‘I am a thief, there is a God, my time will come’: Vijay Mallya’s emotional post – What is the reason? –Vijay Mallya on High Court reference : ತಮ್ಮ ಕಾನೂನು ತೊಂದರೆಗಳು ಭಾರತ ಸರ್ಕಾರದ ಪೋಸ್ಟರ್ ಬಾಯ್ ಕ್ರಮಗಳು ಎಂದು ಹಿಂದೊಮ್ಮೆ ಲಿಕ್ಕರ್ ಉದ್ಯಮಿ ವಿಜಯ್ ಮಲ್ಯ ಹೇಳಿದ್ದರು. ಈಗ ಕರ್ನಾಟಕ ಹೈಕೋರ್ಟಿನ ರೆಫರೆನ್ಸ್ ಒಂದನ್ನು ಲಗತ್ತಿಸಿ, ನಾನೇನು ವಂಚಕನೇ ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ. ದೇವರು ಎಲ್ಲವನ್ನೂ ನೋಡುತ್ತಿದ್ದಾನೆ ಎಂದು ತಮ್ಮ ಎಕ್ಸ್ ಪೋಸ್ಟಿನಲ್ಲಿ ಮಲ್ಯ ಉಲ್ಲೇಖಿಸಿದ್ದಾರೆ.
- ನಾನೇನು ಚೋರ್ ಅಥವಾ ವಂಚಕನೇ? ಕೋರ್ಟ್ ಕಾಪಿ ಲಗತ್ತಿಸಿ ವಿಜಯ್ ಮಲ್ಯ ಆಕ್ರೋಶ.
- ಕೋರ್ಟ್ ಆದೇಶ ಹಂಚಿಕೊಂಡು ನೋವು ತೋಡಿಕೊಂಡ ವಿಜಯ್ ಮಲ್ಯ: ದೇವರಿದ್ದಾನೆ ಪೋಸ್ಟ್.
- ನನ್ನ ಸ್ವಂತ ದುಡಿಮೆಯಿಂದ ರಾಜನಂತೆ ಬದುಕಿದೆ, ಅದು ಅಪರಾಧವೇ : ವಿಜಯ್ ಮಲ್ಯ ಪೋಸ್ಟ್.
![]()
ಹೊಸದಿಲ್ಲಿ : ಕರ್ನಾಟಕ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಆದೇಶದ ಪ್ರತಿಯೊಂದನ್ನು ಟ್ವೀಟ್ ಮಾಡಿರುವ ಲಿಕ್ಕರ್ ಉದ್ಯಮಿ ಮತ್ತು ಬಹುಕೋಟಿ ಸುಸ್ತಿದಾರ ವಿಜಯ್ ಮಲ್ಯ, ನಾನೇನು ವಂಚಕನೇ, ಕಳ್ಳನೇ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಭಾರತ ಸರ್ಕಾರದಿಂದ ನನಗೆ ಸತತ ಅನ್ಯಾಯವಾಗುತ್ತಲೇ ಇದೆ ಎಂದು ವಿಜಯ್ ಮಲ್ಯಆರೋಪಿಸುತ್ತಲೇ ಬರುತ್ತಿದ್ದಾರೆ.
