Kareena Kapoor Khan: What does Kareena have to say about her husband who only follows her on Instagram?- Kareena Kapoor Khan: ಗಂಡ ತನ್ನನ್ನು ಮಾತ್ರ ಫಾಲೋ ಮಾಡೋ ಬಗ್ಗೆ ಕರೀನಾ ಏನಂದ್ರು? ಈ ಜೋಡಿಯ ಕ್ಯೂಟ್ ಮೊಮೆಂಟ್ ರೊಮ್ಯಾಂಟಿಕ್.

ನಟ ಸೈಫ್ ಅಲಿ ಖಾನ್ ಕೊನೆಗೂ ಸೈಫ್ ಅಲಿ ಖಾನ್ ಪಟೌಡಿ ಎಂಬ ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಸೋಷಿಯಲ್ ಮಿಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ನಟ ತಮ್ಮ ಪ್ರೊಫೈಲ್ನಲ್ಲಿ ಕೇವಲ ಒಂದು ಪೋಸ್ಟ್ ಅನ್ನು ಮಾತ್ರ ಮಾಡಿದ್ದಾರೆ. ಅವರ ಪತ್ನಿ ನಟಿ ಕರೀನಾ ಕಪೂರ್ ಖಾನ್ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
ಅವರ ಇನ್ಸ್ಟಾಗ್ರಾಮ್ ಆ್ಯಕ್ಟಿವಿಟಿ ಅಭಿಮಾನಿಗಳ ಗಮನವನ್ನು ಸೆಳೆಯಿತು. ಅನೇಕರು ಅವರನ್ನು ಹೊಗಳಿದರು. ಅವರ ಪತ್ನಿಯನ್ನು ಮಾತ್ರ ಫಾಲೋ ಮಾಡಿದ್ದಕ್ಕಾಗಿ ಗ್ರೀನ್ ಫ್ಲ್ಯಾಗ್ ಎಂದರು.
ಈ ಸುದ್ದಿಯ ನಡುವೆಯೇ ಕರೀನಾ ಕಪೂರ್ ಖಾನ್ ಅವರ ಪ್ರತಿಕ್ರಿಯೆ ಕೂಡ ವೈರಲ್ ಆಗಿದೆ. ಬಾಲಿವುಡ್ ಮೆಮರ್ ಎಂಬ ಇನ್ಸ್ಟಾಗ್ರಾಮ್ ಪೇಜ್ “ಸೈಫ್ ಅಲಿ ಖಾನ್ ಇನ್ಸ್ಟಾಗ್ರಾಮ್ಗೆ ಸೇರಿ ಕರೀನಾ ಅವರನ್ನು ಮಾತ್ರ ಫಾಲೋ ಮಾಡುತ್ತಿರುವುದು ಆ ಅಪ್ಲಿಕೇಶನ್ ಅನ್ನು ಬಳಸಲು ಸರಿಯಾದ ಮಾರ್ಗ” ಎಂದು ಬರೆದ ಪೋಸ್ಟ್ ಅನ್ನು ಹಂಚಿಕೊಂಡಿದೆ.
ಕರೀನಾ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹವನ್ನು ಹುಟ್ಟುಹಾಕಿತು, ದಂಪತಿಗಳ ಈ ಮೊಮೆಂಟ್ ಅನ್ನು ಸಾಮಾಜಿಕ ಮಾಧ್ಯಮ ಕ್ಷಣವನ್ನು ಅವರು ಇಷ್ಟಪಟ್ಟರು.
ಎರಡು ವರ್ಷಗಳ ಹಿಂದೆ, ಸೈಫ್ ಅಲಿ ಖಾನ್ ಅವರು ಇನ್ಸ್ಟಾಗ್ರಾಮ್ ಬ್ರೌಸ್ ಮಾಡುವುದನ್ನು ಇಷ್ಟಪಡುವುದಿಲ್ಲ ಎಂದು ಬಹಿರಂಗಪಡಿಸಿದರು. ನಟನು ರಹಸ್ಯ ಖಾತೆಯನ್ನು ಹೊಂದಿದ್ದಾಗಿ ಒಪ್ಪಿಕೊಂಡರು. ಅದನ್ನು ಅವನು ಸಾಂದರ್ಭಿಕವಾಗಿ ಬಳಸುತ್ತಾರೆ ಎಂದರು.
“ನಾನು ಇತರರ ವಿಷಯಗಳನ್ನು ಪೋಸ್ಟ್ ಮಾಡಬೇಕಾದ ಸ್ಥಿತಿಯಲ್ಲಿ ಸಿಲುಕಿಕೊಳ್ಳಲು ಬಯಸುವುದಿಲ್ಲ. ನಾನು ಸಾಮಾಜಿಕ ಮಾಧ್ಯಮದಲ್ಲಿ ಇಲ್ಲ ಎಂದು ತಿಳಿದಿರುವ ಕಾರಣ ಯಾರೂ ನನ್ನನ್ನು ಪ್ರಚಾರ ಮಾಡಲು ಕೇಳಲ್ಲ. ಆದ್ದರಿಂದ, ನನಗೆ ಸಾಕಷ್ಟು ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ” ಎಂದು ಅವರು ಹಿಂದೂಸ್ತಾನ್ ಟೈಮ್ಸ್ಗೆ ತಿಳಿಸಿದರು.
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅಕ್ಟೋಬರ್ 16, 2012 ರಂದು ಮುಂಬೈನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು.
ಕರೀನಾ ಆಗಾಗ್ಗೆ ತಮ್ಮ ಕುಟುಂಬ ಜೀವನ ಮತ್ತು ರಜಾದಿನಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರೆ. ಈ ದಂಪತಿಗೆ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
