ತಮ್ಮ ಅಪಾರ ರಾಜಕೀಯ ಅನುಭವ, ಉನ್ನತ ಮಟ್ಟದ ಶೈಕ್ಷಣಿಕ ಹಿನ್ನೆಲೆ, ದಕ್ಷ ಆಡಳಿತದ ಅರಿವು ಹಾಗೂ ಸಾರ್ವಜನಿಕ ಜೀವನದಲ್ಲಿ ಗಳಿಸಿರುವ ಅನುಭವಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಸಾಮರ್ಥ್ಯವನ್ನು ಹೊಂದಿರುವ ತಮಗೆ ಈ ಮಹತ್ವದ ಜವಾಬ್ದಾರಿ ಲಭಿಸಿರುವುದು ಸಂತಸದ ಸಂಗತಿಯಾಗಿದೆ.

ಕರ್ನಾಟಕದ ಶ್ರೀಮಂತ ಪರಂಪರೆ, ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ತಮ್ಮ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವಿದೆ. ತಮ್ಮ ಸಮರ್ಥ ನೇತೃತ್ವದಲ್ಲಿ ರಾಜ್ಯದ ಸಾಂವಿಧಾನಿಕ ಮೌಲ್ಯಗಳು ಮತ್ತಷ್ಟು ಬಲಗೊಳ್ಳಲಿ, ಸಂವಿಧಾನದ ಆಶಯಗಳು ಪರಿಣಾಮಕಾರಿಯಾಗಿ ಸಾಕಾರಗೊಳ್ಳಲಿ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ, ನ್ಯಾಯ, ಸಮಾನತೆ ಮತ್ತು ಜನಕಲ್ಯಾಣದ ಆಶಯಗಳು ಸದಾ ಪ್ರತಿಬಿಂಬಿಸಲಿ ಎಂದು ವಿಧಾನಪರಿಷತ್ನಲ್ಲಿ ಜೆಡಿಎಸ್ ಪಕ್ಷದ ಉಪ ಸಭಾನಾಯಕ ಟಿ.ಎ.ಶರವಣ ಅವರು ಹಾರೈಸಿದ್ದಾರೆ.
ರಾಜ್ಯದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು ಹಾಗೂ ಸಮಾಜದ ಎಲ್ಲಾ ವರ್ಗಗಳ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಮ್ಮ ಮಾರ್ಗದರ್ಶನ ಮತ್ತು ಸಲಹೆಗಳು ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಲಿ. ಶಿಕ್ಷಣ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಹಾಗೂ ಜನಕಲ್ಯಾಣದ ಕ್ಷೇತ್ರಗಳಲ್ಲಿ ರಾಜ್ಯವು ಇನ್ನಷ್ಟು ಪ್ರಗತಿ ಸಾಧಿಸುವಂತಾಗಲಿ. ತಮ್ಮ ಅಧಿಕಾರಾವಧಿಯು ಕರ್ನಾಟಕದ ಪ್ರಗತಿ, ಸಮೃದ್ಧಿ ಮತ್ತು ಜನಹಿತದ ಹೊಸ ಅಧ್ಯಾಯಕ್ಕೆ ನಾಂದಿಯಾಗಲಿ. ರಾಜ್ಯದ ಜನತೆಯ ವಿಶ್ವಾಸಕ್ಕೆ ಪಾತ್ರರಾಗಿ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಯಶಸ್ವಿ ಸೇವೆ ಸಲ್ಲಿಸಲಿ ಎಂದು ವಿಧಾನಪರಿಷತ್ನಲ್ಲಿ ಜೆಡಿಎಸ್ ಪಕ್ಷದ ಉಪ ಸಭಾನಾಯಕ ಟಿ.ಎ.ಶರವಣ ಹಾರೈಸಿದರು.
