Tiger Shroff: This is the reason why Tiger Shroff was targeted instead of all the stars! Shocking information revealed : Tiger Shroff: ಸಲ್ಮಾನ್ ಖಾನ್ ಟಾರ್ಗೆಟ್ ಆಗಿದ್ದರೂ ಟೈಗರ್ ಶ್ರಾಫ್ಗೆ ಗುಂಡು ಹಾರಿಸಿದ್ದೇಕೆ? ಅದೊಂದೇ ಕಾರಣದಿಂದ ಈಝಿ ಟಾರ್ಗೆಟ್ ಆಗಿ ಬದಲಾದ್ರಾ ನಟ?
ಟೈಗರ್ ಶ್ರಾಫ್ ಮೇಲೆ ನಡೆದ ದಾಳಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಉಳಿದ ಸ್ಟಾರ್ ನಟರ ಮನೆಯ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ನಟಿ ದಿಶಾ ಪಠಾನಿ ಮನೆಗೂ ಭದ್ರತೆ ಒದಗಿಸಲಾಗಿದೆ. ಹೀಗಿರುವಾಗ ಯಾಕೆ ಟೈಗರ್ ಶ್ರಾಫ್ನನ್ನೇ ಗುರಿಯಾಗಿಸಿದರು ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡೋಕೆ ಶುರುವಾಗಿದೆ.
ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್ ಸೇರಿದಂತೆ ಬಹಳಷ್ಟು ಜನರು ಈ ಒಂದು ಗ್ಯಾಂಗ್ನ ಗುರಿಯಾಗಿದ್ದರು ಎನ್ನಲಾಗಿದೆ. ಹೀಗಿರುವಾಗ ಬಹಳಷ್ಟು ಜನರ ಭದ್ರತೆಯನ್ನೂ ಹೆಚ್ಚಿಸಲಾಗಿದೆ.
ಆದರೆ ಟೈಗರ್ ಶ್ರಾಫ್ನನ್ನೇ ಯಾಕೆ ಗುರಿಯಾಗಿಸಿದರು ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಈಗ ವಿಚಾರಣೆ ವೇಳೆ ಇದರ ಹಿಂದಿನ ಅಸಲಿ ಕಾರಣ ರಿವೀಲ್ ಆಗಿದೆ. ಏನದು ಗೊತ್ತಾ?

ಮೂಲಗಳ ಪ್ರಕಾರ, ಟೈಗರ್ ಶ್ರಾಫ್ ಪ್ರತಿ ಭಾನುವಾರ ಜುಹುವಿನಲ್ಲಿರುವ ಫುಟ್ಬಾಲ್ ಮೈದಾನಕ್ಕೆ ಭೇಟಿ ನೀಡುತ್ತಾರೆ. ಕಡಿಮೆ ಭದ್ರತೆಯನ್ನು ಹೊಂದಿರುತ್ತಾರೆ ಎಂದು ಅಭಿಮಾನಿಗಳ ಪೋಸ್ಟ್ಗಳು ಮತ್ತು ಇನ್ಸ್ಟಾಗ್ರಾಮ್ ಪುಟಗಳ ಮೂಲಕ ತಿಳಿದುಕೊಂಡ ನಂತರ ಶೂಟರ್ಗಳು ಅವರತ್ತ ಗಮನ ಹರಿಸಿದರು.
ಟೈಗರ್ ಶ್ರಾಫ್ಗೆ ಭದ್ರತೆ ಕಡಿಮೆ, ಸುಲಭದ ಟಾರ್ಗೆಟ್ : ಶ್ರಾಫ್ ಕಡಿಮೆ ಸೆಕ್ಯುರಿಟಿಯೊಂದಿಗೆ ಸಾರ್ವಜನಿಕವಾಗಿ ಓಡಾಡುವುದರಿಂದ ಅವರು ಸುಲಭವಾದ ಗುರಿಯಾಗುತ್ತಾರೆ ಎಂದು ಅವರು ನಂಬಿದ್ದರು ಎನ್ನಲಾಗಿದೆ.
ಸಲ್ಮಾನ್ ಖಾನ್ಗೆ ಭದ್ರತೆ ಜಾಸ್ತಿ : 2024 ರಲ್ಲಿ ಸಲ್ಮಾನ್ ಖಾನ್ ಅವರ ನಿವಾಸದಲ್ಲಿ ನಡೆದ ಗುಂಡಿನ ದಾಳಿಯ ನಂತರ ಅವರ ಸುತ್ತ ಭದ್ರತೆಯನ್ನು ಬಲಪಡಿಸಲಾಗಿದೆ. ಮುಂಬೈ ಪೊಲೀಸರು ಅವರಿಗೆ ವೈ-ಪ್ಲಸ್ ಭದ್ರತೆಯನ್ನು ಒದಗಿಸಿದ್ದಾರೆ, ಅವರ ಮನೆಯ ಹೊರಗೆ ದಿನದ 24 ಗಂಟೆಗಳೂ ನಿಯೋಜನೆ ಮತ್ತು ಅವರ ಚಲನವಲನಗಳ ಸಮಯದಲ್ಲಿ ಜೀಪಿನಲ್ಲಿ ಸಶಸ್ತ್ರ ಸಿಬ್ಬಂದಿ ಅವರೊಂದಿಗೆ ಇರುತ್ತಾರೆ.
ಟೈಗರ್ ಶ್ರಾಫ್ ಈಜಿ ಟಾರ್ಗೆಟ್ ಎಂದು ಅವರನ್ನೇ ಗುರಿ ಮಾಡಿದ್ದಾರೆ ಎನ್ನಲಾಗಿದೆ. ಟೈಗರ್ ಶ್ರಾಫ್ ಅವರಿಗೆ ಸೆಕ್ಯುರಿಟಿ ಕಡಿಮೆ ಇದೆ. ಅವರೊಂದಿಗೆ ಭದ್ರತಾ ಸಿಬ್ಬಂದಿ ಇರಲ್ಲ. ಸೆಕ್ಯುರಿಟಿ ಇಲ್ಲ ಎನ್ನುವ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎನ್ನಲಾಗಿದೆ.