Photos: Rakshitha celebrated her husband Prem’s birthday at midnight – ‘ಜೋಗಿ’, ‘ಜೋಗಯ್ಯ’, ‘ಕರಿಯ’, ‘ದಿ ವಿಲನ್’ ಸೇರಿದಂತೆ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕ ಪ್ರೇಮ್ ಅವರ ಹುಟ್ಟುಹಬ್ಬ ಇಂದು. ಅಕ್ಟೋಬರ್ 22ರಂದು ಮಂಡ್ಯದಲ್ಲಿ ಜನಿಸಿದರ. ಇವತ್ತಿಗೂ ಅದೇ ಭಾಷೆಯ ಸೊಗಡನ್ನ ಉಳಿಸಿಕೊಂಡು ಬಂದಿದ್ದಾರೆ. ಪತಿ ಪ್ರೇಮ್ ಬರ್ತ್ ಡೇಯನ್ನ ನಟಿ ರಕ್ಷಿತಾ ಮತ್ತು ಮಗ ಸೂರ್ಯ ಅವರು ಮಧ್ಯರಾತ್ರಿ ಆಚರಿಸಿದ್ದಾರೆ.
1/7
![]()
‘ಯಶಸ್ಸಿನ ವರ್ಷ ನಿನ್ನದಾಗಲಿ ಪ್ರೇಮ್’: ರಕ್ಷಿತಾ ಸ್ಪೇಷಲ್ ವಿಶ್ : ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ರೈತ ಕುಟುಂಬದಲ್ಲಿ ಜನಿಸಿದ ಸಿನಿಮಾ ಪ್ರೇಮಿ ಪ್ರೇಮ್. ‘ಕರಿಯ’ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟರು. ನಟನೆ, ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿದ ಪ್ರೇಮ್ ಅವರು ಅಮ್ಮನ ಭಾವನೆ, ಅವರ ಬದಕಿನ ರೀತಿಯನ್ನ ಸಿನಿಮಾಗಳ ಮೂಲಕ ವೀಕ್ಷಕರಿಗೆ ಕಟ್ಟಿಕೊಟ್ಟರು. ಎಮೋಷನಲಿ ಕನೆಕ್ಟ್ ಆದರು.
‘ಜೋಗಿ’, ‘ಜೋಗಯ್ಯ’, ‘ದಿ ವಿಲನ್, ‘ಕರಿಯ’, ‘ಕೆಡಿ: ದಿ ಡೆವಿಲ್’ ಸೇರಿದಂತೆ 10 ಸಿನಿಮಾಗಳನ್ನ ಇದುವರೆಗೂ ನಿರ್ದೇಶನ ಮಾಡಿದ್ದಾರೆ. ಅವರ 10ನೇ ಸಿನಿಮಾ ಕಿಚ್ಚ ಸುದೀಪ್ ಅವರ ಜೊತೆಗೆ ಮಾಡುತ್ತಿದ್ದು ಆಕ್ಷನ್ಗೆ ಕೊಂಚ ಬ್ರೇಕ್ ಹಾಕಿ, ಮತ್ತೆ ಫ್ಯಾಮಿಲಿ ಎಂಟರ್ಟೈನರ್ಗೆ ಹೊರಳಿದೆ ಜೋಡಿ.
ಇಂದು ಅಕ್ಟೋಬರ್ 22ರಂದು ಪ್ರೇಮ್ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿ ಕೇಕ್ ಕಟ್ ಮಾಡಿಸಿ, ‘ಯಶಸ್ಸಿನ ವರ್ಷ ನಿನ್ನದಾಗಲಿ ಪ್ರೇಮ್’ ಎಂದು ಪತಿಗೆ ಪ್ರೀತಿಯಿಂದ ರಕ್ಷಿತಾ ಪ್ರೇಮ್ ವಿಶ್ ಮಾಡಿದ್ದಾರೆ.
2/7
![]()
ಬರ್ತ್ ಡೇ : ಇಂದು ಅಕ್ಟೋಬರ್ 22ರಂದು ನಿರ್ದೇಶಕ ಪ್ರೇಮ್ ಅವರು ಹುಟ್ಟುಹಬ್ಬ ಆಚರಿಸಿಕೊಂಡರು.
3/7
![]()
ಮಿಡ್ ನೈಟ್ ಸಂಭ್ರಮ : ನಿರ್ದೇಶಕ ಪ್ರೇಮ್ ಬರ್ತ್ ಡೇಗೆ ಕುಟುಂಬ, ಆತ್ಮೀಯರು ವಿಶ್ ಮಾಡಲು ಮಧ್ಯರಾತ್ರಿ ಸೇರಿದ ಕ್ಷಣ.
4/7
![]()
ಅಪ್ಪ-ಮಗ – ರಕ್ಷಿತಾ-ಪ್ರೇಮ್ ದಂಪತಿ ಮಗ ಸೂರ್ಯ. ಅಪ್ಪನಕ್ಕಿಂತ ಉದ್ದ ಬೆಳೆದು ನಿಂತ ಮಗ.
5/7
![]()
ಕುಟುಂಬ – ರಕ್ಷಿತಾ ಪ್ರೇಮ್ ಅವರ ತಾಯಿ, ತಂದೆ, ತಮ್ಮ, ತಮ್ಮನ ಪತ್ನಿ ಹಾಗೂ ಮನೆಯಲ್ಲಿ ಕೆಲಸ ಮಾಡುವ ಹುಡುಗರು ಕಾಣಿಸಿಕೊಂಡ ಕ್ಷಣ.
6/7
![]()
ಮುದ್ದು ಶ್ವಾನಗಳು – ರಕ್ಷಿತಾ ಪ್ರೇಮ್ ಅವರಿಗೆ ಶ್ವಾನಗಳು ಅಂದ್ರೆ ಬಹಳ ಪ್ರೀತಿ, ಪ್ರೇಮ್ ಅವರಿಗೂ ಅಷ್ಟೇ ಪ್ರಾಣಿಗಳು ಅಂದ್ರೆ ಪಂಚಪ್ರಾಣ. ಅವರ ಮಕ್ಕಳ ರೀತಿ ಇರುವು ಮುದ್ದು ಶ್ವಾನಗಳು.
7/7
![]()
ವಯಸ್ಸು – ನಿರ್ದೇಶಕ ಪ್ರೇಮ್ ಅವರಿಗೆ ಸದ್ಯ 49ರ ವಸಂತ.
