Rukmini Vasanth: Reel Rukmini-Real Rukmini at Mysore Dasara! What’s the matter? – ಮೈಸೂರು ದಸರಾ ಸಂಭ್ರಮದಲ್ಲಿ ನಟಿ ರುಕ್ಮಿಣಿ ವಸಂತ್ ಮತ್ತು ತಪಸ್ವಿನಿ ಪೂಣಚ್ಚ ಹೆಚ್ಚು ಗಮನ ಸೆಳೆದ್ದಾರೆ. ಬಸ್ ಅಲ್ಲಿ ಅಕ್ಕಪಕ್ಕ ಕುಳಿತು ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇವರು ಯಾವ ಕಾರಣಕ್ಕೆ ವಿಶೇಷ ಅನಿಸುತ್ತಾರೆ ಅನ್ನೊದು ಇಲ್ಲಿದೆ ಓದಿ.

ಮೈಸೂರು ದಸರಾ ಸಡಗರದಲ್ಲಿ ರುಕ್ಮಿಣಿ ವಸಂತ್ ಭಾಗಿ ಆಗಿದ್ದರು. ಇನ್ನೂ ಒಂದು ವಿಶೇಷ ಅಂದರೆ ಪ್ರೇಮದ ಊರಲಿ ಸಿನಿಮಾದ ನಾಯಕಿ ತಪಸ್ವಿನಿ ಪೂಣಚ್ಚ ಕೂಡ ಇಲ್ಲಿದ್ದರು. ಚಿತ್ರದ ನಾಯಕ ನಟ ಶ್ರೀರಾಮ್ ಸಹ ಆಗಮಿಸಿದ್ರು. ಆದರೆ, ಇಲ್ಲಿ ವಿಶೇಷವೇನೆಂದ್ರೆ ತಪಸ್ವಿನಿ ಪೂಣಚ್ಚ ಚಿತ್ರದಲ್ಲಿ ರುಕ್ಮಿಣಿ ಅನ್ನುವ ರೋಲ್ ಮಾಡಿದ್ದಾರೆ. ಹಾಗಾಗಿಯೇ ಇಲ್ಲಿ ಗಮನ ಸೆಳೆದರು. ರುಕ್ಮಿಣಿ ವಸಂತ್ ಇಲ್ಲಿ ಬಂದಿದ್ದರು. ವಿಶೇಷವೆಂದ್ರೆ ಬಸ್ ಅಲ್ಲಿ ಇವರು ಅಕ್ಕ-ಪಕ್ಕ ಕುಳಿತಿದ್ದರು. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ರೀಲ್ ಮತ್ತು ರಿಯಲ್ : ಪ್ರೇಮದ ಊರಲಿ ಚಿತ್ರದ ನಾಯಕಿಯರ ಪಾತ್ರದ ಹೆಸರು ವಿಶೇಷವಾಗಿದೆ. ಒಬ್ಬ ನಾಯಕಿಯದು ವಸಂತ್ ಅಂತ ಇದೆ. ಮತ್ತೊಬ್ಬ ನಾಯಕಿಯ ಹೆಸರನ್ನ ರುಕ್ಮಿಣಿ ಅಂತಲೇ ಇಟ್ಟಿದ್ದಾರೆ.

