Actress Ramya: Actress Ramya gets angry at the sound of firecrackers at midnight; sparks through tweet: – ವಿಶೇಷ ಅನುಮತಿ ಇದ್ದರೂ ಸಹ ಮಧ್ಯರಾತ್ರಿಯ ನಂತರ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ನಟಿ ರಮ್ಯಾ ಕಿಡಿಕಾರಿದ್ರು.
ಬೆಂಗಳೂರು ಅ.22: ಮೋಜು-ಮಸ್ತಿ ಹೆಸರಲ್ಲಿ ಮಧ್ಯರಾತ್ರಿ ಪಟಾಕಿ ಸಿಡಿಸಲು ನಟಿ ರಮ್ಯಾ (Actress Ramya) ಕಿಡಿಕಾರಿದ್ದಾರೆ. ರಾತ್ರಿ ಸುಮಾರು 3 ಗಂಟೆಯಾದ್ರೂ ‘ಫನ್ ವರ್ಲ್ಡ್’ನಲ್ಲಿ (Fun World) ಪಟಾಕಿ ಸಿಡಿಸಿದ್ದಕ್ಕೆ ನಟಿ ರಮ್ಯಾ ಬೇಸರ ಹೊರಹಾಕಿದ್ದು, ಟ್ವಿಟ್ ಮೂಲಕ ಚಾಟಿ ಬೀಸಿದ್ದಾರೆ. ಸೂಕ್ತ ಕ್ರಮಕ್ಕೂ ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟ್ ನಿಷೇಧಿಸಿದೆ.
ಮಧ್ಯರಾತ್ರಿಯಲ್ಲಿ’ಫನ್ ವರ್ಲ್ಡ್’ನಲ್ಲಿ ಪಟಾಕಿ ಸಿಡಿಸಿ, ಜೋರಾಗಿ ಸಾಂಗ್ಸ್ ಹಾಕಿ ಸಂಭ್ರಮಾಚರಣೆ ಮಾಡಿರೋ ಬಗ್ಗೆ ನಟಿ ರಮ್ಯಾ ಕಿಡಿಕಾರಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ವಿಶೇಷ ಅನುಮತಿ ಇದ್ದರೂ ಸಹ ಮಧ್ಯರಾತ್ರಿಯ ನಂತರ ಲೌಡ್ ಸ್ಪೀಕರ್ ಬಳಸುವಂತಿಲ್ಲ ಎಂದು ನಟಿ ರಮ್ಯಾ ಕಿಡಿಕಾರಿದ್ರು.
ಮಧ್ಯರಾತ್ರಿ ಪಟಾಕಿ ಸಿಡಿಸಿ : ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದು ನನಗೆ ಅರ್ಥವಾಗುತ್ತೆ. ಆದ್ರೆ ಎಲ್ಲಾ ಸಮಯದಲ್ಲೂ ಅಡ್ಜಸ್ಟ್ ಮಾಡಿಕೊಳ್ಳುವುದು ಖಂಡಿತವಾಗಿಯೂ ಅಲ್ಲ. ಇಲ್ಲಿ ಹತ್ತಿರದಲ್ಲೇ ಆಸ್ಪತ್ರೆಗಳಿದ್ದು, ಸುತ್ತಮುತ್ತ ಹಿರಿಯ ನಾಗರಿಕರು ಹಾಗೂ ಮಕ್ಕಳು ವಾಸಿಸುತ್ತಿದ್ದಾರೆ. ಹೀಗೆ ಮಧ್ಯರಾತ್ರಿ ಪಟಾಕಿ ಸಿಡಿಸೋದು, ಜೋರಾಗಿ ಸಾಂಗ್ಸ್ ಹಾಕೋದು ಎಷ್ಟು ಸರಿ? ಎಂದು ಟ್ವೀಟ್ ಮಾಡುವ ಮೂಲಕ ಸ್ಯಾಂಡಲ್ವುಡ್ ನಟಿ ರಮ್ಯಾ ಕಿಡಿಕಾರಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ನಟಿ ರಮ್ಯಾ ಮನವಿ ಮಾಡಿದ್ದಾರೆ.

