ದರ್ಶನ್ ಮನೆಯಲ್ಲಿ ಹಬ್ಬಗಳು ಜೋರಾಗಿಯೇ ಇರ್ತವೆ. ದಸರಾ ಹಬ್ಬದ ದಿನ ಮನೆಯ ಮುಂದೆ ದುಬಾರಿ ಕಾರುಗಳ ಸಾಲು ಸಾಲು ನಿಂತಿರುತ್ತವೆ. ಬೈಕ್ಗಳೂ ಇರುತ್ತವೆ. ದರ್ಶನ್ ಜೀವನದ ಮೊದಲ ದ್ವಿಚಕ್ರ ವಾಹನ ಲೂನಾ ಕೂಡ ಪೂಜೆಗೆ ಇರುತ್ತದೆ. ಈ ಸಲದ ದಸರಾ ಹಬ್ಬಕ್ಕೂ ಲೂನಾ ಸೇರಿದಂತೆ ದುಬಾರಿ ಕಾರ್ಗಳು ಸಾಲು ಸಾಲಾಗಿಯೇ ನಿಂತಿವೆ. ದರ್ಶನ್ ಇಲ್ಲಿ ಇಲ್ಲ ಅನ್ನೋದು ಬಿಟ್ಟರೆ, ಎಲ್ಲವೂ ಹಾಗೆ ಇದೆ. ಪುತ್ರ ವಿನೀಶ್ ಈ ವರ್ಷವೂ ಪೂಜೆಗೆ ನಿಂತಿದ್ದಾರೆ. ಬಿಳಿ ಬಣ್ಣದ ಜುಬ್ಬಾ ತೊಟ್ಟು ಪೂಜೆಯಲ್ಲಿ ಭಾಗಿ ಆಗಿದ್ದಾರೆ. ಈ ಕ್ಷಣದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಹೊರ ಬಂದ ದರ್ಶನ್ ದುಬಾರಿ ಕಾರ್ಗಳು : ದರ್ಶನ್ ದುಬಾರಿ ಕಾರುಗಳು ಹಬ್ಬದ ದಿನವೇ ಹೊರಗೆ ಬರೋದು. ಇಲ್ಲವೆ ದರ್ಶನ್ ಎಲ್ಲಿಗಾದರೂ ಹೊರಗಡೆ ಹೋದ್ರೆ ಕಾರ್ ಹತ್ತಿಯೇ ಹೋಗೋದು ಇತ್ತು.
ಆದರೆ, ಈಗ ಹಾಗಿಲ್ಲ. ದರ್ಶನ್ ಜೈಲ್ ಅಲ್ಲಿದ್ದಾರೆ. ಹಾಗಾಗಿಯೇ ಈ ಸಲದ ದಸರಾ ಹಬ್ಬದ ದಿನ ಪುತ್ರ ವಿನೀಶ್ ಪೂಜೆಗೆ ನಿಂತಿದ್ದಾರೆ. ಮನೆಯ ಮುಂದೆ ನಿಂತ ತಮ್ಮ ಸಾಲು ಸಾಲು ಕಾರುಗಳ ಪೂಜೆ ಮಾಡಿಸಿದ್ದಾರೆ. ಕೈಯಲ್ಲಿ ಎಲ್ಲ ಕಾರುಗಳ ಕೀಗಳೂ ಇವೆ.
ಆರ್.ಆರ್.ನಗರದ ಮನೆಯಲ್ಲಿ ಸಡಗರ : ಬೆಂಗಳೂರಿನ ಆರ್.ಆರ್.ನಗರದ ಮನೆಯಲ್ಲಿಯೇ ದಸರಾ ಹಬ್ಬ ಮಾಡಲಾಗಿದೆ. ಮನೆಯ ಮುಂದೆ ಸಾಲಾಗಿಯೇ ಕಾರು ನಿಲ್ಲಿಸಲಾಗಿದೆ.
* ದರ್ಶನ್ ಮೊದಲು ಖರೀದಿಸಿದ್ದ ಲೂನಾ ಕೂಡ ಇದೆ.
* ರಾಯಲ್ ಎನ್ಫೀಲ್ಡ್ ಕೂಡ ಇದೆ.
* ಹೀಗೆ ಕಾರು ಮತ್ತು ಬೈಕ್ಗಳ ಪೂಜೆ ಮಾಡಲಾಗಿದೆ.
ಬೈಕ್ ರೈಡ್ ಮಾಡಿದ ವಿನೀಶ್ ದರ್ಶನ್ : ವಿನೀಶ್ ದರ್ಶನ್ ತಮ್ಮ ಕಾರುಗಳ ಪೂಜೆ ಮಾಡಿಸಿದ್ದಾರೆ. ಆ ಬಳಿಕ ರಾಯಲ್ ಎನ್ಫೀಲ್ಡ್ ಹತ್ತಿದ್ದಾರೆ. ಹಿಂದೆ ಹಿಂದೆ ನೀಲಿ ಬಣ್ಣದ ಲಂಬೋರ್ಘಿನಿ ಕಾರ್ ಕೂಡ ಬರ್ತಿದೆ.
ದರ್ಶನ್ ಮನೆಯ ದಸರಾ ಹಬ್ಬದ ದಿನ ಮನೆ ಮುಂದೆ ಹೀಗೆ ಕಾರು ಮತ್ತು ಬೈಕ್ ನಿಲ್ಲುತ್ತವೆ. ಇವುಗಳಿಗೆ ಪೂಜೆ ಮಾಡಲಾಗುತ್ತದೆ. ಆ ಬಳಕ ಒಂದು ರೌಂಡ್ ರೈಡ್ ಹೋಗೋದು ಇದೆ.
ದಸರಾ ಹಬ್ಬದ ಆಯುಧ ಪೂಜೆಯ ವಿಡಿಯೋವನ್ನ ವಿನೀಶ್ ದರ್ಶನ್ ತಮ್ಮ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನ ತಮ್ಮ ಪೇಜ್ ಅಲ್ಲಿಯೇ ಶೇರ್ ಮಾಡಿದ್ದಾರೆ.
ಈ ಒಂದು ಪೇಜ್ ಅಲ್ಲಿ ತಮ್ಮ ಕಾರ್ಗಳ ಫೋಟೋ ಹಂಚಿಕೊಂಡಿದ್ದಾರೆ. ಈ ಮೂಲಕ ವಿನೀಶ್ ದರ್ಶನ್ ಅವರ ಕಾರ್ ಕ್ರೇಜ್ ಏನು ಅನ್ನೋದನ್ನು ತಿಳಿಯುತ್ತದೆ.
ಅಪ್ಪನ ಜೊತೆಗಿನ ಫೋಟೋಸ್ : ವಿನೀಶ್ ದರ್ಶನ್ ಇಲ್ಲಿ ತಂದೆ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಬಾಲ್ಯದ ಫೋಟೋಗಳನ್ನು ಇಲ್ಲಿವೆ. ಒಟ್ಟಾರೆ, ವಿನೀಶ್ ದರ್ಶನ್ ಕಾರ್ ಬಗೆಗಿನ ಪ್ರೀತಿ ಏನು ಅನ್ನೋದು ಇಲ್ಲಿ ಒಂಚೂರು ಅರ್ಥ ಆಗುತ್ತದೆ ಅಂತ ಹೇಳಬಹುದು.