Rain Alert: Heavy rain continues in Bengaluru today! Car floats on Panathur underpass! ‘Yellow alert’ tomorrow: – ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಿಂಗಾರು ಮಳೆ ಆರ್ಭಟ ಎರಡನೇ ದಿನ ಶುಕ್ರವಾರವು ಮುಂದುವರಿಯಿತು. ಮಧ್ಯಾಹ್ನ 12ಗಂಟೆ ಹೊತ್ತಿಗೆ ದಿಢೀರನೇ ಆರಂಭವಾದ ಮಳೆಯಿಂದ ನಗರದ ಅನೇಕ ರಸ್ತೆಗಳು ಕೆರೆಯಂತಾದರೆ, ಪ್ರಮುಖ ರಸ್ತೆ ಅಂಡರ್ಪಾಸ್ಗಳಲ್ಲಿ ವಾಹನಗಳ ಸಂಚಾರ ಕೆಲ ಕಾಲ ಸ್ಥಗಿತವಾಗಿತ್ತು.

ಒಟ್ಟು 100ಕ್ಕೂ ಅಧಿಕ ವಾರ್ಡ್ಗಳಲ್ಲಿ ಮಳೆ ಆಗಿದ್ದು, ಜನಜೀವನ ಅಸ್ತವ್ಯಸ್ಥವಾಯಿತು.
ನಗರದ ಹಗದೂರು, ಮಹದೇವಪುರ ಮತ್ತು ವರ್ತೂರು ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಮಧ್ಯಾಹ್ನ ಹೊತ್ತಿಗೆ ಸುಮಾರು ಒಂದು ಗಂಟೆ ಕಾಲ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಯಿತು. ಈ ಭಾರಿ ಮಳೆಗೆ ಸಂಚಾರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಯಿತು.
ಕೆರೆಯಂತಾದ ಅಂಡರ್ಪಾಸ್, ರಸ್ತೆ: ಸಂಚಾರ ಸ್ಥಗಿತ! ತೆಲಿದ ಕಾರು: ಬೆಂಗಳೂರು ಸಂಚಾರಿ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಪಣತ್ತೂರು ಸೇತುವೆ ಜಂಕ್ಷನ್ ಬಳಿ ಅಂಡರ್ಪಾಸ್ ನಲ್ಲಿ ಹಾಗೂ ಅಂಡರ್ಪಾಸ್ ಮಾರ್ಗವಾಗಿ ಬಾಳಗೆರೆ ಮತ್ತು ವರ್ತೂರು, ಸಂಪರ್ಕಿಸುವ ಪ್ರಮುಖ ರಸ್ತೆಯ ಮೇಲೆ ಸುಮಾರು ಒಂದು ಅಡಿಗು ಅಧಿಕ ನೀರು ನಿಂತು ಕೆರೆಯಂತಾಗಿತ್ತು. ನೋಡಲು ಇಡೀ ಊರಿಗೆ ಊರೇ ನೀರಲ್ಲಿದೆ ಎನ್ನುವಂತೆ ಎಲ್ಲೆಡೆ ಮಳೆ ನೀರು ನಿಂತುಕೋಂಡು ಜನಜೀವನ ಅಸ್ತವ್ಯಸ್ತ ಮಾಡಿದ್ದು, ಸರ್ಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ತಡರಾತ್ರಿಯು ಮಳೆ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸಬಹುದು.
Bengaluru Rains: ಬೆಂಗಳೂರು ಧರೆಗೆ ವರ್ಷಧಾರೆಯ ತಂಪು: ವ್ಯಾಪಕ ಮಳೆಗೆ ಜೀವನ ಅಸ್ತವ್ಯಸ್ತ, ಹವಾಮಾನ ಮುನ್ಸೂಚನೆ: ಪಣತ್ತೂರು ಜಂಕ್ಷನ್ ಕಡೆಯಿಂದ ಮಾರತ್ತಹಳ್ಳಿ ಕಡೆಗೆ ವಾಹನಗಳ ಸಂಚಾರ ತೀರಾ ನಿಧಾನವಾಗಿತ್ತು. ಜನರು ನದಿಯಂತಾದ ರಸ್ತೆಗಳಲ್ಲಿ ನಿಧಾನವಾಗಿ ಚಲಿಸಿದರು. ಅಂಡರ್ ಪಾಸ್ನಲ್ಲಿ ಸುಮಾರು ಮೂರು ಅಡಿಯಷ್ಟು ನೀರು ನಿಂತುಕೊಂಡಿದ್ದು, ಸ್ಥಳೀಯರ ತಲೆ ಬಿಸಿಗೆ ಕಾರಣವಾಯಿತು. ಇದೇ ಅಂಡರ್ಪಾಸ್ ಮಾರ್ಗವಾಗಿ ತೆರಳಲು ಮುಂದಾದ ಕಾರೊಂದು ಆಳ ನೀರಿದ್ದ ಪರಿಣಾಮ ಚಕ್ರಗಳು ನೆಲಕ್ಕೆ ತಾಗದೇ ತೆಲಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿವಿಧೆ ಬೆಳಗ್ಗೆಯಿಂದ ನಾನ್ ಸ್ಟಾಪ್ ಮಳೆ!: ನಗರದಲ್ಲಿ ಇಂದು ಸಂಜೆ 5.30 ಗಂಟೆ ಹೊತ್ತಿಗೆ 114 ಬಡಾವಣೆಗಳಲ್ಲಿ ಜೋರು ಮಳೆ ದಾಖಲಾಗಿದೆ. ಈ ಪೈಕಿ ಸಿಲ್ಕ್ಬೋರ್ಡ್, ಕೋರಮಂಗಲದಲ್ಲಿ, ಜಕ್ಕೂರು, ಯಲಹಂಕ ಭಾಗದಲ್ಲಿ ಬೆಳಗ್ಗೆಯಿಂದ ನಾನ್ಸ್ಟಾಪ್ ಜಿಟಿ ಜಿಟಿ ಹಿಂಗಾರು ಮಳೆ ಸುರಿಯಿತು. ಕೆಲವೆಡೆ ಗಾಳಿ ಸಹಿತ ವ್ಯಾಪಕ ಮಳೆ ಸಹ ಆಯಿತು. ಇದರಿಂದ ಇಡೀ ದಿನ ನಗರ ತಂಪಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ದರ್ಶನವೇ ಆಗಲಿಲ್ಲ.