ನಮ್ಮೆಲ್ಲರನ್ನೂ ಕಾಯುವ ದೇವರೊಬ್ಬನಿದ್ದಾನೆ, ನನಗೂ ನ್ಯಾಯ ಸಿಗುತ್ತೆ ಎಂದಿರುವ ವಿಜಯ್ ಮಲ್ಯ, ನನ್ನ ಹಣದಿಂದ ಐಷಾರಾಮಿ ಜೀವನ ನಡೆಸಿದ್ದೇನೆ, ಇದೇನೊ ದೊಡ್ಡ ಅಪರಾಧವೇ ಎಂದು ಪ್ರಶ್ನಿಸಿದ್ದಾರೆ. ಕರ್ನಾಟಕ ಕೋರ್ಟಿಗೆ ಸಲ್ಲಿಕೆಯಾದ ರೆಫೆರೆನ್ಸ್’ನಲ್ಲಿ, ವಿಜಯ್ ಮಲ್ಯಗೆ ವೈಯಕ್ತಿಕ ಅಹಂಕಾರ ಎನ್ನುವ ಪದವನ್ನು ಬಳಸಿಕೊಳ್ಳಲಾಗಿದೆ. ಇದಕ್ಕೆ ಮಲ್ಯ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ನನ್ನ ಹಣದಿಂದ ರಾಜ ಗಾಂಭೀರ್ಯದ ಜೀವನ ನಡೆಸಿದ್ದೇನೆ – ಮಲ್ಯ ಹೀಗೆ ಹೇಳಿದ್ದೇಕೆ?: ಕಳೆದ ಮೂರು ದಶಕಗಳಿಂದ ನಾನು ಬ್ರಿಟನ್ ದೇಶದಲ್ಲಿ ಶಾಶ್ವತವಾಗಿ ನೆಲೆಸಿದ್ದೇನೆ, ನಾನು ಅಲ್ಲಿನ ಪ್ರಜೆ ಕೂಡಾ. ಭಾರತ ಸರ್ಕಾರ ನನ್ನೊಂದಿಗೆ ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂದು ವಿಜಯ್ ಮಲ್ಯ ಹಿಂದೆ ಆರೋಪಿಸಿದ್ದರು. ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಹೀಗೆ..
“ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಆದೇಶವನ್ನು ಹೊರಡಿಸಿದೆ. ದಯವಿಟ್ಟು ಇದನ್ನೊಮ್ಮೆ ಗಮನವಿಟ್ಟು ಒದಿ ಎಂದು ವಿನಂತಿಸಿಕೊಳ್ಳುತ್ತೇನೆ. ನಾನು ಇಂದಿಗೂ ಚೋರ್ ಅಥವಾ ವಂಚಕನೇ? ನನ್ನ ಸ್ವಂತ ದುಡಿಮೆಯ ಹಣದಿಂದ ನಾನು ರಾಜ ಗಾಂಭೀರ್ಯವಾದ ಜೀವನವನ್ನು ನಡೆಸಿದ್ದೇನೆ, ಅದೇ ನಾನು ಮಾಡಿದ ದೊಡ್ಡ ತಪ್ಪಾಯಿತು ಮತ್ತು ಅದಕ್ಕಾಗಿ ನಾನು ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ. ನಮ್ಮೆಲ್ಲರನ್ನೂ ಕಾಯುವ ದೇವರೊಬ್ಬನಿದ್ದಾನೆ, ಒಂದು ದಿನ ನನಗೆ ನ್ಯಾಯ ಸಿಕ್ಕೇ ಸಿಗುತ್ತೆ’ ಎಂದು ಟ್ವಿಟ್ಟರ್ (ಎಕ್ಸ್) ನಲ್ಲಿ ವಿಜಯ್ ಮಲ್ಯ ಬರೆದುಕೊಂಡಿದ್ದಾರೆ.
ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠವು ನೀಡಿದ ಆದೇಶ. ನೀವು ಎಚ್ಚರಿಕೆಯಿಂದ ಓದಬೇಕೆಂದು ನಾನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ನಾನು ಇನ್ನೂ ಮೋಸಗಾರನೇ ಅಥವಾ ಮೋಸಗಾರನೇ? ನಾನು ನನ್ನ ಸ್ವಂತ ಹಣದಿಂದ ರಾಜಸೈಜ್ ಜೀವನವನ್ನು ನಡೆಸಿದ್ದೆ ಮತ್ತು ಅದು ನಾನು ಶಿಕ್ಷೆಗೆ ಗುರಿಯಾಗುತ್ತಿರುವ ನನ್ನ ದೊಡ್ಡ ಅಪರಾಧವಾಗಿತ್ತು. ನಮ್ಮೆಲ್ಲರಿಗೂ ಮೇಲೆ ಒಬ್ಬ ದೇವರು ಇದ್ದಾನೆ. ಒಂದು ದಿನ ನ್ಯಾಯವು ಜಯಗಳಿಸುತ್ತದೆ.
