Working with Shivanna for the first time: Special photos from the shooting of Meghana Raj’s ‘Jailer-2’ movie.. –
ನಟಿ ಮೇಘನಾ ರಾಜ್ ಸರ್ಜಾ ಅವರು ಚಿಕ್ಕವಯಸ್ಸಿಂದ ಅಭಿನಯ ಮಾಡುತ್ತಿದ್ದಾರೆ. ಆದರೆ, ಅವರಿಗೆ ಇದುವರೆಗೂ ಶಿವಣ್ಣ ಡಾ. ಶಿವರಾಜ್ಕುಮಾರ್ ಅವರ ಜೊತೆಗೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿರಲಿಲ್ಲ. ಈ ಅವಕಾಶ ಮಾಡಿಕೊಟ್ಟ ಸಿನಿಮಾ ‘ಜೈಲರ್-2’. ಅ.15 ರಂದು ಸಿನಿಮಾ ರಿಲೀಸ್ ಆಗಿದ್ದು, ಶಿವಣ್ಣನ ಜೊತೆಗಿನ ಶೂಟಿಂಗ್ ಫೋಟೋ ಹಂಚಿಕೊಂಡಿದ್ದಾರೆ ಮೇಘನಾ.
-
1/7

ಮುದ್ದು ಸ್ವಭಾವದ ಸ್ಟಂಟ್ ಮಾಸ್ಟರ್ : ನಟಿ ಮೇಘನಾ ರಾಜ್ ಸರ್ಜಾ ಅವರು ತಮ್ಮ ಬದುಕಿನ ಹೊಸ ಚಾಪ್ಟರ್ ಓಪನ್ ಮಾಡಿದ್ದಾರೆ. ಇದು ಮೇಘನಾ ಅವರ ಹೊಸ ಇನ್ನಿಂಗ್ಸ್. ಇದರ ಆರಂಭ ಆಗಿದ್ದು ಇಬ್ಬರೂ ಸೂಪರ್ ಸ್ಟಾರ್ಗಳ ಜೊತೆಗೆ ತೆರೆ ಹಂಚಿಕೊಳ್ಳುವ ಮೂಲಕ. ಹೌದು, ‘ಜೈಲರ್-2’ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಪತ್ನಿ ಪಾತ್ರ ಮಾಡಿದ್ದಾರೆ ನಟಿ. ಇದೇ ಸಿನಿಮಾದ ಲೀಡ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್.
ಸಿನಿಮಾ ಕಳೆದ ಅಕ್ಟೋಬರ್ 15ರಂದು ಬಿಡುಗಡೆಯಾಗಿದ್ದು, ಶೂಟಿಂಗ್ ವೇಳೆ ಕ್ಲಿಕ್ಕಿಸಿದ ಫೋಟೋಗಳನ್ನ ನಟಿ ಮೇಘನಾ ರಾಜ್ ಸರ್ಜಾ ಅವರು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ.
ಮೇಘನಾ ರಾಜ್: “ ‘ಜೈಲರ್- 2’ ಸಿನಿಮಾಗೂ ಕರ್ನಾಟಕಕ್ಕೂ ಒಂದು ನಂಟಿದೆ, ನಮ್ಮ ಶಿವಣ್ಣ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಒಂದು ವರ. ವಿಶೇಷವೆಂದರೆ, ಶಿವಣ್ಣ ಅವರೊಂದಿಗೆ ನಾನು ಕೆಲಸ ಮಾಡುತ್ತಿರುವುದು ಇದೇ ಮೊದಲು. ಶಿವಣ್ಣ ಚಿತ್ರೀಕರಣದ ಸೆಟ್ಗೆ ಬಂದ ಕ್ಷಣವೇ, ನನಗೆ ಮನೆಯಲ್ಲೇ ಇದ್ದ ಅನುಭವವಾಯಿತು. ಅವರ ವ್ಯಕ್ತಿತ್ವದ ಪ್ರಭಾವ ಅಂತಹದ್ದು. ಗೀತಾಕ್ಕಾ ಕೂಡ ಸೆಟ್ನಲ್ಲಿ ಇದ್ದಿದ್ದು ತುಂಬಾ ಸಂತೋಷದ ವಿಷಯ. ಎಲ್ಲರಿಗೂ ಅಚ್ಚುಮೆಚ್ಚಿನ ಚೇತನ್ ಮಾಸ್ಟರ್, ಅತ್ಯಂತ ಮುದ್ದು ಸ್ವಭಾವದ, ಆಕರ್ಷಕ ವ್ಯಕ್ತಿತ್ವದ ಹಾಗೂ ಬಹಳ ವಿವೇಕಯುತವಾದ ಸ್ಟಂಟ್ ಡೈರೆಕ್ಟರ್ ಇವರು.. ಎಲ್ಲೆಡೆ ಮೆಚ್ಚುಗೆ ಪಡೆದ ಆ ಸಾಹಸ ದೃಶ್ಯಗಳೆಲ್ಲವೂ ಇವರ ಶ್ರಮದ ಫಲ”
-
2/7