ಎಲ್ಲೆಲ್ಲಿ ಮಳೆ?: ನಗರದ ಬೆಳ್ಳಂದೂರು, ಹೊರ ವರ್ತುಲ ರಸ್ತೆ, ಜೆಪಿ ನಗರ 6ನೇ ಹಂತ, ರಾಗಿಗುಡ್ಡ ಪ್ರಸನ್ನಾಂಜನೇಯ ದೇವಸ್ಥಾನ ಸುತ್ತಮತ್ತಲಿನ ಪ್ರದೇಶಗಳು, ಯಲಹಂಕ ಚೌಡೇಶ್ವರಿ, ಅಟ್ಟೂರು, ಜಕ್ಕೂರು, ವೈಟ್ಫಿಲ್ಡ್, ಹೂಡಿ, ಜೆಪಿ ನಗರ, ಎಲೆಕ್ಟ್ರಾನಿಕ್ ಸಿಟಿ, ಪಣತ್ತೂರು, ಕಾಡುಬೀಸನಹಳ್ಳಿ, ಕೆ.ಆರ್.ಪುರಂ, ಲಾಲ್ ಬಾಗ್, ಶಂಕರಮಠ, ಚಾಮರಾಜಪೇಟೆ, ಕೆ.ಆರ್. ಮಾರುಕಟ್ಟೆ, ಹಂಪಿನಗರ, ವಿಜಯನಗರ, ಕೆಂಗೇರಿ ಸೇರಿದಂತೆ ಹಲವಾರು ವಾರ್ಡ್ಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬಿದ್ದಿದೆ. ವ್ಯಾಪಾರಿಗಳು, ನೌಕರರು ಸೇರಿದಂತೆ ಸಾರ್ವಜನಿಕರು ಮಳೆಗೆ ಕಿರಿ ಕಿರಿ ಅನುಭವಿಸಿದರು.
Namma Metro: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ನ್ಯೂಸ್, ಅ.17ರಂದು ಮಧ್ಯರಾತ್ರಿಯೂ ರೈಲು ಸಂಚಾರ
ನಾಳೆ ಬೆಂಗಳೂರಿಗೆ ‘ಯೆಲ್ಲೋ ಅಲರ್ಟ್’?: ಮುಂಗಾರು ಮಳೆ ಸಂಪೂರ್ಣವಾಗಿ ಅಂತ್ಯಗೊಂಡು ಹಿಂಗಾರು ಮಳೆ ಸಕ್ರಿಯವಾಗಿದೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಿಂದ ನಿರಂತರವಾಗಿ ಮಳೆ ಆಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ಹಿಂಗಾರು ನಗರದಲ್ಲಿ ಮಳೆ ಹೀಗೆ ಮುಂದುವರಿಯಲಿದೆ. ಗುಡುಗು, ಮಿಂಚು, ಗಾಳಿ ಸಹಿತ ಭಾರೀ ಮಳೆ ನಿರೀಕ್ಷೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಅಕ್ಟೋಬರ್ 17ರಂದು (ಶನಿವಾರ) ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಮುಂದಿನ ಎರಡು-ಮೂರು ದಿನ ನಗರಾದ್ಯಂತ ಆಗಾಗ ಕೊಂಚ ಬಿಸಿಲು ಕಂಡು ಬರಲಿದೆ. ಬಹುಪಾಲು ಮಬ್ಬು ಕವಿದ ವಾತಾವರಣ ನಿರ್ಮಾಣವಾಗಲಿದೆ. ಎಲ್ಲೆಡೆ ಚಳಿಯ ವಾತಾವರಣ ಸೃಷ್ಟಿಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