ಈ ಚಿತ್ರದ ಡೈರೆಕ್ಟರ್ ಮನೋಜ್ ಕುಮಾರ್ ಅವರು ಈ ಕಥೆಯನ್ನ ರುಕ್ಮಿಣಿ ವಸಂತ್ ಅವರಿಗೇನೆ ಮಾಡಿದ್ದರು ಅನ್ನುವ ಸುದ್ದಿನೂ ಇದೆ.
ಆದರೆ, ಅದು ಆಗದೇ ಇದ್ದಾಗ ತಮ್ಮ ಚಿತ್ರದ ನಾಯಕಿಯರ ಪಾತ್ರಗಳಿಗೆ ರುಕ್ಮಿಣಿ ಹಾಗೂ ವಸಂತ್ ಅಂತ ಹೆಸರಿಟ್ಟರು ಅನ್ನೋದು ಇದೆ.
ರುಕ್ಮಿಣಿ ಮತ್ತು ರುಕ್ಮಿಣಿ : ದಸರಾ ಹಬ್ಬಕ್ಕೆ ಹೊರಟ ತಾರೆಯರ ಬಸ್ ಅಲ್ಲಿ ಇದು ವಿಶೇಷವಾಗಿಯೇ ಕಾಣಿಸುತ್ತಿತ್ತು. ಒಂದು ಸೀಟ್ ಅಲ್ಲಿ ರುಕ್ಮಣಿ ವಸಂತ್ ಕುಳಿತಿದ್ದರು. ಪಕ್ಕದ ಸೀಟ್ ಅಲ್ಲಿ ಪ್ರೇಮದ ಊರಲಿ ಚಿತ್ರದ ನಾಯಕಿ ರುಕ್ಮಿಣಿ ಪಾತ್ರಧಾರಿ ತಪಸ್ವಿನಿ ಪೂಣಚ್ಚ ಇದ್ದರು.
ಇದು ಒಂದು ರೀತಿ ವಿಶೇಷವಾಗಿಯೇ ಕಾಣಿಸುತ್ತಿತ್ತು. ಕಾರಣ, ಪ್ರೇಮದ ಊರಲಿ ಚಿತ್ರದಲ್ಲಿ ರುಕ್ಮಿಣಿ ಪಾತ್ರವೂ ಹೆಚ್ಚು ಗಮನ ಸೆಳೆದಿದೆ. ರುಕ್ಮಿಣಿ ವಸಂತ್ ಅಂತಲೂ ಫೇಮಸ್ ಆಗಿದ್ದಾರೆ. ಪ್ರೇಮದ ಊರಲಿ ಚಿತ್ರಕ್ಕೂ ರುಕ್ಮಿಣಿ ವಸಂತ್ ಹೆಸರು ಕೇಳಿ ಬಂದಿರೋದ್ರಿಂದಲೇ ಇವರು ಅಕ್ಕಪಕ್ಕ ಕುಳಿತಿರೊದು ವಿಶೇಷ ಅನಿಸುತ್ತಿದೆ.

ದಸರಾ ಹಬ್ಬದಲ್ಲಿ ಸ್ಟಾರ್ಸ್ : ಮೈಸೂರಿನ ಈ ವರ್ಷದ ದಸರಾ ಹಬ್ಬದ ಸಂಭ್ರಮದಲ್ಲಿ ಸ್ಯಾಂಡಲ್ವುಡ್ನ ತಾರೆಯರು ಬಂದಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್, ಕಿಚ್ಚ ಸುದೀಪ್, ಡಾಲಿ ಧನಂಜಯ್, ಶರಣ್, ಗಣೇಶ್, ವಸಿಷ್ಠ ಸಿಂಹ, ಹಿರಿಯ ನಟರಾದ ಸುಂದರ್ ರಾಜ್, ದೊಡ್ಡಣ್ಣ, ವಿಜಯಲಕ್ಷ್ಮಿ ಸಿಂಗ್, ಪೂಜಾ ಗಾಂಧಿ ಹೀಗೆ ಇನ್ನು ಹಲವು ಕಲಾವಿದರು ಈ ಸಡಗರದಲ್ಲಿ ಭಾಗಿ ಆಗಿದ್ದರು.
ಬಹುತೇಕ ಇಡೀ ದಿನ ತಾರೆಯರು ಈ ದಸರಾ ಹಬ್ಬದ ಸಂಭ್ರಮದಲ್ಲಿಯೇ ಇದ್ದರು. ಮೈಸೂರಿನ ಈ ಸಡಗರಕ್ಕೆ ವಿಶೇಷ ಮೆರಗು ತಂದಿದ್ದರು. ವಿಶೇಷ ಓಪನ್ ಬಸ್ ಅಲ್ಲೂ ಇವರು ಸಾಗಿದರು.
ಇದರಿಂದ ದಾರಿಯುದ್ದಕ್ಕೂ ಜನ ಈ ತಾರೆಯರನ್ನ ನೋಡೋಕೆ ಸಾಧ್ಯ ಆಯಿತು. ಆದರೆ, ಈ ಸಮಯದಲ್ಲಿ ಕೆಲವು ಅಭಿಮಾನಿಗಳು ಡಿ ಬಾಸ್ ಅಂತ ಕೂಗಿರೋದು ಇದೆ ಅಂತಲೇ ಹೇಳಬಹುದು.
