Imran Khan: Big shock for Aamir Khan’s son-in-law! 2 week deadline to leave India :Imran Khan: ಖ್ಯಾತ ಬಾಲಿವುಡ್ ನಟ ಆಮೀರ್ ಖಾನ್ ಅವರ ಅಳಿಯನಿಗೆ ಮುಂಬೈ ಪೊಲೀಸರು ದೊಡ್ಡ ಶಾಕ್ ಕೊಟ್ಟಿದ್ದಾರೆ. ಇನ್ನೆರಡು ವಾರದ ಒಳಗೆ ಭಾರತ ಬಿಡಲು ನೋಟಿಸ್ ಕೊಟ್ಟಿದ್ದಾರೆ.
![]()
ಬಾಲಿವುಡ್ನ ಖ್ಯಾತ ನಟ, ಆಮೀರ್ ಖಾನ್ ಅವರ ಅಳಿಯ ಇಮ್ರಾನ್ ಖಾನ್ ಅವರಿಗೆ ಭಾರತವನ್ನು ಬಿಟ್ಟು ಹೋಗೋಕೆ 2 ವಾರಗಳ ಗಡುವು ನೀಡಲಾಗಿದೆ. ಈ ತಿಂಗಳ ಅಕ್ಟೋಬರ್ 28ರ ಒಳಗಾಗಿ ದೇಶ ಬಿಟ್ಟು ಹೋಗುವಂತೆ ಮುಂಬೈ ಪೊಲೀಸರು ನಟನಿಗೆ ನೋಟಿಸ್ ನೀಡಲಾಗಿದೆ.
ಮುಂಬೈ ಪೊಲೀಸರು ನಟನಿಗೆ ನೋಟಿಸ್ ಕಳುಹಿಸಲಾಗಿದ್ದು, ಇಮ್ರಾನ್ ಖಾನ್ ಅವರು ಅಕ್ಟೋಬರ್ 28ರ ಒಳಗಾಗಿ ಬಿಟ್ಟು ಹೋಗಬೇಕು ಎಂದು ಅದರಲ್ಲಿ ಸೂಚಿಸಲಾಗಿದೆ.
ಸಿಇಸಿ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ಕೋರಿ ಪ್ರತಿಭಟನೆ ನಡೆಸಿದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ. ಮುಂಬೈನ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಇಮ್ರಾನ್ ಖಾನ್ ಗೆಳತಿ ಲೇಖಾ ಹಾಗೂ ಸಂಬಂಧಿಯ ಜೊತೆ ಭಾಗಿಯಾಗಿದ್ದರು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಇಮ್ರಾನ್ ಖಾನ್ನ ಭಾರತ ತೊರೆಯೋಕೆ ಹೇಳಿದ್ದೇಕೆ? ವಲಸೆ ಕಾನೂನಿನ ಅಡಿಯಲ್ಲಿ ಇಮ್ರಾನ್ ಖಾನ್ ಅವರನ್ನು ಭಾರತ ಬಿಟ್ಟು ಹೋಗೋಕೆ ಹೇಳಲಾಗಿದೆ. ಇಮ್ರಾನ್ ಖಾನ್ ಅವರಿಗೆ ಅಮೆರಿಕಾ ಪೌರತ್ವ ಇದೆ. ಆದರೆ ಅವರು ಭಾರತದ ಪ್ರಜೆಯಲ್ಲದೆಯೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಈ ಕಾರಣದಿಂದ ಭಾರತ ಬಿಟ್ಟು ಹೋಗುವಂತೆ ನೋಟಿಸ್ ಕಳುಹಿಸಲಾಗಿದೆ.
