟದಾಗಿರುವ ಗುಲಾಮಗಿರಿ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ವಿರುದ್ಧ ಮಾಜಿ ಸಚಿವ ಆರಗ ಜ್ಞಾನೇಂದ್ರ ಕಿಡಿ..?
ಒಬ್ಬ ಬುದ್ದಿ ಇಲ್ಲದ, ಸಾಮಾನ್ಯ ಜ್ಞಾನವೂ ಇಲ್ಲದ, ನಾನು ಏನು ಮಾಡ್ತಿದ್ದೇನೆಂದು ಅರಿವು ಇಲ್ಲದ ಎಳಸು ನಾಯಕನಿಂದ ನಮ್ಮ ಮುಖ್ಯಮಂತ್ರಿಗಳಿಗೆ ಅಪಮಾನ ಆಗಿರೋದು ನೋವಿನ ಸಂಗತಿ ಎಂದು ರಾಹುಲ್ ಗಾಂಧಿ ವಿರುದ್ಧ ಮಾಜಿ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ. ನಮ್ಮ ಮುಖ್ಯಮಂತ್ರಿಗಳನ್ನು ಕತ್ತಿನ ಪಟ್ಟಿ ಹಿಡಿದು ರಾಹುಲ್ ಗಾಂಧಿ ನೂಕಿದ್ದಾರೆ. ನನಗೆ ಆಶ್ಚರ್ಯ ಮತ್ತೆ ಆಘಾತ ಆಯಿತು, ಅವ್ರು ಎಷ್ಡೇ ಆಗಲಿ ನಮ್ಮ ನಾಡಿನ ಮುಖ್ಯಮಂತ್ರಿಗಳು, ರಾಜಕೀಯವಾಗಿ ನಮ್ಮ ಹಾಗೂ ಅವರ ನಡುವೆ ಅಂತರ ಇದೆ. ಆದರೆ ಒಬ್ಬ ಮುಖ್ಯಮಂತ್ರಿಯನ್ನು ರಾಹುಲ್ ಗಾಂಧಿ ಇಷ್ಟು ಕೀಳು ಮಟ್ಟದಲ್ಲಿ ಕಾಣಬಾರದಿತ್ತು, ಖಂಡಿತವಾಗಿಯೂ ಅವರ ನಾಡಿಗೆ ಮಾಡಿದ ಅಪಮಾನ ಇದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