ಪಾತ್ರ : ‘ಜೈಲರ್-2’ ಸೂಪರ್ ಹಿಟ್ ಸಿನಿಮಾದಲ್ಲಿ ಮೇಘನಾ ರಾಜ್ ಪಾತ್ರ ಮಾಡಿದ್ದಾರೆ.
-
3/7

ಮೊಟ್ಟ ಮೊದಲ ಬಾರಿಗೆ ಶಿವಣ್ಣ ಜೊತೆಗೆ ನಟನೆ : ನಟಿ ಮೇಘನಾ ರಾಜ್ ಅವರು ಚಿಕ್ಕವಯಸ್ಸಿಂದ ಇಂಡಸ್ಟ್ರಯಲ್ಲಿ ಆಡಿ, ಬೆಳದವರು. ಆದರೂ ಇವರಿಗೂ ಇದುವರೆಗೂ ಶಿವಣ್ಣ ಜೊತೆಗೆ ಬಣ್ಣ ಹಚ್ಚುವುದಕ್ಕೆ ಆಗಿರಲಿಲ್ಲವಂತೆ, ಇದೇ ಮೊಟ್ಟ ಮೊದಲ ಬಾರಿಗೆ ಶಿವಣ್ಣನ ಪತ್ನಿಯಾಗಿ ನಟಿಸಿದ್ದಾರೆ.
-
4/7

ಸ್ಟಂಟ್ ಮಾಸ್ಟರ್ : “ಎಲ್ಲರಿಗೂ ಅಚ್ಚುಮೆಚ್ಚಿನ ಚೇತನ್ ಮಾಸ್ಟರ್, ಅತ್ಯಂತ ಮುದ್ದು ಸ್ವಭಾವದ, ಆಕರ್ಷಕ ವ್ಯಕ್ತಿತ್ವದ ಹಾಗೂ ಬಹಳ ವಿವೇಕಯುತವಾದ ಸ್ಟಂಟ್ ಡೈರೆಕ್ಟರ್” ಎಂದು ಮೇಘಾ ರಾಜ್ ಬಣ್ಣಿಸಿದ್ದಾರೆ.
-
5/7

ಚೇತನ್ ಡಿಸೋಜ : ಸಾಹಸ ದೃಶ್ಯಗಳನ್ನ ಪಂಪೋಸ್ ಮಾಡುವ ಅದ್ಭುತ ಸ್ಟಂಟ್ ಕಲಾವಿದ ಚೇತನ್ ಡಿಸೋಜ. ಇವರು ‘ಮ್ಯಾಕ್ಸ್’,’ ಬೈರತಿ ರಣಗಲ್’ ಸೇರಿದಂತೆ ಅನೇಕ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ.
-
6/7

ರಜನಿಕಾಂತ್ : ರಜನಿಕಾಂತ್ ಅವರೋಟ್ಟಿಗೆ ಸಾಹಸ ದೃಶ್ಯ ನಿರ್ದೇಶಕ ಚೇತನ್ ಡಿಸೋಜ ಅವರ ಪಟ.
-
7/7

ನರಸಿಂಹನ ಪತ್ನಿ : ‘ಜೈಲರ್-2 ಸಿನಿಮಾಲ್ಲಿ ಶಿವಣ್ಣನ ಪಾತ್ರದ ಹೆಸರು ನರಸಿಂಹ, ಈ ಪಾತ್ರವನ್ನ ನಟಿ ಮೇಘನಾ ರಾಜ್ ಅವರು ನಿರ್ವಹಿಸಿದ್ದಾರೆ.
