Pavithra Gowda: No sleep, can't even take off my clothes; Pavithra Gowda faces hell every day! Darshan's girlfriend is tired of her torment..?-Pavithra Gowda: ನಿದ್ದೆ ಇಲ್ಲ, ನನ್ನ ಬಟ್ಟೆಗಳನ್ನೂ ಬಿಡಲ್ಲ; ಪವಿತ್ರಾ ಗೌಡಗೆ ನಿತ್ಯ ನರಕ ದರ್ಶನ! ಇವರ ಕಾಟಕ್ಕೆ ದರ್ಶನ್ ಗೆಳತಿ ಸುಸ್ತೋ ಸುಸ್ತು..? ಸಹ ಕೈದಿಗಳ ಕಾಟಕ್ಕೆ ಬೇಸತ್ತಿರೋ ಕೊಲೆ ಆರೋಪಿ ಪವಿತ್ರಾ ಗೌಡ ದಯವಿಟ್ಟು ಬ್ಯಾರಕ್ ಬದಲಿಸಿ ಅಂತ ಪ್ರತಿನಿತ್ಯವೂ ಮನವಿ ಮಾಡ್ತಿದ್ದಾರೆ. 30 ಜನರು ಇರುವ ಮಹಿಳಾ ಬ್ಯಾರಕ್ನಲ್ಲಿ ನೈಜೀರಿಯಾ ಪ್ರಜೆಗಳ ಕಾಟ ಹೆಚ್ಚಿದೆಯಂತೆ.
ಬೆಂಗಳೂರು ಅ.14 ರಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A1 ಆಗಿ ಜೈಲು ಪಾಲಾಗಿರೋ ಪವಿತ್ರಾ ಗೌಡಗೆ ನೈಜೀರಿಯಾ ಪ್ರಜೆಗಳ ಕಾಟ ಹೆಚ್ಚಿದೆಯಂತೆ. ಇವರ ಕಾಟಕ್ಕೆ ಬೇಸತ್ತ ಪವಿತ್ರಾ ಗೌಡ ನನ್ನನ್ನು ಬೇರೆ ಬ್ಯಾರಕ್ಗೆ ಶಿಫ್ಟ್ ಮಾಡಿ ಎಂದು ಕೋರ್ಟ್ ಮೊರೆ ಹೋಗಿದ್ರು. ಸ್ಥಳಾಂತರ ಮಾಡುವಂತೆ ಜೈಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದ್ರೂ ಶಿಫ್ಟ್ ಮಾಡಿಲ್ಲವಂತೆ. ಮಧ್ಯರಾತ್ರಿಯಾದ್ರೂ ನಿದ್ದೆ ಮಾಡಲು ಬಿಡದೇ ವಿದೇಶಿ ಪ್ರಜೆಗಳು ಕಾಟ ಕೊಡ್ತಿದ್ದಾರೆ ಎಂದು ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ.
ನಿತ್ಯ ನರಕವಾಗಿದೆ, ಬ್ಯಾರಕ್ ಬದಲಿಸಿ..?
ಸಹ ಕೈದಿಗಳ ಕಾಟಕ್ಕೆ ಬೇಸತ್ತಿರೋ ಕೊಲೆ ಆರೋಪಿ ಪವಿತ್ರಾ ಗೌಡ ದಯವಿಟ್ಟು ಬ್ಯಾರಕ್ ಬದಲಿಸಿ ಅಂತ ಪ್ರತಿನಿತ್ಯವೂ ಮನವಿ ಮಾಡ್ತಿದ್ದಾರೆ. 30 ಜನರು ಇರುವ ಮಹಿಳಾ ಬ್ಯಾರಕ್ನಲ್ಲಿ ನೈಜೀರಿಯಾ ಪ್ರಜೆಗಳ ಕಾಟ ತಡೆಯೋಕೆ ಆಗ್ತಿಲ್ಲ ಎಂದು ಪವಿತ್ರಾ ಗೌಡ ಹೇಳ್ತಿದ್ದು, ಅ.13ರಂದು ನಡೆದ ಕೋರ್ಟ್ ವಿಚಾರಣೆಯಲ್ಲೂ ಸಹ ಪವಿತ್ರಗೌಡ ಪರ ನಾರಾಯಣಸ್ವಾಮಿ ಅವರು ಬ್ಯಾರಕ್ ಬದಲಾವಣೆಗೆ ಮನವಿ ಮಾಡಿದ್ರು.