ಕೋರ್ಟ್ ಆರ್ಡರ್ ಕಾಪಿಯಲ್ಲಿ ಏನು ಅಂಶ ಉಲ್ಲೇಖವಾಗಿದೆ?: ವಿಜಯ್ ಮಲ್ಯ, ತಮ್ಮ ಟ್ವೀಟ್’ನಲ್ಲಿ ಕೋರ್ಟ್ ಆರ್ಡರ್ ಕಾಪಿಯನ್ನು ಲಗತ್ತಿಸಿದ್ದಾರೆ. ಅದರಲ್ಲಿ ಯುಬಿಎಲ್ ಷೇರು ವಿಚಾರ, ಕಿಂಗ್’ಫಿಶರ್ ಏರ್ಲೈನ್ಸ್ ನೀಡಲಾಗಿದ್ದ ಸಾಲದ ಬಗ್ಗೆ ಉಲ್ಲೇಖವಿದೆ. ಜೊತೆಗೆ, ಕೇಂದ್ರ ಹಣಕಾಸು ಸಚಿವರು, ವಿಜಯ್ ಮಲ್ಯ ವಿಚಾರಕ್ಕೆ ಸಂಬಂಧಿಸಿದಂತೆ, ಲೋಕಸಭೆಯಲ್ಲಿ ಹೇಳಿರುವ ಮಾತು ಎಂದೂ ಉಲ್ಲೇಖವಾಗಿದೆ.
ವಿಜಯ್ ಮಲ್ಯ ಅವರ 14,131.60 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಬ್ಯಾಂಕುಗಳ ಒಕ್ಕೂಟಕ್ಕೆ ಹಿಂದಿರುಗಿಸಲಾಗಿದೆ. ಜೊತೆಗೆ, ಅವರಿಂದ ಬರಬೇಕಾಗಿರುವ 6,203 ಕೋಟಿ ರೂಪಾಯಿಗಳ ಬಡ್ಡಿಯನ್ನೂ ಬ್ಯಾಂಕುಗಳಿಗೆ ಕ್ಲಿಯರ್ ಮಾಡಲಾಗಿದೆ ಎಂದು ಅದರಲ್ಲಿ ಉಲ್ಲೇಖವಾಗಿದೆ. ಅವರ ಎಲ್ಲಾ ಸಾಲಗಳು ಚುಕ್ತಾ ಆಗಿರುವಾಗಾ, UBL ಷೇರುಗಳ ಮೇಲೆ ಅವರ ಯಾವುದೇ ಹಕ್ಕು ಇಲ್ಲ.
ವಿಜಯ್ ಮಲ್ಯ ಅವರ ವೈಭವೋಪಿತ ಜೀವನ ಶೈಲಿ, ಅತಿಯಾದ ದುಂದುವೆಚ್ಚ, ಅಹಂಕಾರವೇ, ಕಿಂಗ್’ಫಿಷರ್ ಏರ್ಲೈನ್ಸ್ ಮತ್ತು ಬ್ಯಾಂಕುಗಳ ಒಕ್ಕೂಟದ ನಡುವಿನ ಕ್ಲೇಮ್ ಸೆಟ್ಲ್ ಆಗಲು ಅಡ್ಡಿಯಾಗುತ್ತಿದೆ ಎಂದು ಅದರಲ್ಲಿ ಉಲ್ಲೇಖವಾಗಿದೆ. ಇದಕ್ಕಾಗಿ, ವಿಜಯ್ ಮಲ್ಯ ಬೇಸರ ವ್ಯಕ್ತ ಪಡಿಸಿ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟಿಗೆ ನಾನಾ ರೀತಿಯ ಕಾಮೆಂಟುಗಳು ಎಂದಿನಂತೆ ಬಂದಿವೆ.