ಮಧ್ಯರಾತ್ರಿಯಾದ್ರೂ ನಿದ್ದೆ ಮಾಡಲು ಬಿಡಲ್ಲ..?
ಮಧ್ಯರಾತ್ರಿವರೆಗೂ ಬ್ಯಾರಕ್ನಲ್ಲಿ ಸಹ ಕೈದಿಗಳು ನಿದ್ದೆ ಮಾಡಲು ಬಿಡಲ್ಲ. ಅಷ್ಟೇ ಅಲ್ಲದೇ ಜೊತೆಗೆ ಪವಿತ್ರಗೌಡ ಬಟ್ಟೆ ಸೇರಿ ಇತರೇ ವಸ್ತುಗಳನ್ನು ಬಳಸ್ತಾ ಇದ್ದಾರೆ. ಮಾತನಾಡಲು ಹೋದರೆ ಗಲಾಟೆ ಮಾಡ್ತಾ ಇದ್ದಾರಂತೆ. ಬ್ಯಾರಕ್ ನಲ್ಲಿ ದಿನ ಕಳೆಯೋಕೆ ಆಗದೆ ಪವಿತ್ರಾ ಗೌಡ ಪರದಾಟ ಪಡ್ತಿದ್ದಾರೆ ಎಂದು ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಕೋರ್ಟ್ ಸೂಚಿಸಿದ್ರೂ ಬ್ಯಾರಕ್ ಬದಲಿಸಿಲ್ಲ ಯಾಕೆ..?
ಈ ಹಿಂದೆಯೇ ಬ್ಯಾರಕ್ ಬದಲಾವಣೆಗೆ ಕೋರ್ಟ್ ಆದೇಶ ನೀಡಿದ್ದು, ಆದರು ಜೈಲಾಧಿಕಾರಿಗಳು ಬ್ಯಾರಕ್ ಬದಲಾವಣೆ ಮಾಡಿಲ್ಲ. ಹೀಗಾಗಿ ಯಾವ ಕಾರಣಕ್ಕೆ ಬ್ಯಾರಕ್ ಬದಲಿಸಿಲ್ಲ ಅಂತ ಕೋರ್ಟ್ ವರದಿ ಕೇಳಿದೆ. ಪವಿತ್ರಾ ಗೌಡ ಬ್ಯಾರಕ್ ನಲ್ಲಿ 30 ಮಂದಿ ಮಹಿಳಾ ಕೈದಿಗಳು ಇದ್ದಾರೆ. ಅದರಲ್ಲಿ ನಾಲ್ಕರಿಂದ ಐದು ಜನ ವಿದೇಶಿ ಪ್ರಜೆಗಳಿದ್ದು, ಅವರ ಕಾಟಕ್ಕೆ ಬೇಸತ್ತು ಪವಿತ್ರ ಗೌಡ ಬ್ಯಾರಕ್ ಬದಲಿಸಲು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಗ್ಯದಲ್ಲಿ ಏರುಪೇರು..?
ವಿದೇಶಿ ಪ್ರಜೆಗಳಿಂದ ಈಗಾಗಲೇ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಆರೋಪಿ ಪವಿತ್ರಾ ಗೌಡ ವೈದ್ಯಕೀಯ ರಿಪೋರ್ಟ್ ಕೂಡ ಕೋರ್ಟ್ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಖುದ್ದು 59 ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶರು ಜೈಲಿಗೆ ಭೇಟಿ ನೀಡಿ ಮಹಿಳಾ ಬ್ಯಾರಕ್ ಗಳ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ರು. ಇಂದೇ ಜೈಲು ಅಧಿಕಾರಿಗಳ ವರದಿ ಬಗ್ಗೆ ಮಾಹಿತಿ ಪಡೆಯುದಾಗಿ ಕೋರ್ಟ್ ತಿಳಿಸಿದೆ.
